Advertisement

ಲಾಭದ ಲೈನ್‌ ಅಂಡ್‌ ಲೆನ್ತ್

11:45 AM May 28, 2019 | Sriram |

ಇಂಗ್ಲೆಂಡಿನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಆರಂಭಾವಾಗುವ ದಿನಗಳ ಹತ್ತಿರಾಗುತ್ತಿವೆ. ಇದೇ ವೇಳೆಗೆ ಆನ್‌ಲೈನ್‌ ಗೇಮಿಂಗ್‌ ಇಂಡಸ್ಟ್ರೀ ಕೂಡ ಭಾರಿ ಹುಮ್ಮಸ್ಸಿನಲ್ಲಿ ಎದ್ದು ನಿಂತಿದೆ. ಡ್ರೀಮ್‌ 11 ಹೆಸರಿ ಕ್ರೀಡಾ ಸ್ಪರ್ಧೆ, 500ರೂ. ಹೂಡಿದವನು ಲಕ್ಷ ರುಪಾಯಿ ಗಳಿಸಬಹುದು ಎಂಬ ಊಹೆಯೊಂದನ್ನು ಹುಟ್ಟುಹಾಕಿದೆ. ಆನ್‌ಲೈನ್‌ ಗೇಮಿಂಗ್‌ ಉದ್ಯಮದ ಈ ಮರೆದಾಟ ಏನೇನೆಲ್ಲಾ ಬದಲಾವಣೆ ಉಂಟುಮಾಡಬಹುದೋ ಹೇಳಲು ಸಾಧ್ಯವಿಲ್ಲ…

Advertisement

ಬಹುಶಃ ಮ್ಯಾಚ್‌ ಫಿಕ್ಸಿಂಗ್‌ನ ಹಗರಣ ನೋಡಿದ ಬಹುಸಂಖ್ಯಾತ ಭಾರತೀಯರಿಗೆ ಕ್ರಿಕೆಟ್‌ಗೆ ಅನ್ವಯಯಿಸಸಿದಂತೆ ಹೊಸದ್ಯಾವುದೋ ಸೃಷ್ಟಿಯಾದರೆ ಅದರ ಕಡೆಗೆ ಮೊತ್ತಮೊದಲನೆಯದಾಗಿ ಅನುಮಾನವೇ ಕಾಡುತ್ತದೆ. ಸಾಂ ಕ ಆಟವನ್ನು ಮ್ಯಾಚ್‌ ಫಿಕ್ಸಿಂಗ್‌ ಮುಟ್ಟಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸವನ್ನು ಅಲುಗಾಡಿಸಿದ ಮೊಹಮದ್‌ ಅಜರುದ್ದೀನ್‌, ಮನೋಜ್‌ ಪ್ರಭಾಕರ್‌, ಶ್ರೀಶಾಂತ್‌ ಕಾರಣದಿಂದ ಈಗಷ್ಟೇ ಮುಕ್ತಾಯವಾದ ಐಪಿಎಲ್‌ ಸಂಚಿಕೆಯ ಪಂದ್ಯಗಳ ನಾಟಕೀಯ ತಿರುವುಗಳಲ್ಲಿ ಭಾರತೀಯ ಮ್ಯಾಚ್‌ ಅಥವಾ ಸ್ಪಾಟ್‌ ಫಿಕ್ಸಿಂಗ್‌ನ ಸಾಧ್ಯತೆಯ ಬಗ್ಗೆಯೇ ಶಂಕೆ ವ್ಯಕ್ತಪಡಿಸುವಂತಾಗಿದೆ.

