Advertisement

ದೇಶದ ಶೇ.40 ಮಂದಿಗೆ ಕ್ಷಯ ರೋಗ

03:43 PM Mar 23, 2021 | Team Udayavani |

ಹಾಸನ: ದೇಶದಲ್ಲಿ ಶೇ.40 ಜನ ಕ್ಷಯರೋಗ ಸೋಂಕಿತರಿದ್ದು, ಪ್ರತಿದಿನ 6000 ಜನ ಹೊಸ ಕ್ಷಯರೋಗಿ ಗಳಾಗುತ್ತಿದ್ದಾರೆ. ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ ಆರಾಧ್ಯ ಆತಂಕ ವ್ಯಕ್ತಪಡಿಸಿದರು.

Advertisement

ಯಾವುದೇ ಭಾಗಕ್ಕಾದರೂ ಕ್ಷಯ ಬರಬಹುದು: ಕ್ಷಯ ರೋಗದ ಅರಿವು ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕ್ಷಯ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ. ಕ್ಷಯ ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ಕ್ಯು ಲೋಸಿಸ್‌ ಎಂಬ ಸೂಕ್ಷ್ಮಣು ಜೀವಿಯಿಂದ ಹರಡುತ್ತಿದ್ದು, ಇದು ದೇಹದ ಯಾವುದೇ ಭಾಗಕ್ಕಾದರೂ ಬರಬಹುದು ಎಂದು ತಿಳಿಸಿದರು.

ಕ್ಷಯರೋಗದಲ್ಲಿ ಶ್ವಾಸಕೋಶ ಕ್ಷಯ ಮತ್ತು ಶ್ವಾಸಕೋಶೇತರ ಕ್ಷಯ ಎಂಬ ಎರಡು ವಿಧಗಳಿದ್ದು ಅತಿಯಾದ ಕೆಮ್ಮು,ಶೀತ, ಜ್ವರ ಇದರ ಲಕ್ಷಣಗಳಾಗಿವೆ ಎಂದರು.

ರೋಗ ಲಕ್ಷಣ: ಒಬ್ಬರಿಂದ ಮತ್ತೂಬ್ಬರಿಗೆ ಹರಡುವಂತಹಕಾಯಿಲೆ ಯಾಗಿದ್ದು, 2 ವಾರಗಳಿಗೆ ಮೇಲ್ಪಟ್ಟ ಕೆಮ್ಮು, ಕ್ಷಯರೋಗದ ಸಾಮಾನ್ಯ ಲಕ್ಷಣ. ಸಂಜೆ ವೇಳೆ ಜ್ವರ ಬರುವುದು, ಕೆಲವೊಮ್ಮೆ ಕಫ‌ದ ಜತೆ ರಕ್ತ ಬೀಳುವುದು, ಎದೆ ನೋವು ತೂಕ ಕಡಿಮೆಯಾಗುವುದು, ಹಸಿವಾಗದಿರುವುದು ಇದರ ಸಾಮಾನ್ಯ ಲಕ್ಷಣವಾಗಿದೆ ಎಂದು ತಿಳಿಸಿದರು.

ಇಂತಹ ಲಕ್ಷಣಗಳೇನಾದರೂ ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹು ದಾಗಿದೆ. ಹೆಚ್ಚಾಗಿ ಎಚ್‌ಐವಿ ಸೋಂಕಿತರು, ಸಕ್ಕರೆ ಕಾಯಿಲೆ ಇರು ವವರು ಮತ್ತು ಧೂಮಪಾನಿಗಳು ಈ ರೋಗದಸೋಂಕಿಗೆ ಬಹುಬೇಗನೆ ಒಳಗಾಗುತ್ತಾರೆ ಎಂದು ಹೇಳಿದರು.

Advertisement

6 ತಿಂಗಳು ಚಿಕಿತ್ಸೆ ಅವಶ್ಯ: ಈ ಕ್ಷಯರೋಗವನ್ನು ನೇರ ನಿಗಾವಣೆ ಅವಧಿ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸ ಬಹುದಾಗಿದ್ದು, ಆರು ತಿಂಗಳು ತಪ್ಪದೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಅರಿವು ಕಾರ್ಯಕ್ರಮ: ಮುಂದಿನ ದಿನಗಳಲ್ಲಿ ಸರ್ಕಾರಿಕಟ್ಟಡಗಳಿಗೆ ಕೆಂಪು ದೀಪ ಅಳವಡಿಸುವ ಮೂಲಕ, ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಹಾಗೂಬೀದಿ ನಾಟಕದ ಮೂಲಕ ಕ್ಷಯ ರೋಗದ ಬಗ್ಗೆ ಅರಿವುಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದುತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು

ರೋಗಿಗಳಿಗೆ ಸಹಾಯಧನ :

ಕ್ಷಯ ರೋಗಕ್ಕೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿಉಚಿತವಾಗಿ ಪರೀಕ್ಷೆ ನಡೆಸಲಾಗುವುದರ ಜತೆಗೆ ಚಿಕಿತ್ಸೆನೀಡಲಾಗುತ್ತದೆ. ಚಿಕಿತ್ಸೆ ಪಡೆಯುವ ಪ್ರತಿಯೊಬ್ಬ ರೋಗಿಗೆಚಿಕಿತ್ಸೆ ಮುಗಿಯುವವರೆಗೂ ಮಾಸಿಕ 500 ರೂ.ಗಳಂತೆ 3ಸಾವಿರದಿಂದ 12 ಸಾವಿರ ರೂ.ಗಳ ವರೆಗೆ ಸಹಾಯಧನವನ್ನು ನೇರವಾಗಿ ಚಿಕಿತ್ಸೆ ಪಡೆಯುವ ವ್ಯಕ್ತಿಗೆಪಾವತಿಸಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ ಆರಾಧ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next