Advertisement

ಮುಂದುವರಿದ ತೊಗರಿ ಬೆಳೆಗಾರರ ಧರಣಿ

10:30 AM Feb 25, 2018 | Team Udayavani |

ಕಲಬುರಗಿ: ಬೆಂಬಲ ಬೆಲೆಯಲ್ಲಿನ ತೊಗರಿ ಖರೀದಿ ಪ್ರಮಾಣ ಹೆಚ್ಚಿಸುವಂತೆ, 7500 ಬೆಂಬಲ ಬೆಲೆ ನೀಡುವುದು ಸೇರಿದಂತೆ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಗತ್‌ ವೃತ್ತದ ಡಾ| ಅಂಬೇಡ್ಕರ ಪ್ರತಿಮೆ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ರೈತರ ಧರಣಿ ಸತ್ಯಾಗ್ರಹ ಐದನೇ ದಿನಕ್ಕೆ ಮುಂದುವರಿದಿದ್ದು, ಧರಣಿಗೆ ಕುಳಿತ ನಾಲ್ವರು ರೈತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಮೌಲಾ ಮುಲ್ಲಾ, ಶಿವಾನಂದ ಗರೂರ ಗುಡೂರ, ಶರಣಬಸಪ್ಪ ಮಮಶೆಟ್ಟಿ, ಸಿದ್ರಾಮಪ್ಪ ಕಣಮುಸ ಎನ್ನುವ ರೈತರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತರ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಶನಿವಾರ ಮಾಜಿ ಸಚಿವ ಎಸ್‌.ಕೆ.ಕಾಂತಾ, ಕಲಬುರಗಿ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಸವರಾಜ ಡಿಗ್ಗಾವಿ ಸೇರಿದಂತೆ ಇತರರು ಬೆಂಬಲ ವ್ಯಕ್ತಪಡಿಸಿದರು.

ಬೆಂಬಲ ಬೆಲೆಯಲ್ಲಿನ ತೊಗರಿ ಖರೀದಿಗಳು ಮದಗೊಮ್ಮೆ ಎರಡನೇ ಬಾರಿಗೆ ಬಂದಾಗಿರುವುದು ರೈತರೊಂದಿಗೆ ಚೆಲ್ಲಾಟವಾಡುವಂತಾಗಿದೆ. ರೈತರೆಂದರೆ ಸರ್ಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ನಿರೂಪಿಸುತ್ತದೆ. ಇದಕ್ಕೆ ರೈತರು ತಕ್ಕಪಾಠ ಕಲಿಸಲು ಹಿಂದೇಟು ಹಾಕುವುದಿಲ್ಲ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದರು. ಶಿವಕುಮಾರ ಅಂಕಲಗಿ, ರೇವಣಸಿದ್ದಯ್ಯ ಶಾಸ್ತ್ರೀ, ವೀರಯ್ಯ ಸ್ವಾಮಿ, ವಿಠ್ಠಲ ಪೂಜಾರಿ ಸೇರಿದಂತೆ ಮುಂತಾದ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಮುತ್ತಿಗೆ ಹಾಕುವ ಸಾಧ್ಯತೆ: ಐದು ದಿನಗಳಿಂದ ಧರಣಿ ಸತ್ಯಾಗ್ರಹ ಕೈಗೊಂಡಿದ್ದರೂ ಸಂಬಂಧಪಟ್ಟವರ್ಯಾರು ಸ್ಥಳಕ್ಕೆ ಬಂದು ಸೂಕ್ತ ಭರವಸೆ ನೀಡದ ಇರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರೈತರು, ರವಿವಾರ ನಗರಕ್ಕಾಗಮಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರಿಗೆ ಏಲ್ಲಾದರೂ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುತ್ತಿಗೆ ಹಾಕಿ ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಅವಕಾಶ ನೀಡದೇ ಇಲ್ಲವೇ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಧರಣಿ ನಿರತ ರೈತರು ಆಗ್ರಹಿಸಿದ್ದಾರೆ.

ದರ ವ್ಯತ್ಯಾಸ ಯೋಜನೆ ಜಾರಿಗೆ ಅಮಿತ್‌ಶಾಗೆ ಮನವಿ
ಕಲಬುರಗಿ: ತೊಗರಿ ಬೆಂಬಲ ಬೆಲೆ ಕುಸಿತದಿಂದಾಗಿ ದಾಲ್‌ ಮಿಲ್‌ಗ‌ಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ದಾಲ್‌ ಮಿಲ್‌ಗ‌ಳನ್ನು ಕೃಷಿ ಆಧಾರಿತ ಉದ್ಯಮ ಎಂದು ಪರಿಗಣಿಸಿ ದರ ವ್ಯತ್ಯಾಸ ಯೋಜನೆ ಜಾರಿಗೆ ತರುವ ಮೂಲಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ನಗರಕ್ಕೆ ರವಿವಾರ ಆಗಮಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಾಗುವುದಾಗಿ ಗುಲಬರ್ಗಾ ದಾಲ್‌ ಮಿಲ್ಲರ್ಸ್‌ ಅಸೋಶಿಯೇಶನ್‌ ಕಾರ್ಯದರ್ಶಿ ಚಂದ್ರಶೇಖರ್‌ ತಳ್ಳಳ್ಳಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗದಲ್ಲಿ ಸುಮಾರು 400 ದಾಲ್‌ಮಿಲ್‌ ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 300ರಿಂದ 340 ಕಾರ್ಖಾನೆಗಳು 650 ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟ ಎದುರಿಸುತ್ತಿವೆ. ಸುಮಾರು 4000 ಜನರು ನಿರುದ್ಯೋಗಿಗಳಾಗಿದ್ದಾರೆ. ಎಲ್ಲ ನಷ್ಟಗಳಿಗೆ ರಾಜ್ಯ ಸರ್ಕಾರದ ನೀತಿಯೇ ನೇರವಾಗಿ ಕಾರಣ ಎಂದು ಆರೋಪಿಸಿದರು. 

ಮಧ್ಯಪ್ರದೇಶ ರಾಜ್ಯದಲ್ಲಿ ದರ ವ್ಯತ್ಯಾಸದ ಯೋಜನೆ ಜಾರಿಯಲ್ಲಿದ್ದು, ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರಕ್ಕೆ ಕೋರಿದರೆ, ಅದು ಕೇಂದ್ರಕ್ಕೆ ಸಂಬಂ ಧಿಸಿದ್ದು ಎಂದು ಹೇಳಿದೆ. ಆದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನಗರದಲ್ಲಿ ನಡೆಸಲಿರುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದರ ವ್ಯತ್ಯಾಸ ಯೋಜನೆ ಜಾರಿಗೆ ಮನವಿ ಮಾಡಲಾಗುವುದು ಎಂದು
ತಿಳಿಸಿದರು.

ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಸಂತೋಷ ಲಂಗರ, ಉದಯಕುಮಾರ ದೇವಣಿ, ಶಿವಾನಂದ ಸಜ್ಜನ್‌, ರವಿಚಂದ್ರ ಪಾಟೀಲ್‌, ಕೋರವಾರ ಸುದ್ದಿಗೋಷ್ಠಿಯಲ್ಲಿದ್ದರು 

Advertisement

Udayavani is now on Telegram. Click here to join our channel and stay updated with the latest news.

Next