Advertisement

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ

08:38 AM Jul 27, 2020 | Suhan S |

ದೇವನಹಳ್ಳಿ: ಕೋವಿಡ್ ಸೋಂಕು ಹೆಚ್ಚಳದಿಂದಾಗಿ ಬಕ್ರಿದ್‌ ಹಬ್ಬ ಸರಳವಾಗಿ ಆಚರಿಸಲು ಹಾಗೂ ಮಸೀದಿಗಳಲ್ಲಿಯೇ ನಮಾಜ್‌ ಸಲ್ಲಿಸಲು ಅವಕಾಶ ನೀಡಲಾಗಿದೆ.

Advertisement

ಕರಾವಳಿ ಭಾಗ ಜು.31ರಂದು ಹಾಗೂ ರಾಜ್ಯಾದ್ಯಂತ ಆ.1ರಂದು ಆರಿಸಲಾಗುವ ಬಕ್ರೀದ್‌ ಹಬ್ಬ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನಗಳಲ್ಲಿ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಷೇಧಿಸಿದೆ. ಈದ್ಗಾಗಳಲ್ಲಿ ಪ್ರಾರ್ಥನೆ ಮಾಡಲು ಕಾನೂನು ಸುವ್ಯವಸ್ಥೆ/ಮಳೆ ಅಥವಾ ಇತರೆ ಯಾವುದೇ ತೊಡಕುಗಳಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಮಸೀದಿಗಳಲ್ಲಿಯೇ ಈದ್‌ ನಮಾಜ್‌(ಪ್ರಾರ್ಥನೆ)ಯನ್ನು ಸಲ್ಲಿಸಲು ಅವಕಾಶ ಇದೆ. ಕೋವಿಡ್‌-19 ಇರುವುದರಿಂದ ಸ್ಥಳೀಯ ಮಸೀದಿಗಳಲ್ಲಿ ಈದ್‌ ನಮಾಜ್‌ ನಿರ್ವಹಿಸುವುದರಿಂದ ಯಾವುದೇ ಚ್ಯುತಿ ಬರುವುದಿಲ್ಲವೆಂದು ಧಾರ್ಮಿಕರ ಗುರುಗಳ ಅಭಿಪ್ರಾಯವಾಗಿದೆ.

ಮುನ್ನೆಚ್ಚರಿಕಾ ಕ್ರಮ ಪಾಲನೆ: ಪ್ರಾರ್ಥನಾ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದು. ನಮಾಜ್‌ ನಿರ್ವಹಿಸುವವರು ಕನಿಷ್ಠ 6 ಅಡಿ ಅಂತರ ಕಾಯ್ದು ಕೊಳ್ಳುವುದು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡುವುದು. ಕೈ ಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸುವುದು. ಮಸೀದಿಗಳಲ್ಲಿನ ಧಾರ್ಮಿಕ ಗ್ರಂಥ ಮುಟ್ಟುವಂತಿಲ್ಲ. ತಮ್ಮ ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್‌) ಕಡ್ಡಾಯವಾಗಿ ತರುವುದು. ಹಸ್ತಲಾಘವ, ಆಲಿಂಗನ ಮಾಡ ಬಾರದು. ಅಪರಿಚಿತರ ಪ್ರಾರ್ಥನೆ ಸಲ್ಲಿಸಲು ಮಸೀ ದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನಹರಿಸುವುದು ಮಸೀದಿಗಳಲ್ಲಿ ಆಡಳಿತ ಮಂಡಳಿ ಪಾಲಿಸಬೇಕಾಗುತ್ತದೆ.

ಬಕ್ರೀದ್‌ ಮುಸ್ಲಿಮರ ಪ್ರಮುಖಹಬ್ಬಗಳಲ್ಲಿ ಒಂದಾಗಿದೆ. ತ್ಯಾಗ- ಬಲಿದಾನದ ಸಂಕೇತವಾದ ಹಬ್ಬವನ್ನು ಈ ಬಾರಿ ಕೋವಿಡ್‌ ಇರುವುದರಿಂದ ಈದ್ಗಾ ಮೈದಾನದಲ್ಲಿ ಆಚರಿಸಲಾಗುವುದಿಲ್ಲ. ಬದಲಾಗಿ ಮಸೀದಿಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲಾಗುತ್ತದೆ.  ಅಬ್ದುಲ್‌ ಖುದ್ದೂಸ್‌ ಪಾಷಾ,  ಜಾಮೀಯ ಮಸೀದಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next