Advertisement

ಹೈಬ್ರಿಡ್‌ಗೂ ಕೊಡಿ ಉತ್ತೇಜನ

06:00 AM Sep 09, 2018 | Team Udayavani |

ನವದೆಹಲಿ: ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರ್ಕಾರ ಹೈಬ್ರಿಡ್‌ ವಾಹನಗಳಿಗೂ ಪ್ರೋತ್ಸಾಹಧನ ನೀಡಬೇಕು ಎಂದು ವಾಹನ ಉದ್ಯಮ ಆಗ್ರಹಿಸಿದೆ. ಹೈಬ್ರಿಡ್‌ ವಾಹನಗಳಿಗೆ ಪ್ರೋತ್ಸಾಹಧ ಕಡಿತಗೊಳಿಸಿ ಮೊದಲ ಹಂತದ ಎಲೆಕ್ಟ್ರಿಕ್‌ ವಾಹನ ನೀತಿ ಹೊರಡಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಚಾರ್ಜಿಂಗ್‌ ವ್ಯವಸ್ಥೆ ಉತ್ತಮಗೊಳ್ಳುವವರೆಗೂ ಹೈಬ್ರಿಡ್‌ ವಾಹನಗಳು ಹಾಗೂ ತೈಲ ಆಧರಿತ ವಾಹನಗಳು ಚಾಲ್ತಿಯ ಲ್ಲಿರುತ್ತವೆ. ಅಲ್ಲದೆ ಹೈಬ್ರಿಡ್‌ ವಾಹನಗಳು ಶೇ. 45ರಷ್ಟು ಇಂಧನ ಆಮದು ವೆಚ್ಚ ಕಡಿಮೆ ಮಾಡಲಿವೆ ಎಂದು ಅಟೊಮೊಬೈಲ್‌ ಉದ್ಯಮದ ಮುಖಂಡರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next