Advertisement

ರಸ್ತೆ ಬದಿಗಳಲ್ಲಿ ಹಳೆ ವಾಹನ ನಿಲುಗಡೆ ನಿಷೇಧವಾಗಲಿ

11:20 PM May 18, 2019 | Sriram |

ನಗರದ ವಿವಿಧ ಭಾಗಗಳಲ್ಲಿ ಹಳೆಯ ಉಪಯೋಗಿಸದ ತುಕ್ಕು ಹಿಡಿದ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗಿದ್ದು, ಇದು ನಗರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಎಂಬಂತಿದೆ.

Advertisement

ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಸೇರಿರುವ ಮಂಗಳೂರು ನಗರ, ಸ್ವಚ್ಛ ಸುಂದರ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ. ಆದರೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಂದ ನಗರಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.

ನಗರದ ಪ್ರಮುಖ ಭಾಗಗಳಲ್ಲಿ ಹಳೆಯ, ಉಪಯೋಗ ಶೂನ್ಯವಾದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಟ್ರಾಫಿಕ್‌ ಸೇರಿದಂತೆ ಹಲವು ಸಮಸ್ಯೆಗಳು ಜನಸಾಮಾನ್ಯರಿಗೆ ಎದುರಾಗುತ್ತಿದೆ.

ಮಣ್ಣಗುಡ್ಡೆ, ಲಾಲ್ಬಾಗ್‌- ಮಣ್ಣಗುಡ್ಡೆ ಒಳರಸ್ತೆ, ಕದ್ರಿ ಪಾರ್ಕ್‌ ಮುಂಭಾಗ, ಮರೋಳಿ, ಬಂದರು, ಬರ್ಕೆ ಸಹಿತ ನಗರದ ಪ್ರಮುಖ ಭಾಗಗಳಲ್ಲಿ ಉಪಯೋಗ ಶೂನ್ಯ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ತೆರವು ಮಾಡುವ ಬಗ್ಗೆ ಅಧಿಕಾರಿಗಳ ನಿರಾಸಕ್ತಿ ಎದ್ದು ಕಾಣುತ್ತಿದೆ.

ಬಹುತೇಕ ಗ್ಯಾರೇಜ್‌ ಆವರಣಗಳಲ್ಲಿ ತುಕ್ಕು ಹಿಡಿದ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಅದರಲ್ಲೂ ಕೆಲವು ಗ್ಯಾರೇಜ್‌ಗಳು ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಂಡು ವಾಹನ ನಿಲುಗಡೆ ಮಾಡುತ್ತಿದೆ. ನಗರದ ಬಹುತೇಕ ಸರಕಾರಿ ಕಚೇರಿಗಳ ಆವರಣದಲ್ಲೇ ಉಪಯೋಗ ಶೂನ್ಯ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಆವರಣ, ಅರಣ್ಯ ಇಲಾಖೆ ಕಟ್ಟಡ ಸೇರಿದಂತೆ ಸರಕಾರಿ ಕಚೇರಿಗಳ ಆವರಣಗಳಲ್ಲೇ ತುಕ್ಕು ಹಿಡಿದ ವಾಹನ ಗಳು ಹಲವು ಸಮಯಗಳಿಂದ ನಿಲುಗಡೆಯಾಗಿದೆ.

Advertisement

ಅಚ್ಚರಿ ಎಂದರೆ ಕಚೇರಿ ಆವರಣದಲ್ಲೇ ನಿಂತಿರುವ ತುಕ್ಕು ಹಿಡಿದ ವಾಹನಗಳಲ್ಲಿ ಹುಲ್ಲು ಬೆಳೆದು ಪೊದೆಗಳಾದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ನಗರದ ಬಹುತೇಕ ಪೊಲೀಸ್‌ ಠಾಣೆ ಆವರಣ ಸೀಸ್‌ ಮಾಡಿದ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶದ ಕೊರತೆಯಿಂದ ಠಾಣೆಯ ಆಸುಪಾಸಿನಲ್ಲಿ ವಾಹನಗಳನ್ನು ಪಾರ್ಕ್‌ ಮಾಡುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ.

-ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next