Advertisement

ಎಲೆಕ್ಟ್ರಿಕ್‌ ಆಟೋ ಬಳಕೆಗೆ ಉತ್ತೇಜನ

12:02 PM Jul 29, 2018 | |

ಬೆಂಗಳೂರು: ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಪೆಟ್ರೋಲ…, ಡೀಸೆಲ… ಚಾಲಿತ ಆಟೋ ರಿಕ್ಷಾಗಳ ಬದಲಿಗೆ ವಿದ್ಯುತ್‌ ಚಾಲಿತ ಆಟೋರಿಕ್ಷಾ ಬಳಕೆಗೆ ಹೆಚ್ಚು ಪರವಾನಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಅನಾರೋಗ್ಯಕ್ಕೆ ಈಡಾಗುವವರು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ.

ಇತ್ತೀಚಿನ ವರದಿ ಪ್ರಕಾರ ನಗರದಲ್ಲಿ ಪ್ರತಿ ವರ್ಷ 4 ಸಾವಿರಕ್ಕೂ ಅಧಿಕ ನಾಗರಿಕರು ಮಾಲಿನ್ಯದ ದುಷ್ಪರಿಣಾಮದಿಂದಲೇ ಮೃತಪಟ್ಟಿದ್ದಾರೆ. ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿದ್ಯುತ್‌ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಡೀಸೆಲ್‌ ಆಟೋಗಳಿಗೆ ಅನುಮತಿ ನೀಡಬೇಕೆ, ಬೇಡವೇ ಎಂಬ ವಿಷಯ ಚರ್ಚೆ ಹಂತದಲ್ಲಿದೆ. ಹೀಗಾಗಿ, ಎಲೆಕ್ಟ್ರಿಕ್‌ ಆಟೋಗಳನ್ನು ಬಳಸಲು ಮುಂದಾದರೆ ಈಗ ಬೇಡಿಕೆಯಿರುವ 30 ಸಾವಿರ ಅರ್ಜಿಗಳ ಜತೆಗೆ ಹೆಚ್ಚುವರಿ ಆಟೋಗಳಿಗೆ ತಕ್ಷಣವೇ ಪರವಾನಗಿ ನೀಡಲು ಸರ್ಕಾರ ಸಿದ್ಧವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next