Advertisement

ಏ.9ರಂದು ಜನಜಾಗೃತಿ ಕಾರ್ಯಕ್ರಮ: ಸೇಡಂ

12:31 PM Mar 13, 2022 | Team Udayavani |

ಬೀದರ: ಬರುವ ಏ.9ರಂದು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಹಾಗೂ ಬಸವಕಲ್ಯಾಣವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡುವ ಯೋಜನೆಗಳ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಅನುಭವ ಮಂಟಪ ನಿರ್ಮಾಣದ ಹೊಣೆ ಹೊತ್ತ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ಗಾಂಧಿಗಂಜ್‌ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಬಸವಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನಜಾಗೃತಿ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಆರು ಅಂತಸ್ತಿನ ನೂತನ ಅನುಭವ ಮಂಟಪ 150 ಅಡಿ ಎತ್ತರದ್ದಾಗಿರಲಿದೆ. 770 ಕಂಬಗಳು, ಕಾಯಕನಗರ, ಭಕ್ತರಿಗೆ ಪೂಜೆ, ವಸತಿ, ಡಿಜಿಟಲ್‌ ಗ್ರಂಥಾಲಯ ಮತ್ತಿತರ ವ್ಯವಸ್ಥೆ ಒಳಗೊಳ್ಳಲಿದೆ. ತ್ರಿಪುರಾಂತ ಕೆರೆ, ಪರುಷ ಕಟ್ಟೆಯನ್ನೂ ಪುನರ್‌ ನಿರ್ಮಾಣ ಮಾಡಲು ಯೋಜಿಸಲಾಗಿದೆ. 2027ರ ವೇಳೆಗೆ ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರೇಕ್ಷಣೀಯ ಸ್ಥಳವಾಗಲಿದೆ. ನಿತ್ಯ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದರು.

ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಶರಣರ ವಿಚಾರಗಳ ಸಂಗಮವೇ ಅನುಭವ ಮಂಟಪ. ಶರಣ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ. ಶರಣ ಸಂಸ್ಕೃತಿಗೆ ಧಕ್ಕೆ ಉಂಟಾಗದಂತೆ ನೂತನ ಅನುಭವ ಮಂಟಪ ನಿರ್ಮಾಣವಾಗುವ ಭರವಸೆ ಇದೆ. ಏ.9ರ ಕಾರ್ಯಕ್ರಮದಲ್ಲಿ ನಾಡಿನ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಮಾತನಾಡಿ, ನವದೆಹಲಿಯಲ್ಲಿ ನಿರ್ಮಿಸುತ್ತಿರುವ ನೂತನ ಸಂಸತ್‌ ಭವನಕ್ಕೆ ಬಸವೇಶ್ವರ ಸಂಸತ್ತು ಎಂದು ಹೆಸರಿಡಬೇಕೆಂದು ಬೇಡಿಕೆ ಮಂಡಿಸಿದರು.

Advertisement

ಬಿಡಿಎ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬಸವಕಲ್ಯಾಣ ಪ್ರವಾಸಿ ಕಾರಿಡಾರ್‌ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು. ಮುಖಂಡರಾದ ಆನಂದ ದೇವಪ್ಪ, ರವಿ ಪಾಪಡೆ, ಸುರೇಶ ಮರೂರಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್‌, ಬಸವದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್‌ ಪಾಟೀಲ ಖಾಜಾಪುರ, ಮುಖಂಡರಾದ ಬಿ.ಎಸ್‌. ಕುದರೆ, ಶಂಕರೆಪ್ಪ ಹೊನ್ನಾ, ಜೈರಾಜ ಖಂಡ್ರೆ, ರಾಜೇಂದ್ರ ಜೊನ್ನಿಕೇರಿ, ಸುರೇಶ ಸ್ವಾಮಿ, ವಿಶ್ವನಾಥ ಕಾಜಿ, ಶರಣಪ್ಪ ಲಾಡಗೇರಿ, ಹಾವಶೆಟ್ಟಿ ಪಾಟೀಲ, ಶಾಂತಾಬಾಯಿ ಬಿರಾದಾರ, ಡಾ| ಇಂದುಮತಿ ಪಾಟೀಲ, ಮಲ್ಲಿಕಾರ್ಜುನ ಪಂಚಾಕ್ಷರಿ, ಚಂದ್ರಶೇಖರ ಹೆಬ್ಟಾಳೆ, ಸಿ.ಎಸ್‌. ಪಾಟೀಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next