ನನ್ನ ಕಲ್ಪನೆಯ ತಂಡ!
ಒಂದು ರೀತಿಯ ಜೂಜು, ಮತ್ತೂಂದು ಲೆಕ್ಕದಲ್ಲಿ ಬುದ್ಧಿಮತ್ತೆಯ ಸವಾಲಾಗಿ ಕಾಣಬಹುದಾದ “ಡ್ರೀಮ್‌ ಇಲೆವೆನ್‌’ ಆನ್‌ಲೈನ್‌ ಸ್ಪರ್ಧೆ ಹೊಸ ವ್ಯಾಪಾರ ಸಾಧ್ಯತೆಯನ್ನು ವ್ಯಾಪಾರಿ ರಂಗದಲ್ಲಿ ತೆರೆದಿಟ್ಟಿದೆ. ಈ ವರ್ಷದ ಇಂಡಿಯನ್‌ ಪ್ರೀಮಮಿಯರ್‌ ಸಂದರ್ಭದಲ್ಲಿ ಆನ್‌ಲೈನ್‌ ಆ್ಯಪ್‌ ಮೂಲಕ ಸಾಮಾನ್ಯ ಕ್ರಿಕೆಟ್‌ ಅಭಿಮಾನಿಯೊಬ್ಬ ತನ್ನ ಆಯ್ಕೆಯ ತಂಡವನ್ನು ಆರಿಸಿ, ಅದು ವಾಸ್ತವ ತಂಡದೊಂದಿಗೆ ಹೋಲಿಕೆಯಾದರೆ ರೊಕ್ಕದ ಖಜಾನೆಯನ್ನೇ ತನ್ನದಾಗಿಸಿಕೊಳ್ಳಬಹುದಾದ “ಡ್ರೀಮ್‌ 11′ ಫ್ಯಾಂಟಸಿ ಗೇಮ್‌ ಸ್ಪರ್ಧೆ ಕೂಡ ಐಪಿಎಲ್‌ನಷ್ಟೇ ಜನಪ್ರಿಯತೆ ಪಡೆಯಿತು.

ಆಟ ಸಿಂಪಲ್‌. ಡ್ರೀಮ್‌ 11ನಲ್ಲಿ ನಮ್ಮದೊಂದು ಖಾತೆಯನ್ನು ಆರಂಭಿಸಬೇಕು. ಅಲ್ಲಿ ಬೇಸ್‌ಬಾಲ್‌, ಫ‌ುಟಬಾಲ್‌, ಹಾಕಿ, ನಮ್ಮೂರಿನ ಕಬ್ಬಡ್ಡಿ, ಎನ್‌ಬಿಎ ಸೇರಿದಂತೆ ವಿವಿಧ ಆಟಗಳ ಆಯ್ಕೆಇದೆ. ಇವುಗಳಲ್ಲಿ ಐಪಿಎಲ್‌ನ್ನು ಆಯ್ಕೆ ಮಾಡಿಕೊಳ್ಳುವ ನಾವು, ಆ ದಿನ ಇರುವ ಅಥವಾ ಮುಂದಿನ ದಿನಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾದ 11 ಆಟಗಾರರ ತಂಡವನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮದೇ ಲೆಕ್ಕಾಚಾರ, ವಿಶ್ಲೇಷಣೆ, ಸುದ್ದಿಗಳು ಮೊದಲಾದ ಆಕರಗಳನ್ನು ಆಧರಿಸಿ ತಂಡವನ್ನು ಆರಿಸಬೇಕು. ಉದಾಹರಣೆಗೆ, ಈ ಬಾರಿಯ ಐಪಿಎಲ್‌ ಫೈನಲ್‌ ಪಂದ್ಯವನ್ನು ಡ್ರೀಮ್‌ 11ಗೆ ಆಯ್ದುಕೊಂಡರೆ, ಟಾಸ್‌ ಹಾಕುವ ಅರ್ಧ ಘಂಟೆಗೆ ಮುನ್ನ ಈ ಎರಡು ತಂಡಗಳಿಂದ ಫೈನಲ್‌ ಆಡುವ ತಲಾ 11 ಜನರ ತಂಡವನ್ನು ಆಯ್ಕೆ ಮಾಡಬೇಕು. ಒಂದೊಮ್ಮೆ ಟಾಸ್‌ ಸಂದರ್ಭದಲ್ಲಿ ನಾಯಕರು ಕೈ ಬದಲಿಸಿಕೊಳ್ಳುವ ಆಡುವ ತಂಡದ ಪಟ್ಟಿಯ ಜೊತೆ ನಾವು ಆರಿಸಿರುವ ತಂಡವೂ ಸಂಪೂರ್ಣವಾಗಿ ಹೋಲಿಕೆಯಾದರೆ ನಮಗೆ ಹತ್ತು ಹಲವು ಮಾದರಿಗಳಲ್ಲಿ ನಗದು ರೂಪದ ಬಹುಮಾನಗಳು ಕಾದಿರುತ್ತವೆ!

