Advertisement

ಆರ್ಥಿಕ-ಸಾಮಾಜಿಕ ಪ್ರಗತಿಯತ್ತ ಮುನ್ನಡೆ: ಶ್ರೀಹರಿ

11:08 PM Jul 06, 2019 | mahesh |

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕದ ಸ್ಮರಣಾರ್ಥ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ ಜನಮಂಗಲ ಯೋಜನೆಯಡಿ ರಾಜ್ಯದ 5 ಸಾವಿರ ಮಂದಿ ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಣೆಗೆ ಕ್ರಮ ಕೈಗೊಂಡಿದೆ. ಕೃಷಿಕರ ಜೀವನ ಮಟ್ಟ ಎತ್ತರಿಸುವ ಕೆರೆಗಳ ಪುನರುಜ್ಜೀವನ, ಅಂತರ್ಜಲ ವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮಾಜವನ್ನು ಆರ್ಥಿಕ – ಸಾಮಾಜಿಕವಾಗಿ ಪ್ರಗತಿಯತ್ತ ಮುನ್ನಡೆಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಹೇಳಿದರು.

Advertisement

ಜು. 6ರಂದು ಬಂಟ್ವಾಳ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಅಂಗವಿಕಲರಿಗೆ ಸಲಕರಣೆ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಮೊದಲ ಹಂತದಲ್ಲಿ 1,600 ಮಂದಿಗೆ ಸಲಕರಣೆ ನೀಡಲಾಗಿದೆ. ಬಂಟ್ವಾಳ ತಾ|ನಲ್ಲಿ 77 ಮಂದಿ ಅಂಗವಿಕಲರಿಗೆ ವೀಲ್ಚಯರ್‌, ವಾಟರ್‌ ಬೆಡ್‌ ಸಹಿತ ಇತರ ಸಾಧನ ವಿತರಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ ಎ. ಗೋವಿಂದ ಪ್ರಭು ಮಾತನಾಡಿ ಜಿಲ್ಲೆಯ ಜೀವನದಿ ನೇತ್ರಾವತಿ ಶುಚಿತ್ವಕ್ಕೆ ಧರ್ಮಾಧಿಕಾರಿ ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆಂದೋಲನ ನಡೆಯಬೇಕಾಗಿದೆ ಎಂದರು.

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮಾತನಾಡಿ, ಅಂಗವೈಕಲ್ಯ ವ್ಯಕ್ತಿಗೆ ಮಾತ್ರವಲ್ಲ ಕುಟುಂಬಕ್ಕೆ ನಿರ್ವಹಣೆ ಸಮಸ್ಯೆ ನೀಡುತ್ತದೆ. ಪರಿಪೂರ್ಣ ಆರೋಗ್ಯ ದೇವರು ನೀಡುವ ವರ ಎಂದರು.

ಸಮಾಜದಲ್ಲಿ ಅಮಲು ಪದಾರ್ಥ ಸೇವನೆ ದೊಡ್ಡ ಪಿಡುಗಾಗಿದೆ. ಇದರಿಂದ ವ್ಯಕ್ತಿಯು ಹಾಳಾಗುವ ಜತೆಗೆ ಸಮಾಜ ಮತ್ತು ಕುಟುಂಬದ ಶಾಂತಿಯೂ ಕದಡುವುದು. ಕ್ಷೇತ್ರದಿಂದ ನಡೆಯುತ್ತಿರುವ ದುಶ್ಚಟಮುಕ್ತ ಸಮಾಜ ನಿರ್ಮಾಣ ಕಾಯಕ ದೊಡ್ಡ ಸಾಮಾಜಿಕ ಸುಧಾರಣೆಯನ್ನು ಮಾಡುತ್ತಿದೆ ಎಂದರು.

Advertisement

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್‌ ಮಾಂಬಾಡಿ ಮಾತನಾಡಿದರು. ಕೇಂದ್ರ ಒಕ್ಕೂಟ ತಾಲೂಕು ಸಮಿತಿ ಅಧ್ಯಕ್ಷ ಮಾಧವ ವಳವೂರು, ಬಿ.ಸಿ. ರೋಡ್‌ ವಲಯದ ಅಖೀಲ ಕರ್ನಾಟಕ ಜಾಗೃತಿ ವೇದಿಕೆ ವಲಯಾಧ್ಯಕ್ಷ ರೋನಾಲ್ಡ್ ಡಿ’ಸೋಜಾ, ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ನಾವೂರ, ಪತ್ರಕರ್ತ ವೆಂಕಟೇಶ್‌ ಬಂಟ್ವಾಳ, ಫರಂಗಿಪೇಟೆ ಸೇವಾಂಜಲಿ ಟ್ರಸ್ಟ್‌ ಸಂಚಾಲಕ ಕೃಷ್ಣ ಕುಮಾರ್‌ ಪೂಂಜ, ಗ್ರಾ. ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ., ಬಿ.ಸಿ. ರೋಡ್‌ ವಲಯ ಮೇಲ್ವಿಚಾರಕ ಕೇಶವ, ಯೋಜನೆಯ ವಲಯದ ಅಧ್ಯಕ್ಷ-ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್‌ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಮೇಲ್ವಿಚಾರಕಿ ಅಶ್ವಿ‌ನಿ ವಂದಿಸಿದರು. ಮೇಲ್ವಿಚಾರಕಿ ಹರಿಣಾಕ್ಷೀ ಕಾರ್ಯಕ್ರಮ ನಿರೂಪಿಸಿದರು.

ತುರ್ತು ಸ್ಪಂದನ
ರಾಜ್ಯದಲ್ಲಿ ಎದುರಾಗುವ ಸಮುದಾಯದ ಅನೇಕ ಸಮಸ್ಯೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ತುರ್ತು ಸ್ಪಂದನ ನೀಡಲಾಗುತ್ತಿದೆ. ರಾಷ್ಟ್ರದ ಹೊಸ ಕನಸುಗಳು ಸಾಕಾರಗೊಳ್ಳುವಲ್ಲಿ ನಾವೆಲ್ಲರೂ ಕಟಿಬದ್ಧ‌್ದರಾಗಬೇಕು. ಸರಕಾರದ ಯೋಜನೆಗಳನ್ನು ಗ್ರಾ. ಯೋಜನೆ ಮೂಲಕ ಜೋಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು.
– ಎ. ಶ್ರೀಹರಿ, ಪ್ರಾ. ನಿರ್ದೇಶಕರು, ಶ್ರೀಕ್ಷೇತ್ರ ಧರ್ಮಸ್ಥಳ ಸಮುದಾಯ – ಅಭಿವೃದ್ಧಿ ವಿಭಾಗ

 

Advertisement

Udayavani is now on Telegram. Click here to join our channel and stay updated with the latest news.

Next