Advertisement

ಕಾಡಾನೆ ಹಾವಳಿ ತಡೆಗೆ ಸಚಿವರ ಬಳಿಗೆ ನಿಯೋಗ

01:39 PM Apr 17, 2021 | Team Udayavani |

ಹಾಸನ: ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಹಾವಳಿತಡೆಗೆ ಸರ್ಕಾರ ಕೈಗೊಳ್ಳಬೇಕಾದ ತುರ್ತುಕ್ರಮಗಳಮನವರಿಕೆ ಮಾಡಿಕೊಡಲು ಏ.19 ರಂದು ಅರಣ್ಯಸಚಿವರನ್ನು ಭೇಟಿಯಾಗಲು ಬೆಂಗಳೂರಿಗೆ ನಿಯೋಗತೆರಳುವುದಾಗಿ ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

Advertisement

ಕಾಡಾನೆ ದಾಳಿಯಿಂದತೀವ್ರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಸಕಲೇಶಪುರ ತಾಲೂಕು ಹಳೇಕೆರೆಗ್ರಾಮದ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್‌ ಅವರನ್ನುಭೇಟಿಯಾಗಿದ್ದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ,ಅರಣ್ಯ ಸಚಿವರು ಸಕಲೇಶಪುರದಲ್ಲಿ ಸಭೆ ನಡೆಸಿದಸಂದರ್ಭದಲ್ಲಿ ಕಾಡಾನೆಗಳ ಹಾವಳಿ ತಡೆಯುವ ಶಾಶ್ವತಕ್ರಮಗಳಿಗಾಗಿ ದೆಹಲಿಗೆ ಶಾಸಕರ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದರು.

ಆದರೆ, ಇದುವರೆಗೂ ಆ ಭರವಸೆಈಡೇರಿಲ್ಲ ಎಂದರು. ಸಕಲೇಶಪುರ ತಾಲೂಕು ಹಳೇಕೆರೆಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಶಿವಣ್ಣ ಎಂಬವರ ಮೇಲೆಆನೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದೀಗ ಅದೇ ಗ್ರಾಮದಚಂದ್ರಶೇಖರ್‌ ಅವರ ಮೇಲೆ ಆನೆ ದಾಳಿ ನಡೆಸಿದೆ. ಅವರಆಸ್ಪತ್ರೆ ಖರ್ಚನ್ನು ಸಂಪೂರ್ಣವಾಗಿ ಸರ್ಕಾರದಿಂದಲೇಭರಿಸಲು ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next