ಹೊಸದಲ್ಲ ಇದು!
ಐಪಿಎಲ್‌ಗೆ ಮುನ್ನ 50 ಮಿಲಿಯನ್‌ ಚಂದಾದಾರರು ಡ್ರೀಮ್‌ 11ಗಿದ್ದರೆ ಈಗ ಆ ಸಂಖ್ಯೆ 60 ಮಿಲಿಯನ್‌ಗೆ ಏರಿದೆ. ಆನ್‌ಲೈನ್‌ ಫ್ಯಾಂಟಸಿ ಗೇಮ್‌ ಆಡುವ ವಿವಿಧ ವೆಬ್‌, ಆ್ಯಪ್‌ ಕಂಪನಿಗಳಲ್ಲಿ ಡ್ರೀಮ್‌ 11 ಒಂದು. ಇದಲ್ಲದೆ ಫೈಂಟೈನ್‌, ಹಾಲಾಪ್ಲೇ, ಕಳೆದ ತಿಂಗಳು ಪಾದಾರ್ಪಣ ಮಾಡಿದ ಕ್ರಿಕ್‌ಪ್ಲೇ ಮೊದಲಾದ ವೆಬ್‌ ಕಂಪನಿಗಳಿವೆ. ಯುರೋಪ್‌, ಅಮೇರಿಕಾಗಳ ಇತಿಹಾಸದತ್ತ ನಿರುಕಿಸಿದರೆ ಈ ಫ್ಯಾಂಟಸಿ ಗೇಮ್‌ ಕಲ್ಪನೆ ಎರಡು ದಶಕಗಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ.

Advertisement

ಆರ್ಬಿಸ್‌ ರೀಸರ್ಚ್‌ ಮಾರುಕಟ್ಟೆಯನ್ನು ವಿಶ್ಲೇಷಿಸಿರುವ ಪ್ರಕಾರ, ಈಗಿನ 13 ಬಿಲಿಯನ್‌ ಯುಎಸ್‌ ಡಾಲರ್‌ಗಳ ಫ್ಯಾಂಟಸಿ ಗೇಮ್‌ ಉದ್ಯಮ 2025ರ ವೇಳೆಗೆ 33 ಬಿಲಿಯನ್‌ ಡಾಲರ್‌ಗೆ ವೃದ್ಧಿಸುವ ಎಲ್ಲ ಸಾಧ್ಯತೆಗಳಿವೆ. ವಾಸ್ತವವಾಗಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಹಣ ಹಾಕಬೇಕಾದ ಅಗತ್ಯವಿಲ್ಲದ ಫ್ಯಾಂಟಸಿ ಗೇಮ್‌ ವೆಬ್‌, ಒಂದು ರೀತಿಯಲ್ಲಿ ಬೆಟ್ಟಿಂಗ್‌ ತಾಣವೇ. ಇದರಲ್ಲಿ ಕೂಡ ನಡೆಯುವುದು ಜಾಣ್ಮೆಯ ಜೂಜು! ಜನರನ್ನು ಆಕರ್ಷಿಸಲು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಗೇಮಿಂಗ್‌ ವೆಬ್‌, ಆ್ಯಪ್‌ಗ್ಳು ಬಂದರೆ ಅಚ್ಚರಿ ಬೇಡ.

