ಚಾಮರಾಜನಗರ: ಚಾಮರಾಜನಗರ ಜಿಲ್ಲಾವ್ಯಾಪ್ತಿಯಲ್ಲಿ ಅರ್ಹ ವಿದ್ಯಾರ್ಹತೆ ಹೊಂದಿರುವ 8 ಡಿ ಗ್ರೂಪ್ ನೌಕರರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಹಾಗೂ 6 ಡಿ ಗ್ರೂಪ್ ನೌಕರರಿಗೆ ಪ್ರಯೋಗಶಾಲಾ ಸಹಾಯಕರಾಗಿ ಮುಂಬಡ್ತಿ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ. ಜವರೇಗೌಡ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಭಾಂಗಣದಲ್ಲಿ ನಡೆದ ಇಲಾಖೆಯ ಮುಂಬಡ್ತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಡಿ ದರ್ಜೆ ಹುದ್ದೆಯಿಂದ ಮುಂಬಡ್ತಿ ಪಡೆದನೌಕರರು ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿಕ್ರಿಯಾಶೀಲರಾಗಲು ಅನುಕೂಲವಾಗುವಂತೆ ಪ್ರಥಮಾದ್ಯತೆ ಮೇರೆಗೆ ವೃತ್ತಿಬುನಾದಿ ತರಬೇತಿಗೆ ನಿಯೋಜಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಬಡ್ತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಡ್ತಿ ಹೊಂದಿದ ನೌಕರರು ಇಲಾಖಾ ಕಾರ್ಯಕ್ರಮಗಳನ್ನುಕಚೇರಿಯ ಹಾಗೂ ಶಾಲಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನೌಕರರಿಗೆ ತಿಳಿಸಿ ಮುಂಬಡ್ತಿ ಪಡೆದ ನೌಕಕರಿಗೆ ಶುಭ ಹಾರೈಸಿದರು.
ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಪಿ. ಮಂಜುನಾಥ್, ನಾರಾಯಣ್, ಜಿಲ್ಲಾ ಬೋಧಕೇತರ ಸಂಘದ ಅಧ್ಯಕ್ಷ ಕೆ.ಬಿ. ಆನಂದ್, ಪ್ರಧಾನ ಕಾರ್ಯ ದರ್ಶಿ ಎಂ.ಸಿ. ಮಂಜುನಾಥ್, ಖಜಾಂಚಿ ನಂದೀಶ್ವರ್, ಮುಂಬಡ್ತಿ ಸಮಿತಿಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಪತ್ರಾಂಕಿತ ವ್ಯವಸ್ಥಾಪಕ ಮಲ್ಲಿಕಾರ್ಜುನಸ್ವಾಮಿ,ಅಧೀಕ್ಷಕಿ ಜಮುನಾರಾಣಿ, ಪೂರ್ಣಿಮಾ, ಶಿವಕುಮಾರ್,
ಜಿಲ್ಲಾ ಕಚೇರಿ ಘಟಕದ ಅಧ್ಯಕ್ಷ ರವಿಕುಮಾರ್, ಆದಿತ್ಯ, ಮನುಜಕುಮಾರ್, ಶಶಿಕುಮಾರ್ ಇತರರಿದ್ದರು