Advertisement

ಸಾಮೂಹಿಕ ಪ್ರಾರ್ಥನೆ ನಿಷೇಧ

05:47 PM Apr 21, 2020 | Suhan S |

ಕೊಪ್ಪಳ: ಕೋವಿಡ್ 19 ವೈರಸ್‌ ನಿಯಂತ್ರಣಕ್ಕಾಗಿ ದರ್ಗಾ ಮತ್ತು ಮಸೀದ್‌ಗಳಲ್ಲಿ ಮುಂಬರುವ ರಂಜಾನ್‌ ಹಬ್ಬದ ನಿಮಿತ್ತ ಪ್ರಾರ್ಥನೆ ಹಾಗೂ ಸಭೆ ಕೈಗೊಳ್ಳುವುದನ್ನು ಮೇ 3ರ ವರೆಗೆ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬೂಲ್‌ ಪಾಷಾ ತಿಳಿಸಿದ್ದಾರೆ.

Advertisement

ರಂಜಾನ್ ಹಬ್ಬದ ವೇಳೆ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರ ನೀಡುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ರಂಜಾನ್‌ ಮಾಸಾಚರಣೆಯಲ್ಲಿ ಮಸೀದಿ ಹಾಗೂ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಪ್ರತಿ ದಿನದ 5 ಬಾರಿ ನಮಾಜಿನ ಜೊತೆಗೆ ಶುಕ್ರವಾರದ ಮತ್ತು ತರಾವೆ ನಮಾಜ್‌ ಅನ್ನು ಸಹ ಮಸೀದಿ, ದರ್ಗಾಗಳಲ್ಲಿ ಮಾಡಬಾರದು. ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆ ಕುರಿತು ಸಾರ್ವಜನಿಕ ಮಾಹಿತಿ ನೀಡಬಾರದು. ಕಡಿಮೆ ಧ್ವನಿವರ್ಧಕದ ಮೂಲಕ ಅಜಾನ್‌ ಕೂಗುವದು ಮತ್ತು ಮೌಜ್ಜನ್‌ ಅಥವಾ ಮಸೀದಿಯ ಪೇಶ್‌ ಇಮಾಮ್‌ ಉಪವಾಸದ (ರೋಜಾ) ಕುರಿತು ಆರಂಭ ಮತ್ತು ಮುಕ್ತಾಯಗೊಳ್ಳುವ ಬಗ್ಗೆ ಮಾತ್ರ ಹೇಳಬೇಕು. ಯಾವುದೇ ರೀತಿಯ ಸಾರ್ವಜನಿಕ ಪ್ರವಚನ ನೀಡಬಾರದು. ಇಫ್ತಿಯಾರ್‌ ಕೂಟ, ಭೋಜನ ಕೂಟ ನಡೆಸುವಂತಿಲ್ಲ. ಮಸೀದಿ ಮೊಹಲ್ಲಾಗಳಲ್ಲಿ ಯಾವುದೇ ರೀತಿಯ ತಂಪು ಪಾನೀಯ, ಜ್ಯೂಸ್‌, ಗಂಜಿ ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾದ ಸುತ್ತ ಮುತ್ತ ಯಾವುದೇ ಉಪಹಾರದ ಅಂಗಡಿಗಳನ್ನು ಹಾಕುವುದನ್ನು ಸಹ ನಿಷೇಧಿಸಿದೆ. ಸರ್ಕಾರ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next