ಫ್ಯಾಂಟಸಿ ಗೇಮ್‌ ಆಡುವುದು ಉಚಿತವೇನಲ್ಲ. ಒಂದು ಐಪಿಎಲ್‌ ಪಂದ್ಯದ ಆಡುವ ತಂಡಗಳನ್ನು ಊಹಿಸಿ ನಮ್ಮ ತಂಡವನ್ನು ಅಪ್‌ಲೋಡ್‌ ಮಾಡಲು ಕನಿಷ್ಠ 10 ರೂ. ನಿಂದ ನೂರಾರು ರೂಪಾಯಿಗಳ ಶುಲ್ಕ ತೆತ್ತು ಗೇಮ್‌ ಆಡಬಹುದು. ಈ ಹಣವೇ ವೆಬ್‌ ಆದಾಯ. 10 ರೂ. ಕೊಟ್ಟು ಟಿಕೆಟ್‌ ಪಡೆದರೆ ನಮ್ಮ ಊಹೆ ಸರಿಇದ್ದರೂ ಒದಗಿಬರುವ ಬಹುಮಾನದ ಮೊತ್ತ ಕಡಿಮೆ. ತೊಡಗಿಸುವ ಹಣ, ರಿಸ್ಕ್ ಫ್ಯಾಕ್ಟರ್‌ ಆಧರಿಸಿ ಬಹುಮಾನದ ಮೊತ್ತ ಹೆಚ್ಚುತ್ತದೆ. ಈ ಬಹುಮಾನ 100 ರೂ.ನಿಂದ 10 ಕೋಟಿ ರೂ.ವರೆಗೂ ಇದೆ. ಆ ಲೆಕ್ಕದಲ್ಲಿ ಇದು 10 ರೂ. ಕೊಟ್ಟು ಒಂದು ಲಾಟರಿ ಟಿಕೆಟ್‌ ತೆಗೆದುಕೊಂಡಂತೆಯೂ ಆಗಬಹುದಿತ್ತು. ಆದರೆ ನ್ಯಾಯಾಲಯದ ಪ್ರಕಾರವೇ ಅಲ್ಲ!

ನ್ಯಾಯಾಲಯದ ಬೆಂಬಲ!
ಬ್ರಿಟಿಷ್‌ ಪ್ರಜೆಗಳಿಗೆ ಫ್ಯಾಂಟಸಿ ಗೇಮ್‌ ಕೂಡ ಅವರ ಮಜಾ ಜೀವನದ ಒಂದು ಭಾಗ. ಅಲ್ಲಿ ಇಂಗ್ಲೀಷ್‌ ಫ‌ುಟ್‌ಬಾಲ್‌ ಪ್ರೀಮಿಯರ್‌ ಲೀಗ್‌ ಆಗಸ್ಟ್‌ನಿಂದ ಮೇವರೆಗಿನ 38 ಗೇಮ್‌ಗಳಲ್ಲಿ ಊಹೆಗಳನ್ನು ಮಾಡಲು ಅಲ್ಲಿನವರು “ಫ್ಯಾಂಟಸಿ ಸೀಸನ್‌ ಟಿಕೆಟ್‌’ ಪಡೆದುಕೊಳ್ಳುವುದು ಹೆಚ್ಚು! ಅಷ್ಟಕ್ಕೂ ಆ ದೇಶಗಳಲ್ಲಿ ಜೂಜು ಅಧಿಕೃತವಾದುದು, ಸಮಸ್ಯೆ ಇಲ್ಲ. ಆದರೆ ಭಾರತದಲ್ಲಿ ವಿವಿಧ ಬೆಟ್ಟಿಂಗ್‌ಗೆ ಕಾನೂನಾತ್ಮಕವಾದ ತಡೆ ಇರುವಾಗ ಈ ಆಟ ಹೇಗೆ ದೇಶದೊಳಗೆ ಪ್ರವೇಶ ಪಡೆಯಿತು ಎಂಬ ಪ್ರಶ್ನೆ ಮೂಡಿದರೆ ಅದು ಸ್ವಾಭಾವಿಕ.

