Advertisement

ಶೇ.100 ಪ್ರಗತಿ; ಅಧಿಕಾರಿಗಳನ್ನು ಶ್ಲಾಘಿಸಿದ ಡಿಸಿ

03:34 PM Mar 17, 2021 | Team Udayavani |

ಬಾಗಲಕೋಟೆ: ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿಶೇ.100 ಪ್ರಗತಿ ಸಾಧಿಸಿದ ವಿವಿಧ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಶ್ಲಾಘಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೇಷ್ಮೆ, ಸಹಕಾರ, ಸಣ್ಣ ನೀರಾವರಿ, ಅರಣ್ಯ, ಮೀನುಗಾರಿಕೆ, ಆಯುಷ್‌, ಕೈಮಗ್ಗ ಮತ್ತು ಜವಳಿ ಇಲಾಖೆಗಳು ಶೇ.100 ಸಾಧನೆಮಾಡಿವೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ.99.98, ಕೃಷಿ ಇಲಾಖೆ ಶೇ.91, ಲೋಕೋಪಯೋಗಿ ಇಲಾಖೆ ಶೇ.96 ರಷ್ಟುಪ್ರಗತಿ ಸಾಧಿಸಿವೆ. ಈ ತಿಂಗಳ ಅಂತ್ಯದೊಳಗೆ ಇತರೆ ಇಲಾಖೆಯವರು ಶೇ.100ಕ್ಕೆ ತಲುಪುವನಿಟ್ಟಿನಲ್ಲಿ ಪ್ರಗತಿ ಸಾಧಿಸಲು ತಿಳಿಸಿದರು.

ಕಳೆದ ಸಭೆಯಲ್ಲಿ ಅನುಸರಣಾ ವರದಿ ಬಗ್ಗೆ ಮಾಹಿತಿ ಪಡೆದರು. ಜನವರಿ, ಫೆಬ್ರವರಿ ಮಾಹೆಯ ಪ್ರಗತಿ ವರದಿಯ ತುಲನಾತ್ಮಕವಾಗಿ ಚರ್ಚೆ ನಡೆಸಿದಾಗ ಇಲಾಖೆವಾರು ಹೆಚ್ಚಿನ ಪ್ರಗತಿಯಾಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಮುಂದೆಯೂ ಇದೇ ರೀತಿ ಸರಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆತಲುಪಿಸುವ, ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಂಪೂರ್ಣ ಖರ್ಚು ಭರಿಸುವಕೆಲಸವಾಗಬೇಕೆಂದು ತಿಳಿಸಿದರು.

ಅಂಬೇಡ್ಕರ್‌,ಆದಿಜಂಬವ, ತಾಂಡಾ, ಭೋವಿಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮಗಳು ವಿವಿಧಯೋಜನೆಗಳಡಿ ಸ್ವೀಕೃತವಾದ ಅರ್ಜಿಗಳನ್ನುಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನ ವಿತರಿಸುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಮಾರ್ಚ್‌ ಮಾಹೆಯಲ್ಲಿ ಪ್ರತಿ ತಾಲೂಕುಮಟ್ಟದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಸಭೆ ಜರುಗಿಸಲಾಗಿದೆ. ನಗರಾಭಿವೃದ್ಧಿಇಲಾಖೆಯವರು ಫೆಬ್ರವರಿ ಮಾಹೆಯ ಪ್ರಗತಿವರದಿಯನ್ನು ಸಲ್ಲಿಸಿರುವುದಿಲ್ಲವೆಂದು ಸಭೆಗೆತಿಳಿಸಿದಾಗ, ಮಾಹಿತಿ ನೀಡದೇ ಇದ್ದಲ್ಲಿ ನೋಟಿಸ್‌ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ,ತೋಟಗಾರಿಕೆ ಉಪನಿರ್ದೇಶಕ ರಾಹುಲ್‌ ಕುಮಾರ ಬಾವಿದಡ್ಡಿ, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಲೋಕೋಪಯೋಗಿಇಲಾಖೆಯ ಮುಖ್ಯ ಎಂಜಿನಿಯರ್‌ ಪ್ರಶಾಂತಗಿಡ್ಡದಾನಪ್ಪಕೋಳ, ಡಿವೈಪಿಸಿಯ ಜಾಸ್ಮಿàನ್‌ ಕಿಲ್ಲೇದಾರ ಮುಂತಾದವರಿದ್ದರು.

ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿರುವ ಮನೆ ಇಲ್ಲದವರಿಗೆ ಶೇ.100 ಸೂರೊದಗಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿರುವ 15 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಬರುವ ಪೌರ ಕಾರ್ಮಿಕರ ಪಟ್ಟಿ ಮಾಡಿ ಈಗಾಗಲೇ ಮನೆ ಇರುವವರನ್ನು ಬಿಟ್ಟು ಉಳಿದವರಿಗೆಸೂರು ಕಲ್ಪಿಸುವ ಕಾರ್ಯವಾಗಬೇಕು. ಜಾಗವಿದ್ದು, ಮನೆ ಇಲ್ಲದವರು ಹಾಗೂ ಜಾಗ ಮತ್ತು ಮನೆಎರಡೂ ಇಲ್ಲದವರ ಪಟ್ಟಿ ಮಾಡಿಕೊಂಡು ವರ್ಷದಲ್ಲಿ ಎಲ್ಲರೂ ಮನೆ ಕಟ್ಟಿಕೊಂಡಿರಬೇಕು. ಈಕಾರ್ಯದಲ್ಲಿ ಪೌರಕಾರ್ಮಿಕರು ಸ್ವಯಂ ಪ್ರೇರಿತವಾಗಿ ಬಂದು ಯೋಜನೆಯ ಲಾಭ ಪಡೆಯಬೇಕು. – ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next