Advertisement
ಚೈತ್ರ ಪೂರ್ಣಿಮಾದಿನವಾದ ಏ.27ರಂದು ನಡೆಯುವ ಕರಗಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾಎರಡನೇ ಅಲೆಯ ಕರಿನೆರಳು ಈ ಬಾರಿಯೂಉತ್ಸವದ ಮೇಲೆ ಬಿದಿದೆ. ಹೀಗಾಗಿ, ಸತತಎರಡನೇ ವರ್ಷವೂ ಸರಳ ಕರಗ ಮಹೋತ್ಸವನಡೆಸಲು, ಪಾಲಿಕೆ, ಜಿಲ್ಲಾಡಳಿತ ಸಜ್ಜಾಗಿದೆ.
Related Articles
Advertisement
ಆದರೆ,ಕೊರೊನಾ ಹೊಸ ಮಾರ್ಗಸೂಚಿ, ರಾತ್ರಿ ಕರ್ಫ್ಯೂ,ವೀಕೆಂಡ್ ಕರ್ಫ್ಯೂ ಮಧ್ಯೆ ಅರ್ಚಕರೂ ಸೇರಿಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅವಕಾಶನೀಡಲಾಗಿದೆ.ಕೊರೊನಾ ಮಾರ್ಗಸೂಚಿ ಹಾಗೂ ಕರಗಉತ್ಸವ ಸಮಿತಿ ಆದೇಶದಂತೆ ಜಿಲ್ಲಾಡಳಿತದಿಂದಕೇವಲ ಐದು ಕುಟುಂಬಗಳಿಗೆ ಪಾಸ್ ನೀಡಲಾಗಿದೆ.ಪಾರಂಪರಿಕವಾಗಿ ವೈನಿಕುಲ ಕ್ಷತ್ರಿಯ ಅಥವಾತಿಗಳರ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರಕರಗ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾರಂಪರಿಕ ಕರಗದ ಹಿನ್ನೆಲೆ: ದ್ವಾಪರ ಯುಗದಲ್ಲಿರಾಕ್ಷಸರ ಪಡೆಗಳನ್ನು ಸದೆಬಡಿಯಲು ದ್ರೌಪದಿಜನ್ಮ ತಾಳಿದ್ದಳು ಎಂಬುದು ಇಲ್ಲಿನ ನಂಬಿಕೆ. ಆದರೆ,ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗತಿಮಿರಾಸುರ ಅನ್ನೋ ರಾಕ್ಷಸ ಮಾತ್ರಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿತಿಮಿರಾಸುರನನ್ನು ಸಂಹರಿಸುತ್ತಾಳೆ ಎನ್ನುವ ಪ್ರತೀತಿಇದೆ. ಹೀಗಾಗಿ, ಬೆಂಗಳೂರಿನ ಕರಗ ಮಹೋತ್ಸವ ಪ್ರಖ್ಯಾತಿ ಪಡೆದಿದೆ.