Advertisement

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ

01:06 PM Mar 24, 2017 | Team Udayavani |

ಹರಪನಹಳ್ಳಿ: ದೇಶದಲ್ಲಿ ಮಾಂಸ ರಫ್ತು ಮಾಡಿ ಹಣ ಮಾಡುವಂತಹ ದಂಧೆ ನಡೆಯುತ್ತಿದ್ದು, 33 ಕೋಟಿಗೂ ಹೆಚ್ಚು ದೇವತೆಗಳಿರುವ ಗೋ-ಹತ್ಯೆ ಮಾಡುವುದನ್ನು ತಡೆಯಲು ಗೋ-ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಪಂಚಪೀಠದ ಉಜ್ಜಯಿನಿ ಪೀಠಾಧ್ಯಕ್ಷ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು. 

Advertisement

ತಾಲೂಕಿನ ನಿಚ್ಚವನಹಳ್ಳಿ ಗ್ರಾಮದಲ್ಲಿ ಗುರುವಾರ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಪಟ್ಟಾಧಿಧಿಕಾರದ ಸಂಭ್ರಮಾಚರಣೆ ಮತ್ತು ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಆಶೀವರ್ಚನ ನೀಡಿದರು. ಜನ್ಮ ನೀಡುವ ತಾಯಿ ಮಗುವಿಗೆ 2 ವರ್ಷ ಹಾಲು ಕುಡಿಸಬಹುದು ಆದರೆ ಗೋವು ಸಾಯುವವರಿಗೂ ಹಾಲು ಕೊಡುತ್ತದೆ. 

ಅಂತಹ ಗೋ ಮಾತೆಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ವಿದೇಶಕ್ಕೆ ರಪು¤ ಮಾಡಿ ಅದರಲ್ಲಿ ಬದುಕುವುದು ವಿಪರ್ಯಾಸ ಎಂದು ವಿಷಾಧಿಸಿದರು. ಬರಗಾಲ ಆವರಿಸಿರುವುದರಿಂದ ರೈತರು ಸರ್ಕಾರವನ್ನು ದೂರುವ ಬದಲು ವೈಚಾರಿಕತೆ ಬೆಳೆಸಿಕೊಂಡು ಗಿಡಗಳನ್ನು ನೆಟ್ಟು ಅವುಗಳನ್ನು ರಕ್ಷಿಸಿಸುವ ಸಂಕಲ್ಪ ತೊಡಬೇಕು.

ಮರಗಳು ಇದ್ದಲ್ಲಿ ಮಳೆ ಬರುತ್ತದೆ, ಆಮ್ಲಜನಕ ಸಿಗುತ್ತದೆ ಎಂದ ಅವರು ಬದುಕಿನಲ್ಲಿ ಅನ್ನವನ್ನು ಆರೋಗ್ಯವಾಗಿ ಶರೀರಕ್ಕೆ ಕೊಡುವ ಗುಣ ಇರಬೇಕು. ಮನುಷ್ಯ ಊಟ ಮಾತ್ರ ಸಾಕು ಎನ್ನುತ್ತಾನೆ, ಬೇಕು ಎನ್ನುವುದನ್ನು ಬಿಟ್ಟು ಸಾಕು ಎನ್ನುವ ಗುಣ ಬೆಳೆದಲ್ಲಿ ಬದುಕು ಬಂಗಾರವಾಗಲಿದೆ ಎಂದರು. 

ಹಾವೇರಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ಮಾತನಾಡಿ, ಮನುಷ್ಯನ ಬದುಕನ್ನು ಕಟ್ಟಿ ಕೊಡುವ ಚಿಂತನಾ ಸಮಾವೇಶ ಇದಾಗಿದೆ. ಶರಣರ ಬದುಕು ಆಡಂಬರವಲ್ಲ, ಆದರ್ಶವಾಗಿದೆ. ಶರಣರ ಚರಿತ್ರೆ ಬರೀ ಕೇಳುವುದಲ್ಲ, ಅವರ ಹಾದಿಯಲ್ಲಿ ನಡೆಯಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಲ್ಲಿ ಸಂಸ್ಕಾರವಂತರಾಗಿ ಬೆಳೆಯುತ್ತಾರೆ ಎಂದು ಹೇಳಿದರು. 

Advertisement

ಹಡಗಲಿ ಗವಿಮಠದ ಡಾ| ಹಿರಿಶಾಂತವೀರ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಿ ಸದ್ಗುರು ಹಾಲಸ್ವಾಮಿಗಳು, ಹಗರಿಬೊಮ್ಮನಹಳ್ಳಿ ಹಾಲಸ್ವಾಮೀಜಿ, ಚನ್ನಮಲ್ಲಯ್ಯ ದೇವರು, ಪ್ರಗತಿಪರ ಸಂಘಟನೆ ಮುಖಂಡ ಎ.ಎಂ. ವಿಶ್ವನಾಥ, ಕೆ.ಪರಶುರಾಮಪ್ಪ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next