ಮೈಸೂರು: ಎಸ್‌ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ್ದು ದ್ವಂದ್ವ ನಿಲುವು. ನಿಷೇಧ ಮಾಡುವುದಾದರೆ ಬಲ ಪಂಥೀಯ ಸಂಘಟನೆಗಳಾದ ಆರೆಸ್ಸೆಸ್, ಭಜರಂಗದಳ, ಶ್ರೀರಾಮಸೇನೆಯನ್ನೂ ನಿಷೇಧಿಸಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಕೇವಲ ಎಸ್‌ಡಿಪಿಐ ಅಥವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿದ್ದಾವಾ?
ಬಲಪಂಥೀಯ ಸಂಘಟನೆಗಳಾದ ಆರೆಸ್ಸೆಸ್, ಭಜರಂಗದಳ, ಶ್ರೀರಾಮಸೇನೆ ಗಳವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ನಿಮಗಿಷ್ಟವಾಗದ ಹೆಸರು ಕೇಳಿ ಬಂದಿದ್ದರಿಂದ ಮೌನವಾಗಿದ್ದೀರಿ, ನೀವು ಗುರಿಯಾಗಿಸಿ ಕೊಂಡಿರುವ ಅಲ್ಪಸಂಖ್ಯಾತರ ಹೆಸರು ಕೇಳಿ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದರು.
ಬಲಪಂಥೀಯ ಸಂಘಟನೆಗಳನ್ನೂ ನಿಷೇಧ ಮಾಡಬೇಕು ಎಂದಿರುವ ದಿನೇಶ್ ಗುಂಡೂರಾವ್ ಮಾತಿಗೆ ಅಷ್ಟು ಬೆಲೆಯೂ ಇಲ್ಲ. ಬೆಲೆ ಕೊಡಬೇಕಾದ ಅಗತ್ಯವೂ ಇಲ್ಲ. ನಿಮ್ಮನ್ನು ಜನ ಮೂಲೆಗೆ ಸೇರಿಸಿ ಆಗಿದೆ. ನಿಮ್ಮದೇ ಪಕ್ಷದ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ್ದು ಯಾರು? ಮೈಸೂರಿನಲ್ಲಿ ರಾಜು, ಬೆಂಗಳೂರಿನಲ್ಲಿ ರುದ್ರೇಶ್ ಕೊಲೆ ಮಾಡಿದ್ದು ಯಾರು?
-ಪ್ರತಾಪ್ ಸಿಂಹ, ಸಂಸದ