Advertisement

ಎಂಜಲು ಬಳಕೆ ನಿಷೇಧ ಕ್ರಮ ಅಸಮರ್ಪಕ

12:30 AM May 22, 2020 | Sriram |

ಸಿಡ್ನಿ: ಅನಿಲ್‌ ಕುಂಬ್ಳೆ ಸಾರಥ್ಯದ ಐಸಿಸಿ ಕ್ರಿಕೆಟ್‌ ಸಲಹಾ ಸಮಿತಿಯು ಕೋವಿಡ್ 19 ವೈರಸ್‌ ಭೀತಿ ಹಿನ್ನೆಲೆಯಲ್ಲಿ ಚೆಂಡಿನ ಹೊಳಪಿ ಗಾಗಿ ಎಂಜಲು ಬಳಕೆ ಮಾಡುವುದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ.

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌ ಆಟಗಾರರಿಗೆ ಕೋವಿಡ್ 19 ಸೋಂಕು ಇಲ್ಲ ಎಂದಾದರೆ ಎಂಜಲು ಮತ್ತು ಬೆವರು ಎರಡನ್ನೂ ಬಳಕೆ ಮಾಡಲು ಅನುಮತಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಬ್ಬ ಆಟಗಾರನನ್ನು ಕೋವಿಡ್‌- 19 ತಪಾಸಣೆಗೆ ಒಳಪಡಿಸಿ ಅಗತ್ಯವಿರುವ 15 ದಿನಗಳ ಕ್ವಾರಂಟೈನ್‌ ಬಳಿಕವಷ್ಟೇ ಪಂದ್ಯಗಳನ್ನು ಆಡಲು ಅನುವು ಮಾಡಿಕೊಡುವ ಬಗ್ಗೆ ಆಲೋಚನೆ ನಡೆದಿದೆ. ಹೀಗಿರುವಾಗ ವೈರಸ್‌ ಇಲ್ಲದ ಆಟಗಾರರು ಎಂಜಲು ಮತ್ತು ಬೆವರು ಬಳಕೆ ಮಾಡಬಹುದಲ್ಲವೆ ಎಂಬುದು ಹೇಡನ್‌ ವಾದವಾಗಿದೆ.

ಎಂಜಲು ಹಚ್ಚುವುದು ಬೇಡ ಬೆವರು ಬಳಕೆ ಮಾಡಬಹುದು ಎಂದು ಐಸಿಸಿ ಕ್ರಿಕೆಟ್‌ ಸಲಹಾ ಸಮಿತಿ ನೀಡಿರುವ ಶಿಫಾರಸು ವಿಚಿತ್ರವಾಗಿದೆ. ಸೋಂಕು ಬೆವರಿನಿಂದಲೂ ಹರಡಬಹುದು. ಹೀಗಿರುವಾಗ ಈ ನಿಯಮ ಪರಿಪೂರ್ಣವಾಗಿಲ್ಲ ಎಂದು ಹೇಡನ್‌ ಹೇಳಿದ್ದಾರೆ.

ಧೋನಿ ಕಂಬ್ಯಾಕ್‌ ಕಷ್ಟಕರ
ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂಬ್ಯಾಕ್‌ ಮಾಡುವುದು ಕಷ್ಟ. ಕೋವಿಡ್ 19 ವೈರಸ್‌ ಧೋನಿ ಭವಿಷ್ಯವನ್ನು ಅಂತ್ಯಗೊಳಿಸಿದೆ ಎಂದಿದ್ದಾರೆ.

Advertisement

ಇಲ್ಲಿ ಸಾಮರ್ಥ್ಯದ ಪ್ರಶ್ನೆಯಿಲ್ಲ. ಟಿ20 ವಿಶ್ವಕಪ್‌ ಟೂರ್ನಿ ಯಾವಾಗ ಆರಂಭವಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಟೂರ್ನಿ ಆಯೋಜನೆ ತಡವಾದಷ್ಟು ಧೋನಿ ಭವಿಷ್ಯ ಕ್ಷೀಣಿಸಲಿದೆ. ಅಂದಹಾಗೆ ಧೋನಿ ನಿವೃತ್ತಿ ಹೊಂದುವುದಾದರೆ ಐಪಿಎಲ್‌ ಅಥವಾ ಅಂತಾರಾಷ್ಟ್ರೀಯ ಟೂರ್ನಿ ಯಾವುದರÇÉಾದರೂ ಆಗಬಹುದು. ಇದು ಅವರಿಗೆ ಬಿಟ್ಟಿದ್ದು. ಕ್ರೀಡೆಗೆ ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಮಾತ್ರ ಅವರಿಗೆ ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next