Advertisement

ಮಕ್ಕಳ ರಕ್ಷಣೆಗೆ ಇಲಾಖೆಗಳ ಸಮನ್ವಯವಿರಲಿ

06:55 PM Mar 06, 2021 | Team Udayavani |

ಕೊಪ್ಪಳ: ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕೆಲಸ ನಿರ್ವಹಿಸಿ ಮಕ್ಕಳ ರಕ್ಷಣೆ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ| ಅಂಟೋನಿ ಸೆಬಾಸ್ಟಿಯನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಡಿಸಿ ಕಚೇರಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಮಕ್ಕಳ ರಕ್ಷಣೆ ಕುರಿತಂತೆಹಾಗೂ ಕಾಯ್ದೆಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳ ರಕ್ಷಣೆ ಕೇವಲ ಇಲಾಖೆ ಹೊಣೆಯಲ್ಲ.ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆ ಕಾಯ್ದುಕೊಳ್ಳಬೇಕು. ಇದರಿಂದ ಬಾಲ ಕಾರ್ಮಿಕರನ್ನು,ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಸಂತ್ರಸ್ತರನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ಬಾಲ್ಯ ವಿವಾಹ ನಡೆದಾಗ ಪೊಲೀಸ್‌ ಇಲಾಖೆಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮದುವೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು.ಜಿಲ್ಲೆಯಲ್ಲಿ ಈವರೆಗೂ 101 ಬಾಲ್ಯವಿವಾಹ ಪ್ರಕರಣನಡೆದಿವೆ. ಅವುಗಳಲ್ಲಿ 10 ಪ್ರಕರಣಗಳಲ್ಲಿ ಮಾತ್ರ ಕೇಸ್‌ ದಾಖಲಾಗಿದೆ. ಉಳಿದ ಪ್ರಕರಣಗಳ ಕುರಿತುಕೈಗೊಂಡ ಕ್ರಮಗಳೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಾಲ್ಯವಿವಾಹವನ್ನು ರಾಜ್ಯದಿಂದ ಮುಕ್ತಗೊಳಿಸಲು ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಭೆ ಜರುಗಿಸಿ ಕಿರುಚಿತ್ರ, ಭಿತ್ತಿಪತ್ರಗಳ ಮೂಲಕಜಾಗೃತಿ ಮೂಡಿಸಬೇಕು. ಬಾಲಕಿಯ ವಯಸ್ಸಿನ ಕುರಿತು ಶಾಲಾ ಮುಖ್ಯಸ್ಥರಿಂದ ದೃಢೀಕರಣ ಪ್ರಮಾಣ ಪತ್ರ ಪಡೆದು, ಪ್ರಕರಣ ಸಾಬೀತಾದಲ್ಲಿ ಬಾಲ್ಯ ವಿವಾಹದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದರು.

ಸರಕಾರಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜಿಲ್ಲೆಯ ಹಾಲವರ್ತಿ, ಚಿಲವಾಡಗಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿ ಎಲ್ಲವೂ ಅವ್ಯವಸ್ಥೆಯಿತ್ತು. ಅಲ್ಲಿಮಕ್ಕಳಿಗೆ ಶಿಕ್ಷಿಸಲು ಕೋಲು ಇಟ್ಟಿದ್ದು ಕಂಡುಬಂದಿತು. ಕೋಲು ಬಳಸುವುದು ಅಪರಾಧವಾಗಿದ್ದು, ಜೊತೆಗೆಮಕ್ಕಳಿಗೆ ನೀಡಬೇಕಾದ ಸಮವಸ್ತ್ರ, ಶೂ, ಸಾಕ್ಸ್‌ಗಳುವಿತರಣೆಯಾಗಿಲ್ಲ. ಈ ಕುರಿತು ಡಿಡಿಪಿಐ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗುವಮಹಿಳೆಯರಲ್ಲಿ 18 ರಿಂದ 19 ಎಂದು ವಯಸ್ಸು ನಮೂದಿಸುವ ಯುವತಿಯರನ್ನು ಗಂಭೀರವಾಗಿ ಪರಿಗಣಿಸಿ ಅವರ ನೈಜ ವಯಸ್ಸಿನ ಖಾತರಿಗೆ ವೈದ್ಯಕೀಯಪರೀಕ್ಷೆಗೆ ಒಳಪಡಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ,ಅಪ್ರಾಪ್ತೆಯರ ಮದುವೆ, ಬಾಲ ಕಾರ್ಮಿಕತೆಯ ಅಂಕಿ ಅಂಶದಲ್ಲಿ ತಾಳೆಯಾಗದಿದ್ದಕ್ಕೆ ಆಯೋಗದ ಅಧ್ಯಕ್ಷರು ಇಲಾಖೆಗಳ ನಡುವೆ ಸಮನ್ವಯತೆಯಕೊರತೆಯಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಕೆಲ ವರ್ಷಗಳ ಹಿಂದೆ ಕಲ್ಲು ಕ್ವಾರಿ, ಗ್ರಾನೈಟ್‌ಗುಂಡಿಗಳಲ್ಲಿ ಮಕ್ಕಳು ಬಿದ್ದು ಮರಣ ಹೊಂದಿದಪ್ರಕರಣಗಳು ಇವೆ. ಅದರಂತೆ ನಗರದ ಬಿಸಿಎಂಹಾಸ್ಟೆಲ್‌ನಲ್ಲಿ ವಿದ್ಯುತ್‌ ಆಘಾತದಿಂದ ಮಕ್ಕಳು ಮರಣಹೊಂದಿದರು. ಆದ್ದರಿಂದ ಶಾಲಾ-ಕಾಲೇಜು, ಮಕ್ಕಳವಸತಿ ನಿಲಯಗಳ ಮೇಲೆ ವಿದ್ಯುತ್‌ ತಂತಿ ಹಾಯ್ದುಹೋಗದಂತೆ ಕ್ರಮಕೈಗೊಳ್ಳಿ. ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಮಾಲೀಕರಿಗೆ ಸೂಚನೆ ನೀಡಿ ಎಂದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಮಾತನಾಡಿ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಕೇಸ್‌,

