Advertisement

25 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ :ದಂಡ

05:50 PM Feb 05, 2021 | Team Udayavani |

ಕುಣಿಗಲ್‌: ಪಟ್ಟಣದ ವಿವಿಧ ಪ್ರದೇಶದಲ್ಲಿ ದಾಳಿ ನಡೆಸಿದ ಪುರಸಭಾ ಪರಿಸರ ಎಂಜಿನಿಯರ್‌ ಚಂದ್ರಶೇಖರ್‌ ನೇತೃತ್ವದ ತಂಡ ವಿವಿಧ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆದು,ದಂಡ ವಿಧಿಸಿ, ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

Advertisement

ಪುರಸಭಾ ಅಧ್ಯಕ್ಷ ಎಸ್‌.ಕೆ.ನಾಗೇಂದ್ರ, ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್‌ ಮಾರ್ಗದರ್ಶನದಲ್ಲಿ ಪರಿಸರ ಎಂಜಿನಿಯರ್‌ ಚಂದ್ರಶೇಖರ್‌, ಕಿರಿಯ ಆರೋಗ್ಯ ನಿರೀಕ್ಷಕರು ಮಮತಾ ಅವರ ತಂಡ ಪಟ್ಟಣದ ತುಮಕೂರು ರಸ್ತೆ ಹಾಗೂ ಹುಚ್ಚಮಾಸ್ತಿಗೌಡ ವೃತ್ತದ ಅಂಗಡಿ ಮಳಿಗೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ 25 ಕೆ.ಜಿ ನಿಷೇಧಿತ ಸಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಂಡರು.

ಇದನ್ನೂ ಓದಿ :ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ: ಸಚಿವ ಮುರುಗೇಶ್ ‌ನಿರಾಣಿ

ಪರಿಸರ ಎಂಜಿನಿಯರ್‌ ಚಂದ್ರಶೇಖರ್‌ ಮಾತನಾಡಿ, ಪ್ಲಾಸ್ಟಿಕ್‌ ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣ ಕಲುಷಿತಗೊಳಿಸುತ್ತಿದೆ. ಪುರಸಭೆಯಿಂದ ಹಲವು ಭಾರಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿ ಅರಿವು ಮೂಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆದರು. ಈಗ ಅಲ್ಪ ಮಟ್ಟದ ದಂಡವನ್ನು ವಿಧಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತೆ ಅದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳು ದೊರೆತರೆ ಕಾನೂನು ಕ್ರಮಕೈಗೊಳ್ಳಲಾಗುವುದು.ಸಾರ್ವಜನಿಕರು ಸಾಧ್ಯವಾದಷ್ಟು ಬಟ್ಟೆ ಬ್ಯಾಗ್‌ ಉಪಯೋಗಿಸಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next