Advertisement

ಬಡ್ತಿ ಮೀಸಲಾತಿ ಪರ ತೀರ್ಪು: ವಿಜಯೋತ್ಸವ

10:46 AM May 14, 2019 | Team Udayavani |

ಬೇಲೂರು: ಸುಪ್ರೀಂ ಕೋರ್ಟ್‌ ಬಡ್ತಿ ಮೀಸಲಾತಿ ಪರ ನೀಡಿರುವ ತೀರ್ಪನ್ನು ಸ್ವಾಗತಿಸಿ ಬೇಲೂರು ತಾಲೂಕು ಎಸ್ಸಿ,ಎಸ್ಟಿ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮೂಲಕ ವಿಜಯೋತ್ಸವ ಆಚರಿಸಿದರು.

Advertisement

ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ತಾಲೂಕು ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಶಿವಮರಿಯಪ್ಪ, ದೇಶದಲ್ಲಿ ಶತಮಾನ ಗಳಿಂದಲೂ ತುಳಿತಕ್ಕೊಳಗಾಗಿರುವ ತಳ ಸಮುದಾಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ, ಹಾಗೂ ಶೋಷಣೆಯಿಂದ ಮುಕ್ತಿಗೊಳಿಸುವ ಉದ್ದೇಶದಿಂದ ಎಲ್ಲಾ ಸಮಾಜಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾನವಾದ ಸೌಲಭ್ಯಗಳನ್ನು ಪಡೆಯಬೇಕು. ಮತ್ತು ಸಮ ಸಮಾಜವನ್ನು ನಿರ್ಮಿಸುವುದಕ್ಕಾಗಿ ಸಂವಿಧಾನದಲ್ಲಿ ಮೀಸಲಾತಿಯನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನೀಡಿದ್ದಾರೆ ಎಂದರು.

ಶೋಷಿತರ ಅಭಿವೃದ್ಧಿ ಅಗತ್ಯ: ಸಂವಿಧಾನದ ಲ್ಲಿರುವ ಮೀಸಲಾತಿಯ ತತ್ವಗಳಡಿ ಶೋಷಿತ ತಳ ಸಮುದಾಯ ಗಳಿಗೆ ಮೀಸಲಾತಿ ಕೊಟ್ಟಲ್ಲಿ ಮಾತ್ರ ಅವರನ್ನು ಮೇಲೆತ್ತಬಹುದು ಎಂಬುದನ್ನು ತಿಳಿದ ರಾಜ್ಯ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ ಇದನ್ನು ಅರಿಯದ ಕೆಲ ವರು, ಶೋಷಿತ ತಳ ಸಮುದಾಯಗಳಿಗೆ ಸಂವಿ ಧಾನದಲ್ಲಿ ಸಿಗುತ್ತಿರುವ ಅವಕಾಶಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಹೊರಾಟವನ್ನು ಮಾಡಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು ಎಂದರು.

ಸುಪ್ರೀಂ ಕೋರ್ಟ್‌ಗೆ ಆಭಾರಿ: ಹಿಂಬಡ್ತಿ ಗೊಂಡ ಸಾಕಷ್ಟು ನೌಕರರು ಸಂಕಷ್ಟಕ್ಕೀಡಾಗಿ ದ್ದಲ್ಲದೇ ಸಾವಿಗೀಡಾಗಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಡಿರುವ ಕಾಯ್ದೆ ಅತ್ಯಂತ ಕಾನೂನು ಬದ್ಧವಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಎತ್ತಿ ಹಿಡಿದು, ಬಡ್ತಿ ಮೀಸಲಿಗೆ ಸಮ್ಮತಿಸಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಆಭಾರಿಯಾಗಿದ್ದೇವೆ ಎಂದರು.

ತಕ್ಷಣವೇ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದಂತೆ ಹಿಂಬಡ್ತಿಯಲ್ಲಿರುವ ನೌಕರರಿಗೆ ಮುಂಬಡ್ತಿ ನೀಡಬೇಕು. ಬಡ್ತಿ ಮೀಸಲಾತಿಗಾಗಿ ನೌಕರರ ಬೆಂಬಲಕ್ಕೆ ನಿಂತ ರಾಜ್ಯ ಸರ್ಕಾರ, ಮುಖ್ಯ ಕಾರ್ಯದರ್ಶಿ ಯಾಗಿದ್ದ ರತ್ನಪ್ರಭಾ, ರಾಜ್ಯ, ಜಿಲ್ಲೆ. ತಾಲೂಕು ಎಸ್ಸಿಎಸ್ಟಿ ನೌಕರರ ಸಂಘದ ಪದಾಧಿಕಾರಿ ಗಳಿಗೆ, ಹಾಗೂ ದಲಿತ ಪರ ಸಂಘಟನೆಗಳಿಗೆ, ಪ್ರಗತಿಪರ ಚಿಂತಕರು ಮತ್ತು ಸಂಘಟನೆಗಳಿಗೆ ತಾಲೂಕು ಎಸ್ಸಿಎಸ್ಟಿ ನೌಕರರ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

Advertisement

ಈ ಸಂದರ್ಭದಲ್ಲಿ ತಾಲೂಕು ಎಸ್ಸಿ,ಎಸ್ಟಿ ನೌಕರರ ಸಂಘದ ಉಪಾಧ್ಯಕ್ಷ ತಾರಾನಾಥ ನಾಯಕ್‌, ನಿರ್ದೇಶಕರಾದ ಸಂಪತ್‌, ಮಂಜಯ್ಯ, ದೇವರಾಜ್‌, ಜಯಪ್ರಕಾಶ್‌, ಶಾಂತಮ್ಮ, ನಾಗರಾಜು, ಗುರುರಾಜ್‌, ಪುಟ್ಟರಾಜು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next