ವಿವಿಧ ಕೋರ್ಟ್‌ಗಳ ತೀರ್ಪು ಒಂದು ಅಂಶವನ್ನು ಪದೇ ಪದೇ ಸ್ಪಷ್ಟಪಡಿಸಿವೆ. ಬುದ್ಧಿ ಕೌಶಲವನ್ನು ಬಳಸಿಕೊಳ್ಳುವ ಆಟಗಳನ್ನು ಗ್ಯಾಂಬ್ಲಿಂಗ್‌ ಎನ್ನಲಾಗುವುದಿಲ್ಲ. ಯಾವ ಆಯ್ಕೆ ಕೇವಲ ಅದೃಷ್ಟವನ್ನು ಮಾತ್ರ ಆಧರಿಸಿರುತ್ತದೆಯೋ ಅದನ್ನು ಆಟ ಎನ್ನಕೂಡದು. ಒಂದು ಪಂದ್ಯದಲ್ಲಿ ನಿರ್ದಿಷ್ಟ ತಂಡದ ಸೋಲು ಗೆಲುವನ್ನು ಹೇಳುವುದು ಶುದ್ಧ ಅದೃಷ್ಟದ ಮಾತು. ಆದರೆ ಐಪಿಎಲ್‌ನ ಫೈನಲ್‌ ಆಡುವ ಮುಂಬೈ ತಂಡದ 11 ಆಟಗಾರರನ್ನು ಊಹಿಸುವಾಗ, ಅವರು ಈ ಹಿಂದೆ ಆಡಿದ ಪಂದ್ಯಗಳಲ್ಲಿನ ಆಟಗಾರರ ಪ್ರದರ್ಶನ, ತಂಡದ ಸಮತೋಲನ, ಕೋಚ್‌ಗಳ ಚಿಂತನೆ, ಪಿಚ್‌ ಗುಣಾವಗುಣಗಳ ತರ್ಕ, ಆಟದ ದಿನದ ಫಿಟ್‌ ಆಟಗಾರರ ಮಾತಿ ಮೊದಲಾದ ಹತ್ತು ಹಲವು ಅಂಶಗಳನ್ನು ತರ್ಕಿಸಬೇಕಾಗುತ್ತದೆ. ಪತ್ರಿಕೆ, ಟಿವಿ ವಿಶ್ಲೇಷಣೆಗಳನ್ನು ಗಮನಿಸಬೇಕಾಗುತ್ತದೆ. ಹೀಗೆ ಆಲೋಚಿಸುವ ಸಂದರ್ಭದಲ್ಲಿ ಅದೃಷ್ಟವೂ ಜೊತೆಗೂಡಿದರೆ ತಕರಾರಿಲ್ಲ. ಈ ಅರ್ಥದಲ್ಲಿ 1968ರಲ್ಲಿಯೇ ಸುಪ್ರೀಂಕೋರ್ಟ್‌ ಸತ್ಯನಾರಾಯಣ ಪ್ರಕರಣದಲ್ಲಿ ಇಸ್ಪೀಟ್‌ ಎಲೆಗಳ ರಮ್ಮಿ ಆಟವನ್ನು ಜೂಜಲ್ಲ ಅಂತ ಘೋಷಿಸಿತ್ತು.

