Advertisement

ನಕಾರಾತ್ಮಕ ವಿಚಾರ ಬಿಟ್ಟಾಗ ಜೀವನದಲ್ಲಿ ಪ್ರಗತಿ

06:32 PM Apr 11, 2022 | Team Udayavani |

ಬೆಳಗಾವಿ: ಓದಿಗೆ ಬಡತನ ಅಡ್ಡಿಬಾರದು, ಯಾವುದೇ ಕೆಲಸ ಮಾಡಿದರೂ ಅದನ್ನು ಪರಿಪೂರ್ಣವಾಗಿ ಮಾಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಡಿಸಿಪಿ ರವೀಂದ್ರ ಗಡಾದಿ ಹೇಳಿದರು.

Advertisement

ಇಲ್ಲಿನ ಸದಾಶಿವ ನಗರದ ಅಂಬೇಡ್ಕರ್‌ ಭವನದಲ್ಲಿ ಎಸ್ಸಿ, ಎಸ್ಟಿ, ಗೆಜಿಟೆಡ್‌ ಅಧಿಕಾರಿಗಳ ಚಾರಿಟೇಬಲ್‌ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಕಾರತ್ಮಕ ವಿಚಾರ ಬಿಟ್ಟಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದರು. ವಿದ್ಯಾರ್ಥಿಗಳು ಭಾಷೆ, ಸಂಸ್ಕೃತಿ ಜೊತೆಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಮುಂದೆ ಬಂದವರು ಹಿಂದೆ ಉಳಿದವರನ್ನು ಮುನ್ನಡೆಗೆ ತೆಗೆದುಕೊಂಡು ಹೋಗಬೇಕು. ಓದಿನ ಜತೆ ಆರೋಗ್ಯಕ್ಕೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಮುಂದೆ ಗುರಿ, ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಮೊದಲು ನಮ್ಮವರನ್ನು ನಾವು ಗೌರವಿಸುವುದು ಕಲಿಯಬೇಕು. ಮೊಬೆ„ಲ್‌ ಬಳಕೆ ಒಳ್ಳೆಯ ಉದ್ದೇಶಕ್ಕೆ ಮಾತ್ರ ಸೀಮಿತವಾಗಲಿ, ಕನ್ನಡ ಜತೆ ಇಂಗ್ಲಿಷ್‌ ಭಾಷೆಯ ಬಗ್ಗೆಯೂ ಹೆಚ್ಚಿನ ಜ್ಞಾನ ಪಡೆದುಕೊಳ್ಳಿ ಎಂದರು.

ಎಸ್ಸಿ, ಎಸ್ಟಿ, ಗೆಜಿಟೆಡ್‌ ಅಧಿಕಾರಿಗಳ ಚಾರಿಟೇಬಲ್‌ ಫೌಂಡೇಶನ್‌ ಅಧ್ಯಕ್ಷರಾದ ಎಸ್‌.ಆರ್‌. ಖೋಕಾಟೆ ಮಾತನಾಡಿ,ವಿದ್ಯಾರ್ಥಿಗಳ ಸಮಸ್ಯೆಗೆ ನಾವು ಸದಾ
ಸ್ಪಂದಿಸುತ್ತಿದ್ದು, ನಿಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ. ಯಾವುದೇ ಕ್ಷೇತ್ರದಲ್ಲಿ ನಿಮಗೆ ಉದ್ಯೋಗ ಸಿಕ್ಕರೆ ಅದನ್ನು ಪಡೆದು ಪ್ರಗತಿ ಕಾಣಬೇಕು ಎಂದರು.

ಫೌಂಡೇಶನ್‌ ಸದಸ್ಯ ಎಂ.ಡಿ. ಕಾಂಬಳೆ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರ ಕಿಹೊಳಿ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಮೌಡ್ಯತೆ ವಿರುದ್ಧ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಬೇಕು. ದೇವರ ಹೆಸರಿನಲ್ಲಿ ಕೆಲವು ಅಂಧ ಆಚರಣೆಗಳನ್ನು ಮಾಡಬಾರದು ಎಂದು ಕರೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ 35 ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸಹಾಯ ಧನ ಸೇರಿದಂತೆ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ಮತ್ತು ಮಿಷನ್‌ ಪುಸ್ತಕ ವಿತರಿಸಿ ಫೌಂಡೇಶನ್‌ ವತಿಯಿಂದ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್‌.ಸಿ.ಯು ಸಹಾಯಕ ರಿಜಿ ಸ್ಟ್ರಾರ್‌ ಶ್ರೀನಿವಾಸ್‌, ಆರ್‌.ಸಿ.ಯು ವಾಣಿಜ್ಯ ವಿಭಾಗದ ಡೀನ್‌ ಎಚ್‌ ವೈ.ಕಾಂಬಳೆ, ಎಸ್ಸಿ, ಎಸ್ಟಿ, ಗೆಜಿಟೆಡ್‌ ಅಧಿಕಾರಿಗಳ ಚಾರಿಟೇಬಲ್‌ ಫೌಂಡೇಶನ್‌ ಉಪಾಧ್ಯಕ್ಷ ಬಿ.ಎನ್‌. ಶೆಟ್ಟಣ್ಣನವರ್‌, ಸದಸ್ಯರಾದ ಸಿ.ಆರ್‌. ವಿನಾಯಕ್‌, ಜಿ.ಆರ್‌. ಕಾಂಬಳೆ, ಡಿ.ಎಂ.ಸಿಂಗೆಗೊಳ್‌, ವೈ.ಪಿ. ಗಾಡಿನಾಯಕ್‌, ಶೇಖರ್‌ ಸಿಂಗೆ, ವಿ.ಆರ್‌. ಕಲ್ಲಣ್ಣನವರ್‌, ಸಂಜೀವ ಕಾಂಬಳೆ ಉಪಸ್ಥಿತರಿದ್ದರು. ಲಕ್ಷ್ಮಣ ಆರ್‌. ಕಾಂಬಳೆ ಅತಿಥಿಗಳನ್ನು ಪರಿಚಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next