ಮಕ್ಕಳ ನಾಪತ್ತೆ ಕೇಸ್‌ನಲ್ಲಿ ಮಕ್ಕಳನ್ನು ರಕ್ಷಿಸಿದ ನಂತರ ಸಂಬಂಧಿಸಿದ ಸಮಿತಿ ಮುಂದೆ ಮಕ್ಕಳನ್ನುಹಾಜರುಪಡಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಗಿಂದಾಗ್ಗೆ ಒದಗಿಸಬೇಕು. ಮಕ್ಕಳ ರಕ್ಷಣೆ ಕುರಿತು ಇರುವ ವಿವಿಧ ಸಮಿತಿಗಳು ಪ್ರತಿಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿಯನ್ನು ಸಭೆಯ ಮುಂದೆ ಸಲ್ಲಿಸಬೇಕು ಎಂದರು. ಡಿಸಿ ವಿಕಾಸ್‌ ಕಿಶೋರ್‌ ಮಾತನಾಡಿ, ಜಿಲ್ಲೆಯಲ್ಲಿ ಎಚ್‌ಐವಿ ಬಾಧಿತ ಯುವಕ, ಯುವತಿಯರಿಗೆ ಅವರದೇ ಸಮುದಾಯದಲ್ಲಿ ಸೂಕ್ತ ಜೋಡಿ ಹುಡುಕಿ ಮದುವೆ ಮಾಡಿಸುವ ಸಂಘ ಸಂಸ್ಥೆಗಳಮೂಲಕ ಜಿಲ್ಲಾಡಳಿತ ಕೈಜೋಡಿಸಿದ್ದು, ಎಚ್‌ಐವಿಬಾಧಿತ ಹಾಗೂ ಸೋಂಕಿತರರಿಗೂ ಸಹಜ ಜೀವನ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇಇಲಾಖೆಗಳಿಂದ ಸೋಂಕಿತರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿಯಲ್ಲಿ ಬಾಲ ಕಾರ್ಮಿಕರ ಪೋಷಕರಿಗೆ ಉದ್ಯೋಗ ಒದಗಿಸಿಮಕ್ಕಳನ್ನು ರಕ್ಷಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಮತ್ತೂಮ್ಮೆ ಸಮೀಕ್ಷೆ, ಭೇಟಿ ನಡೆಸಿ ನೈಜಬಾಲ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅಗತ್ಯ ಪುನರ್ವಸತಿಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಜಿಪಂ ಸಿಇಒ ರಘುನಂದನ್‌ ಮೂರ್ತಿ ಮಾತನಾಡಿದರು. ಎಸ್ಪಿ ಟಿ. ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಆಯೋಗದಸದಸ್ಯರಾದ ಅಶೋಕ ಜಿ. ಯರಗಟ್ಟಿ, ಡಿ. ಶಂಕರಪ್ಪ, ಎಂ.ಎಲ್‌. ಪರಶುರಾಮ, ಎಚ್‌.ಸಿ. ರಾಘವೇಂದ್ರ,ಭಾರತಿ ಮಲ್ಲೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಡಿಎಚ್‌ಒ ಡಾ| ಅಲಕನಂದಾ ಡಿ. ಮಳಗಿ, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್‌ ಜೋಗಿ, ಮಕ್ಕಳ ಕಲ್ಯಾಣ ಸಮಿತಿಅಧ್ಯಕ್ಷ ನಿಲೋಫರ್‌ ರಾಂಪೂರಿ, ಸಮಿತಿ ಸದಸ್ಯರಾದಸರೋಜಾ ಬಾಕಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next