Advertisement

ಪ್ರಧಾನಿಯಿಂದ ಕುಶಲಕರ್ಮಿಗಳಿಗೆ ಉತ್ತೇಜನ: ಗಂಗಾಧರ

05:34 PM Dec 17, 2018 | Team Udayavani |

ಚಿತ್ರದುರ್ಗ: ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಕರಕುಶಲಕರ್ಮಿಗಳನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದ್ದಾರೆ ಎಂದು ಹಿಂದೂಪುರದ ಗೋಲ್ಡ್‌ಸ್ಮಿತ್‌ ಅಕಾಡೆಮಿಯ ಗಂಗಾಧರ ಆಚಾರ್‌ ಹೇಳಿದರು.

Advertisement

ನಗರದ ಬುರುಜನಹಟ್ಟಿ ರಸ್ತೆಯ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಮಧುರೈನ ಗೋಲ್ಡ್‌ಸ್ಮಿತ್‌ ಅಕಾಡೆಮಿ ಪ್ರೈವೇಟ್‌ ಲಿಮಿಟೆಡ್‌, ಜೆಮ್‌ ಆ್ಯಂಡ್‌ ಜ್ಯುವೆಲ್ಲರಿ ಸ್ಕಿಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಹಾಗೂ ಚಿತ್ರದುರ್ಗ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಭಾನುವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಹಾಗೂ ಪರೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿರುವ ಮೋದಿ, ಗೋಲ್ಡ್‌ಸ್ಮಿತ್‌, ಬ್ಲಾಕ್‌ಸ್ಮಿತ್‌, ಕಾಪ್ಲೆಂಟರ್‌, ಫೋಟೊಗ್ರಾಫರ್‌
ಸೇರಿದಂತೆ ಮತ್ತಿತರ ಕುಶಲಕರ್ಮಿಗಳನ್ನು ಗುರುತಿಸಿ ತರಬೇತಿ ಕೊಡಿಸಿ ಪ್ರಮಾಣಪತ್ರ ನೀಡುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ತರಬೇತಿ ಪಡೆದು ಅಧಿಕೃತ ಪ್ರಮಾಣಪತ್ರ ಹೊಂದಿದ ಗೋಲ್ಡ್‌ಸ್ಮಿತ್‌ಗಳಿಗೆ ಬ್ಯಾಂಕ್‌ಗಳಲ್ಲಿ, ಕಾರ್ಪೊರೆಟ್‌ ಜ್ಯುವೆಲ್ಲರಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ. ಅಲ್ಲದೆ ಸಾಲ ಸೌಲಭ್ಯ ಕೂಡ ದೊರೆಯಲಿದೆ ಎಂದರು.

ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಎನ್‌. ಸತ್ಯನಾರಾಯಣ ಮಾತನಾಡಿ, ಚಿನ್ನ, ಬೆಳ್ಳಿ ಕುಶಲಕರ್ಮಿಗಳನ್ನು ಯಾವ ಸರ್ಕಾರವೂ ಗುರುತಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮನ್ನು ಗುರುತಿಸಿ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ. ಜಿಲ್ಲೆಯ ಆರು ತಾಲೂಕುಗಳಿಂದ 250ಕ್ಕೂ ಹೆಚ್ಚಿನ ಚಿನ್ನಾಭರಣ ವರ್ತಕರು ಕಳೆದ ಮೂರು ದಿನಗಳಿಂದ ನಡೆದ ತರಬೇತಿಯಲ್ಲಿ ಪಾಲ್ಗೊಂಡಿದ್ದರು ಎಂದರು. ತಮಿಳುನಾಡಿನ ಗೋಲ್ಡ್‌ಸ್ಮಿತ್‌ ಅಕಾಡೆಮಿಯ ಮಣಿವಾಸನ್‌ ಮತ್ತು ನವನೀತ್‌, ಕೋಲ್ಕತ್ತಾದ ಶಶಾಂಕ್‌, ಮಂಗಳೂರಿನ ದಾಮೋದರ್‌, ಚಿತ್ರದುರ್ಗ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ. ಶಂಕರಾಚಾರ್‌, ಯುವ ಸಮಾಜದ ಕಾರ್ಯಾಧ್ಯಕ್ಷ ಎಂ. ಶಂಕರಮೂರ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next