Advertisement

ಭಾಲ್ಕಿ ಕ್ಷೇತ್ರದ 70 ಸಾವಿರ ಎಕರೆಗೆ ತಿಂಗಳೊಳಗೆ ನೀರು: ಖಂಡ್ರೆ

02:56 PM Dec 01, 2020 | Suhan S |

ಭಾಲ್ಕಿ: 1969ರಲ್ಲಿ ಆರಂಭವಾಗಿದ್ದ ಜಿಲ್ಲೆಯ ರೈತರ ಜೀವನಾಡಿ ಕಾರಂಜಾ ಯೋಜನೆ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ತಾಲೂಕಿನ ಸುಮಾರು 70 ಸಾವಿರ ಎಕರೆ ಜಮೀನಿಗೆ ತಿಂಗಳೊಳಗೆ ನೀರು ಹರಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಕಾರಂಜಾ ಯೋಜನೆಯ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಕಾರಂಜಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. 1969ರಲ್ಲಿ ನಮ್ಮ ತಂದೆ ಭೀಮಣ್ಣ ಖಂಡ್ರೆ ಶಾಸಕರಿದ್ದಾಗ ಕಾರಂಜಾ ಯೋಜನೆ ಆರಂಭಗೊಂಡಿತು. ನಂತರದ ವರ್ಷಗಳಲ್ಲಿ ಈ ಯೋಜನೆ ಆಮೆವೇಗ ಪಡೆಯಿತು. ಆಗಾಗ್ಗ ಬರುವ 5ರಿಂದ 10 ಕೋಟಿ ರೂ. ಅನುದಾನ ನಿರ್ವಹಣೆಗೆ ಖರ್ಚಾಗುತ್ತಿತ್ತು. ಮುಖ್ಯ ಕಾಲುವೆ ಸಂಪೂರ್ಣ ಹಾಳಾಗಿದ್ದವು. ಇನ್ನೇನು ಕಾರಂಜಾ ಯೋಜನೆ ಮುಳಗಡೆ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೇ ನಾನು ಶಾಸಕನಾಗಿ ಆಯ್ಕೆ ಆಗುತ್ತಲೇ ಕಾರಂಜಾ ಯೋಜನೆ ಕೈಗತ್ತಿಕೊಳ್ಳಲಾಯಿತು. ಕಾರಂಜಾ ಯಶಸ್ವಿಗೆ ವಿಸ್ತೃತ ಯೋಜನೆ ರೂಪಿಸಿ 2016ರಲ್ಲಿ ಸಚಿವನಾಗುತ್ತಲೇ ಅಂದಿನ ಸಿಎಂ ಸಿದ್ದರಾಮಯ್ಯನವರ ಮೇಲೆ ನಿರಂತರ ಒತ್ತಡ ತಂದು ಕಾಲುವೆ ಆಧುನೀಕರಣಕ್ಕಾಗಿ 500 ಕೋಟಿ ರೂ. ಅನುದಾನ ಮಂಜೂರಾತಿ ಮಾಡಿಸಿದರ ಪರಿಣಾಮ ಇದೀಗ 131 ಕಿ.ಮೀ. ಬಲದಂಡೆ ಮತ್ತು 31 ಕಿ.ಮೀ. ಎಡದಂಡೆಕಾಲುವೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಈ ಬಾರಿ ಉತ್ತಮ ಮಳೆ ಆಗಿದ್ದು ಕಾರಂಜಾ ಜಲಾಶಯ ಸಂಪೂರ್ಣ ಭರ್ತಿ ಆಗಿದ್ದು, 7.69 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಾಲುವೆ ಕೊನೆಯ ಅಂಚಿನ ವರೆಗೂ ನೀರು ಹರಿಸಲು ಸಿದ್ಧಗೊಂಡಿದ್ದು, ತಿಂಗಳೊಳಗೆ ಕಾಲುವೆಗೆ ನೀರು ಹರಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನೀರು ರೈತರಿಗೆ ಬಂಗಾರ ಇದ್ದಂತೆ. ರೈತರು ನೀರಿನ ಸದ್ಬಳಕೆ ಮಾಡಿಕೊಂಡು ವರ್ಷದಲ್ಲಿ 3 ಬೆಳೆ ಬೆಳೆದು ಆರ್ಥಿಕ ಸದೃಢರಾಗಬೇಕು ಎಂದು ತಿಳಿಸಿದರು. ಕಾರಂಜಾ ಯೋಜನೆ ಕಾರ್ಯಪಾಲಕ ಅಭಿಯಂತರ ವಿಲಾಸ ಮಾಶೆಟ್ಟೆ ಮಾತನಾಡಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ, ನೀರು ಬಳಕೆದಾರರ ಮಹಾಮಂಡಳಅಧ್ಯಕ್ಷರಾದ ಹಣಮಂತ ಪಾಟೀಲ್‌,ಕಾರಂಜಾ ಯೋಜನೆ ಅಧಿಕಾರಿಗಳಾದ ಚಂದ್ರಶೇಖರ ರತ್ನಾಪೂರ್‌, ಧನರಾಜ ಲದ್ದೆ, ವಿಜಯಕುಮಾರ, ಅಬ್ದುಲ ಖುದ್ದುಸ್‌, ಮಚೇಂದ್ರ, ಲಕ್ಷ್ಮಣ, ಲೋಕೋಪಯೋಗಿ ಎಇಇ ಶಿವಶಂಕರ ಕಾಮಶೆಟ್ಟಿ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next