ವಾಡಿ: ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಶುಕ್ರವಾರ ಭಕ್ತರ ಸಂಭ್ರಮ ಮನೆಮಾಡಿತ್ತು. ಕುಮಾರಿ ಮುತ್ತೆ„ದೆಯರ ದಂಡೇ ಅಲ್ಲಿ ಸೇರಿತ್ತು. ಪಟಾಕಿಗಳ ಸದ್ದುಗದ್ದಲವಿತ್ತು.
ಜಾನಪದ ಗೀತೆಗಳ ಸಂಗೀತವಿತ್ತು. ಭಕ್ತಿಯ ಗಾಯನದಲ್ಲಿ ಮಠದ ಆವರಣ ಮುಳುಗಿತ್ತು. ಮಠದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಸಕ್ತ ಪೀಠಾ ಧಿಪತಿ ಡಾ| ಸಿದ್ದ ತೋಟೇಂದ್ರ ಶಿವಾಚಾರ್ಯರ 57ನೇ ಜನ್ಮದಿನದ ಸಡಗರ ನಾಡ ಹಬ್ಬದಂತೆ ಕಾಣುತ್ತಿತ್ತು.
ಶ್ರೀ ಮಠದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡಿದ ಡಾ| ಸಿದ್ಧ ತೋಟೇಂದ್ರ ಶ್ರೀಗಳು, ತಮ್ಮ ಜನ್ಮದಿನದ ನಿಮಿತ್ತ 501 ಕುಮಾರಿ ಮುತ್ತೆ„ದೆಯರಿಗೆ ಉಡಿ ತುಂಬಿ ಆಶೀರ್ವಾದ ಮಾಡಿದರು. ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ಕೋರಿಸಿದ್ದೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು. ಸಂಜೆ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಕತೃì ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ ನಡೆಯಿತು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ದಂಪತಿ ಕುಮಾರಿ ಮುತ್ತೆ„ದೆಯರ ಉಡಿಯಲ್ಲಿ ಹಣ್ಣು ಇಟ್ಟು ಹರಸಿದರು. ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳಾದ ಡಾ| ಸಿದ್ಧ ತೋಟೇಂದ್ರ ಸ್ವಾಮೀಜಿ, ಬಹುದಿನಗಳಿಂದ ಕುಮಾರಿ ಮುತ್ತೈದೆಯರಿಗೆ ಉಡಿ ತುಂಬುವ ಯೋಜನೆ ಇತ್ತು.
ಈ ಬಾರಿ ಕೈಗೂಡಿದೆ ಎಂದರು. ಭಕ್ತರಿಂದ ಶ್ರೀಗಳ ಪಾದಪೂಜೆ ನಡೆಯಿತು. ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳಿ, ಯಾದಗಿರಿ ಬಿಜೆಪಿ ಅಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್, ಮುಖಂಡರಾದ ಶರಣಕುಮಾರ ಜಾಲಹಳ್ಳಿ, ಮಹಾದೇವ ಗಂವಾರ ಇತರರು ಪಾಲ್ಗೊಂಡಿದ್ದರು.