Advertisement
ಕೆಲವು ಸಮಸ್ಯೆಗಳನ್ನು ಬಗೆಹರಿಸಲು ತಹಶೀಲ್ದಾರ್‌ರು ಹಾಜರಾಗಿದ್ದಾಗಸದಸ್ಯರುಗಳ ಸಮಸ್ಯೆಗಳ ಅಹವಾಲುಪ್ರಸ್ತಾಪ ಮಾಡಿ ವಾಡಿಕೆಯಂತೆ ಮಳೆ ಸಾಕಷ್ಟು ಆಗಿ ಬೆಳೆ ತಕ್ಕಮಟ್ಟಿಗೆ ಬಂತುಶೇಂಗಾ 1 ಪಲ್ಲಕ್ಕೆ ಕೇವಲ 3 ನಾಲ್ಕುಚೀಲ ಸಿಕ್ಕರೆ ಅವನ ಗತಿಯೇನು? ತಾಲೂಕಿನಾದ್ಯಂತ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಪಾಪನಾಯಕ ಅಳಲನ್ನು ತೋಡಿ ವಿಷಯ ಪ್ರಸ್ತಾಪಿಸಿದರು.
Related Articles
Advertisement
ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ 79 ಶಾಲೆಗಳಲ್ಲಿ 72 ಶಾಲೆಗಳು ಎ-ಗ್ರೇಡ್‌ಉಳಿದ ಶಾಲೆಗಳು ಬಿಗ್ರೇಡ್ ತೆಗೆದುಕೊಂಡು ಜಿಲ್ಲೆಯಲ್ಲಿ ಅತ್ಯುಮವಾದ ಸಾಧನೆಗೈದಿದೆ. ಇನ್ನೂ ಪ್ರೋತ್ಸಾಹಧನ ವಿಚಾರಕ್ಕೆ ಬಂದಾಗ 7000 ಸಾವಿರ ಬೈಸಿಕಲ್ ಬರಬೇಕಾಗಿತ್ತು ಆದರೆ ಕೋವಿಡ್-19ನಿಂದ ಅನುದಾನ ಯಾವುದೇ ರೀತಿ ಬಿಡುಗಡೆಯಾಗಿಲ್ಲ. ಶಾಲಾ ಶಿಕ್ಷಕರಿಗೆ ತರಬೇತಿಗಳನ್ನು ಹಾಕಿ ಜೀವನಕೌಶಲ್ಯ, ಮುಖಾಮುಖೀ ತರಬೇತಿ ನೀಡಿದೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾಗಿದೆ. ಗಂಭೀರವಾಗಿ ಪರಿಗಣಿಸಿ ತಾಲೂಕಿನ ಎಲ್ಲ ಪಿಡಿಒಗಳು ಒಗ್ಗಟಿನಿಂದ ಕಾರ್ಯನಿರ್ವಹಿಸಿ ಚುನಾವಣೆಗೆ ಬರುವಂಥ ಎಆರ್‌ಒ ಮತ್ತು ಪಿಆರ್ ಓಗಳಿಗೆ ತೊಂದರೆಯಾಗದಂತೆನಿಗಾವಹಿಸಿ. ತಮ್ಮ ಜವಾಬ್ದಾರಿ ಜೊತೆಯಲ್ಲಿ ಜನರಿಗೆ ಮೌಖೀಕವಾಗಿ ಸಂದೇಶಗಳನ್ನು ನೀಡುತ್ತಾ, ಚುನಾಣೆಗಳಿಗೆ ಸಂಬಂಧಿ ಸಿದ ಬ್ಯಾನರಗಳನ್ನು ಹಾಕಿಸಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಒ ಜಿ.ಎಂ. ಬಸಣ್ಣ, ಉಪಾಧ್ಯಕ್ಷೆ ರತ್ನಮ್ಮ ನಿಂಗನಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ನಾಗರಾಜ್, ತಾಪಂ ಸದಸ್ಯರು ಇದ್ದರು.