Advertisement

Music director K J Joy: ಖ್ಯಾತ ಸಂಗೀತ ನಿರ್ದೇಶಕ ಕೆಜೆ ಜಾಯ್ ನಿಧನ

03:43 PM Jan 15, 2024 | Team Udayavani |

ಚೆನ್ನೈ: ಮಲಯಾಳಂ ಸಿನಿರಂಗದ ಹಿರಿಯ ಸಂಗೀತ ನಿರ್ದೇಶಕ ಕೆ.ಜೆ ಜಾಯ್(77) ಸೋಮವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Advertisement

ಕೆ.ಜೆ ಜಾಯ್ ಕಳೆದ ಕೆಲ ಸಮಯದಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ  ಹಿಡಿದಿದ್ದರು ಎಂದು ತಿಳಿದು ಬಂದಿದೆ.

1975 ರಿಂದ ವೃತ್ತಿ ಜೀವನ ಆರಂಭಿಸಿದ ಅವರು, ಕೆ.ಜೆ ಜಾಯ್ ಅವರು ಎಲೆಕ್ಟ್ರಾನಿಕ್ ಉಪಕರಣಗಳ ಪ್ರಮುಖ ಬಳಕೆಯಿಂದಾಗಿ ಮಲಯಾಳಂ ಚಿತ್ರರಂಗದ ಮೊದಲ ‘ಟೆಕ್ನೋ ಮ್ಯೂಸಿಷಿಯನ್’ ಎಂದು ಕೂಡ ಕರೆಯಲ್ಪಟ್ಟಿದ್ದರು. ಮಲಯಾಳಂ ಚಿತ್ರರಂಗಕ್ಕೆ ಕೀಬೋರ್ಡ್ ನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪ್ರಸಿದ್ಧ ಸಂಗೀತಗಾರ ಎಂಎಸ್ ವಿಶ್ವನಾಥನ್ ಅವರ ಸಂಗೀತ ತಂಡದಲ್ಲಿ ಅಕಾರ್ಡಿಯನಿಸ್ಟ್ ಗುರುತಿಸಿಕೊಂಡ ಅವರು, 1975 ರಲ್ಲಿ ಬಂದ ʼಲವ್ ಲೆಟರ್ʼ  ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ವೃತ್ತಿ ಬದುಕನ್ನು ಆರಂಭಿಸಿದರು. ವೃತ್ತಿಜೀವನದ ಅವಧಿಯಲ್ಲಿ ಕೆ ಜೆ ಜಾಯ್ ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಬ್ಲಾಕ್‌ಬಸ್ಟರ್‌ಗಳಾಗಿವೆ.

ಕೆಜೆ ಯೇಸುದಾಸ್ ಜೊತೆ ಕೆ ಜೆ ಜಾಯ್ ಅವರು ಜೊತೆಯಾಗಿ ಹತ್ತಾರು ಸಿನಿಮಾಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ. 1979 ರ ʼಅನುಪಲ್ಲವಿʼ ಸಿನಿಮಾದ ʼಎನ್ ಸ್ವರಂʼ ಮತ್ತು ʼಒರು ರಾಗ ಪಲ್ಲವಿʼ ಹಾಡನ್ನು ಸಂಯೋಜಿಸಿದ್ದಾರೆ. 1981 ರಲ್ಲಿ ಬಂದ ʼಕರಿಂಪೂಚʼ ಸಿನಿಮಾದ ಲಾವಣ್ಯ ದೇವತಾಯಲ್ಲೇ ಹಾಡು, 1984ರಲ್ಲಿ ಬಂದ ʼಕುರಿಸುಯುಧಂʼ ಚಿತ್ರದ ʼಕೂಡರಂ ವೇದಿಯುಮೀʼ ಸಿನಿಮಾದ ಹಾಡನ್ನು ಸಂಯೋಜಿಸಿದ್ದಾರೆ.

Advertisement

ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next