ಹೊಸದಿಲ್ಲಿ: ಸ್ಥಳೀಯ ಉತ್ಪನ್ನಗಳ ಬಳಕೆ ಮತ್ತು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಪ್ರಸಕ್ತ ಸಾಲಿನ “ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಗೌರವಕ್ಕೆ ಪಾತ್ರರಾದವರ ಜತೆ ಸೋಮವಾರ ಸಂವಾದ ನಡೆಸಿದಾಗಲೂ ಈ ಅಂಶ ಪ್ರಸ್ತಾಪಿಸಿದ್ದಾರೆ.
ನೇತಾಜಿ ಸುಭಾಶ್ಚಂದ್ರಬೋಸ್ ಅವರ ಹಾಲೋಗ್ರಾಂ ಪ್ರತಿಮೆ ಅನಾವರಣ ಪ್ರಸ್ತಾಪಿಸಿದ ಪ್ರಧಾನಿ “ಕರ್ತವ್ಯ ಮತ್ತು ದೇಶವೇ ಮೊದಲು ಎಂಬ ತತ್ವವನ್ನು ನೇತಾಜಿಯಿಂದ ಕಲಿಯ ಬಹುದು. ಅದಕ್ಕಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಾಗಿದೆ’ ಎಂದರು.
ಸ್ಥಳೀಯವಾಗಿ ಉತ್ಪಾದನೆಗೊಳ್ಳುವ ವಸ್ತುಗಳಿಗೆ ಹೆಚ್ಚಿನ ಪ್ರಚಾರ ಮತ್ತು ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮ ತಮ್ಮ ಮನೆಗಳಲ್ಲಿ ಬಳಕೆ ಮಾಡುತ್ತಿರುವ ವಿದೇಶಿ ವಸ್ತುಗಳನ್ನು ಪಟ್ಟಿ ಮಾಡಬೇಕು. ಕೇಂದ್ರದ ಯೋಜನೆಗಳು ಯುವಕರನ್ನು ಕೇಂದ್ರೀಕರಿಸಿಯೇ ಜಾರಿಯಾಗುತ್ತಿದೆ ಎಂದರು. ಜತೆಗೆ ಜಗತ್ತಿನ ಪ್ರಮುಖ ಕಂಪೆನಿಗಳ ಮುಖ್ಯಸ್ಥರು ಭಾರತೀಯರೇ ಆಗಿದ್ದಾರೆ ಎಂದರು.
ಇದನ್ನೂ ಓದಿ:ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ
ಡಿಜಿಟಲ್ ಪ್ರಮಾಣ ಪತ್ರ
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಿಗೆ ಪ್ರಸಕ್ತ ಸಾಲಿನಿಂದ ಡಿಜಿಟಲ್ ಪ್ರಮಾಣ ಪತ್ರ ಸಿಗಲಿದೆ. ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಪ್ರಶಸ್ತಿಯನ್ನು ನೀಡಲಾಗಿದೆ.