Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಯೋಜನೆ ರೂಪಿಸಿವುದು, ಆರ್ಥಿಕ ಸಂಪೂನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ-2013ರನ್ವಯ ರಚಿಸಲಾದ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಹಾಗೂ ಪ್ರಗತಿ ವರದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಮಟ್ಟದಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂಬ ಒತ್ತಡವಿದೆ. ಹಾಗಾಗೀ ಜಿಲ್ಲೆಯಲ್ಲಿ ಬಿಡುಗಡೆಯಾದ ಅನುದಾನವನ್ನು ಸರಿಯಾದ ರೀತಿಯಲ್ಲಿ ಅರ್ಹರಿಗೆ ಖರ್ಚು ಮಾಡಬೇಕು. ಖರ್ಚು ಮಾಡಿದ ಹಣದ ಮಾಹಿತಿಯ ಅಂಕಿ ಅಂಶಗಳನ್ನು ನಮೂದಿಸಬೇಕು. ಅಂಕಿ ಅಂಶಗಳು ಸರಿಯಾಗಿ ಇಲ್ಲವಾದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. 2018-19ನೇ ಸಾಲಿನ ಪಿಎಂವೈಜಿಪಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಫಲಾನುಭವಿಗಳಿಗೆ ಸಾಲ ಬಿಡುಗಡೆ ಆಗಿರುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಅವರ ಜೊತೆಗೆ ಸಭೆ ನಡೆಸಬೇಕು. ಈ ಯೋಜನೆಯಲ್ಲಿ 3ರ ಅನುಪಾತದಲ್ಲಿ 1ನ್ನು ಆಯ್ಕೆ ಮಾಡಬೇಕು ಎಂಬ ನಿಯಮವಿದೆ, ಆದರೆ ಬ್ಯಾಂಕಿನವರು ಇದುವರೆಗೆ ಯಾರನ್ನು ಆಯ್ಕೆ ಮಾಡಿಲ್ಲ, ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ನೀಡಿರುವುದಿಲ್ಲ. ಈ ಕುರಿತು ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದು ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು. ಕೆಲವೊಂದು ಇಲಾಖೆಗಳು ಸರಿಯಾದ ಅಂಕಿ ಅಂಶಗಳು ಯೋಜನೆಯ ರೂಪುರೇಷೆ, ಕ್ರಿಯಾಯೋಜನೆ ಬಗ್ಗೆ ಮಾಹಿತಿ ನೀಡದಿರುವುದು ಗಮನಿಸಲಾಗಿದ್ದು, ಇದಕ್ಕಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಆಗಮಿಸಿ ವರದಿ ಸಲ್ಲಿಸಬೇಕು ಎಂದರು.
Advertisement
ಎಸ್‌ಸಿಪಿ, ಟಿಎಸ್‌ಪಿಯಲ್ಲಿ ಪ್ರಗತಿ
10:00 AM Jul 02, 2019 | Suhan S |
Advertisement
Udayavani is now on Telegram. Click here to join our channel and stay updated with the latest news.