ಹುಕ್ಕೇರಿ: ಜಲಜೀವನ ಮಿಷನ್ ಯೋಜನೆ ಗ್ರಾಮಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಮಾಡಲು ಬಾಕಿ ಉಳಿದಿರುವ ತೆರಿಗೆ ವಸೂಲಿಮಾಡಬೇಕೆಂದು ಅಹಾರ, ನಾಗರಿಕ ಸರಬರಾಜುಇಲಾಖೆಯ ಸಚಿವ ಉಮೇಶ ಕತ್ತಿ ಸೂಚಿಸಿದರು.
ಅವರು ತಾಲೂಕಾ ಪಂಚಾಯಿತಿಸಭಾಭವನದಲ್ಲಿ ಸೋಮವಾರ ತಾಲೂಕಿನ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿ ಕರಬಾಕಿ ಉಳಿದಿದ್ದು, ಪಿಡಿಒಗಳು ಏಪ್ರೀಲ್ 31ರಒಳಗಾಗಿ ನೂರಕ್ಕೆ ನೂರಷ್ಟು ತೆರೆಗೆ ವಸೂಲಿ ಮಾಡಬೇಕೆಂದು ಸೂಚಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ತೋಟಪಟ್ಟಿ ರಸ್ತೆ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಹಳ್ಳಗಳದಡ ಹಾಗೂ ಶಾಲಾ ಅವರಣದಲ್ಲಿ ಹಣ್ಣಿನ ಗಿಡಗಳನೆಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿಸ್ಮಶಾನಗಳ ಹದ್ದುಬಸ್ತು, ಸರ್ಕಾರಿ ಜಮೀನುಗಳಿಗೆತಂತಿ ಬೇಲಿ ನಿರ್ಮಿಸಿ ವಶಪಡಿಕೊಳ್ಳುವುದುಆಗಬೇಕು. ಜಲಜೀವನ ಯೋಜೆಯಡಿ ಪ್ರತಿಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಿ ನಂತರ ಗುಂಪುಮನೆಗಳಿಗೆ ಹಾಗೂ ತೋಟಪಟ್ಟಿ ಮನೆಗಳಿಗೆ ನೀರು ಸರಬರಾಜು ಮಾಡುವ ಕಾರ್ಯ ಹಂತ ಹಂತವಾಗಿ ಮಾಡಬೇಕೆಂದು ತಿಳಿಸಿದರು.
ಗ್ರಾಮಗಳಲ್ಲಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಸೂಚಿಸಿದರು. ಬರುವ ಮುಂಗಾರಿಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ವಿವಿಧಸಸಿಗಳ ತಯಾರಿಕೆಗೆ ಹಾಗೂ ಬೇಸಿಗೆಯಲ್ಲಿಕುಡಿಯುವ ನೀರಿನ ತೊಂದರೆಯಾಗದಂತೆಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರಿಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯಡಿ ತೋಟಪಟ್ಟಿರಸ್ತೆಗಳ ಕಾಮಗಾರಿಗಳ ಪಕ್ಷಿನೋಟದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.ತಹಶೀಲ್ದಾರ್ ಡಾ. ಡಿಎಚ್ ಹೂಗಾರ,ತಾಪಂ ಇಒ ಬಿ.ಕೆ. ಲಾಳಿ, ಇತರ ಇಲಾಖೆ ಅಧಿಕಾರಿಗಳಿದ್ದರು.