Advertisement
ಯುಟ್ಯೂಬ್ ಚಾನೆಲ್ ಮೂಲಕ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಬಿತ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿರಬೇಕು ಮಕ್ಕಳು ಮಾತ್ರವಲ್ಲ ಪೋಷಕರನ್ನು ಪ್ರೇರೇಪಿಸಬೇಕು. ಅಂದಾಜು 10 ರಿಂದ 15 ನಿಮಿಷಗಳ 4ರಿಂದ 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಸೂಕ್ತ ಮತ್ತು ಸಮಂಜಸವೆನಿಸುವ ಯಾವುದೇ ವೀಡಿಯೋವನ್ನು ಸಿದ್ಧಪಡಿಸಬಹುದು. ವೀಡಿಯೋ 10ರಿಂದ 15 ನಿಮಿಷಗಳ ಗರಿಷ್ಠ ಅವಧಿಯುಳ್ಳದ್ದಾಗಿರಬೇಕು. ವಿವರಿಸಲಾಗುವ ವಿಷಯಗಳು ಹೊಸದಾಗಿದ್ದು, ಮಕ್ಕಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸುವಂತಿರಬೇಕು ಮತ್ತವರನ್ನು ತೊಡಗಿಸುವಂಥ ಕೆಲವು ಚಟುವಟಿಕೆಗಳನ್ನೂ ಸಹ ಒಳಗೊಂಡಿರಬೇಕು. ಕಥಾವಾಚನ, ಪುಸ್ತಕ ಪರಿಚಯ ಓದು, ಪ್ರಯೋಗಗಳು/ಚಟುವಟಿಕೆಗಳು/ಮ್ಯಾಜಿಕ್ ಇತ್ಯಾದಿಗಳ ವಿವರಣೆಯುಕ್ತ ಪ್ರದರ್ಶನ, ಗಾದೆಗಳು, ಒಗಟುಗಳನ್ನು ಬಿಡಿಸುವ ವೀಡಿಯೋ ಮಾಡಬಹುದು. ಕಾರ್ಯಕ್ರಮವನ್ನು ಮುಂದಿನ 50 ದಿನಗಳವರೆಗೆ ಪ್ರಸಾರ ಮಾಡಲಾಗುತ್ತದೆ. ವೀಡಿಯೋ ಸಾಮಗ್ರಿಯನ್ನು ಇ-ಮೇಲ್ makkalavanissk@gmail.com ಅಥವಾ ಗೂಗಲ್ ಡ್ರೆ„ವ್, ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ- 080-22483040 ಅಥವಾ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಡಾ| ಎಂ.ಟಿ. ರೇಜು ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.