ತುಮಕೂರು: ಕನ್ನಡ ಸಾಹಿತ್ಯ ಪರಿಷತ್‌ಚುನಾವಣೆಯಲ್ಲಿ ರಾಜಕೀಯ ನುಸುಳುತ್ತಿದ್ದು,ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗಳರೀತಿಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಆಸೆ,ಆಮಿಷ ಪಾರ್ಟಿಗಳನ್ನು ನಡೆಸುತ್ತಿರುವುದು ಕನ್ನಡಸಾಹಿತ್ಯ ಸೇವೆ ಮಾಡಲು ಬರುವವರಿಗೆ ಒಳ್ಳೆಯಬೆಳವಣಿಗೆ ಅಲ್ಲ ಎಂದು ಲೇಖಕಿ, ಮಹಿಳಾ ಪರಹೋರಾಟಗಾರ್ತಿ ಡಾ.ಬಿ.ಸಿ.ಶೈಲಾ ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಿಂದಲೂಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯಳಾಗಿ,ಹಲವಾರು ಹೋರಾಟಗಳಲ್ಲಿ ಭಾಗವಹಿಸುವಮೂಲಕ ಕನ್ನಡ ನಾಡು, ನುಡಿ ಕಟ್ಟುವ ವಿಚಾರದಲ್ಲಿಕೆಲಸ ಮಾಡಿದ್ದೇನೆ. ಕನ್ನಡ ಸಾಹಿತ್ಯಾಸಕ್ತರು ನನ್ನನ್ನುಬೆಂಬಲಿಸಲಿದ್ದಾರೆ ಎಂಬ ಮಹದಾಸೆಯೊಂದಿಗೆ ಈಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿಸೇವೆ ಮಾಡಿದ್ದೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ಕಸಾಪ ಅಧ್ಯಕ್ಷರಾಗಿದ್ದಸಹೋದರಿ ಬಾ.ಹ.ರಮಾಕುಮಾರಿ ಅಧ್ಯಕ್ಷತೆಯಲ್ಲಿಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ.ಅದೇ ರೀತಿ ಎಲ್ಲಾ ತಾಲೂಕುಗಳಲ್ಲಿ ಕಸಾಪ ಭವನನಿರ್ಮಿಸಬೇಕೆಂಬುದು ನಮ್ಮ ಆಶಯವಾಗಿದೆ.ಕನ್ನಡ ಶಾಲೆಗಳ ಉಳಿವಿಗಾಗಿ ಗ್ರಾಮೀಣ ಶಾಲೆಗಳದತ್ತು ಪಡೆಯುವಂತಹ ಯೋಜನೆಗಳನ್ನುರೂಪಿಸಲಿದ್ದೇನೆ ಎಂದರು.
ಸಾಹಿತ್ಯ ಪರಿಷತ್ತು ಎಂದಿಗೂ ರಾಜಕೀಯವೇದಿಕೆಯಲ್ಲ. ನನ್ನ ಕೆಲ ಸಹ ಸ್ಪರ್ಧಿಗಳು ಅಲ್ಲಲ್ಲಿರಾಜಕೀಯ ಚುನಾವಣೆಯ ರೀತಿಯನಡೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ.ಆದರೆ, ಅಂತಹ ಯಾವುದೇ ಪ್ರಚಾರದ ಕ್ರಿಯೆಗಳಿಗೆನಾನು ಇಳಿಯುವುದಿಲ್ಲ. ಕಸಾಪ ಕನ್ನಡಿಗರಪ್ರಾತಿನಿಧಿಕ ಸಂಸ್ಥೆ.
ರಾಜಕೀಯಕ್ಕೆ ಹೊರತಾದ ಸಂಸ್ಥೆ.ಹಾಗಾಗಿ ರಾಜಕೀಯ ಹೊರತಾದ ವ್ಯಕ್ತಿಗಳು ಆರಿಸಿಬರಬೇಕೆಂಬುದು ನಮ್ಮ ಆಶಯ. ಹಾಗಾಗಿಈಗಾಗಲೇ ಸಾಹಿತಿಯಾಗಿ ಗುರುತಿಸಿಕೊಂಡಿರುವನನಗೆ ಬೆಂಬಲ ನೀಡಲಿದ್ದಾರೆಂಬ ನಂಬಿಕೆ ನನಗಿದೆಎಂದರು.ಕರ್ನಾಟಕ ಲೇಖಕಿಯರ ಸಂಘದ ತುಮಕೂರುಜಿಲ್ಲಾಧ್ಯಕ್ಷ ಮಲ್ಲಿಕಾ ಮಾತನಾಡಿ, ಸಹೋದರಿ ಶೈಲಾಉತ್ತಮ ಸಂಘಟನಾ ಚತುರರು, ಅಲ್ಲದೆ ಹಲವಾರುಹೋರಾಟಗಳಲ್ಲಿ ತಮ್ಮನ್ನು ತಾವುತೊಡಗಿಕೊಂಡಿದ್ದಾರೆ. ಹಾಗಾಗಿ ತುಮಕೂರು ಜಿಲ್ಲಾಲೇಖಕಿಯರ ಸಂಘ ಅವರನ್ನು ಬೆಂಬಲಿಸಲುತೀರ್ಮಾನಿಸಿದೆ ಎಂದರು.
ಅನ್ನಪೂರ್ಣ,ಲೇಖಕಿಯರ ಸಂಘದ ಮಾಜಿ ಅಧ್ಯಕ್ಷ ಸಿ.ಎನ್.ಸುಗುಣಾದೇವಿ, ಕಸಾಪ ಪದಾಧಿಕಾರಿ ರಾಣಿ, ರಾಕ್‌ಲೈನ್ ರವಿಕುಮಾರ್, ಶಿಕ್ಷಕ ಮಹಾಲಿಂಗಪ್ಪ, ಮಹಿಳಾಮುಖಂಡರಾದ ಜಯಮ್ಮ, ಮಂಜುಳಾ, ಅಂಬಿಕಾ,ತೋಪನಯ್ಯ ಇದ್ದರು.