ಸುಮಾರು ನಾಲ್ಕು ದಶಕಗಳ ನಂತರ 1996ರಲ್ಲಿ ಮತ್ತದೇ ಪ್ರಶ್ನೆ ರೇಸ್‌ ಕುದುರೆ ವಿಷಯದ ಲಕ್ಷ್ಮಣ್‌ ಕೇಸ್‌ ನ್ಯಾಯಾಲಯದ ಮುಂದೆ ಬಂದಾಗಲೂ ಇದೇ ಆಶಯದ ತೀರ್ಪು ಪ್ರಕಟಗೊಂಡಿತ್ತು. ಈ ದೇಶದಲ್ಲಿ ಜೂಜು ಕಾನೂನುಬಾಹಿರ. ಆದರೆ ರಮ್ಮಿ ಆಟ, ಕುದುರೆ ರೇಸ್‌ಗಳನ್ನು ಜೂಜು ಎಂದು ಪರಿಣಿಸಿಲ್ಲ. ಅದೇ ಮಾದರಿಯ ಡ್ರೀಮ್‌ 11 ಸ್ಪರ್ಧೆ ಕೂಡ ಜೂಜಾಗುವುದಿಲ್ಲ!

ಜ್ವರದ ವೇಗ ಏರುವ ಸಾಧ್ಯತೆ!
ಬರಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಸಂದರ್ಭದಲ್ಲೂ ಈ ಡ್ರೀಮ್‌ 11 ಸ್ಪರ್ಧೆಯನ್ನು ವಿವಿಧ ವೆಬ್‌ಗಳು ನಡೆಸಲಿವೆ. ಹೇಳಿ ಕೇಳಿ ಈ ಬಾರಿಯ ವಿಶ್ವಕಪ್‌ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವಾಗ ಇಂಥ ಸ್ಪರ್ಧೆಗಳನ್ನು ನಡೆಸುವ ಹೆಚ್ಚು ಹೆಚ್ಚು ವೆಬ್‌ಗಳು ಸೃಷ್ಠಿಯಾಗಬಹುದು. ಅತಿ ಹೆಚ್ಚಿನ ಗ್ರಾಹಕ ಶಕ್ತಿ ಹೊಂದಿರುವ ಭಾರತದತ್ತ ಈ ಕಂಪನಿಗಳ ದೃಷ್ಟಿ ನೆಟ್ಟಿವೆ. ಪ್ರಸ್ತುತ ಭಾರತೀಯರು ಬಿಡಿ ಪಂದ್ಯಗಳ ಪ್ಲೇಯಿಂಗ್‌ ಇಲೆವೆನ್‌ ಕುರಿತು ತಮ್ಮ ಅನಿಸಿಕೆಯನ್ನು ಡ್ರೀಮ್‌ ಇಲೆವೆನ್‌ ಸ್ಪರ್ಧೆಯಲ್ಲಿ ತುಂಬುವ ವ್ಯವಹಾರ ನಡೆಯುತ್ತಿದ್ದಾರೆ. ಇಡೀ ಸರಣಿಯ ಸೀಸನ್‌ ಟಿಕೆಟ್‌ ಪಡೆದುಕೊಳ್ಳುತ್ತಿರುವವರು ಕಡಿಮೆ. ಆದರೆ ಒಮ್ಮೆ ರುಚಿ ಹಬ್ಬಿಸಿದರೆ ಈ ಜೂಜಲ್ಲದ ಜೂಜು ಜನರನ್ನು ಆಕರ್ಷಿಸುತ್ತದೆ. ಉದ್ಯಮದ ಮಂದಿಗೆ ಬೇಕಾಗಿರುವುದೇ ಅದು!

ಅಪಾಯ ಎದುರಿನಲ್ಲಿಯೇ ಇದೆ!
ತರ್ಕ, ಕುತರ್ಕಗಳ ಹೊರತಾಗಿಯೂ ಡ್ರೀಮ್‌ 11 ಆಯ್ಕೆಯಲ್ಲಿ ಜೂಜಿನ ಆಮಿಷ ಒಳಧರ್ಮವಾಗಿ ಹರಿಯುತ್ತಲೇ ಇದೆ. ನಾಳೆ ಇಂತಹ ಆಟವನ್ನು ನಾಯಕ, ಕೋಚ್‌, ತಂಡದ ಸಹ ಆಟಗಾರ, ಸಪೋರ್ಟಿಂಗ್‌ ತಂಡದ ಸದಸ್ಯ…. ಯಾರೂ ಆಡಬಹುದು ಅಥವಾ ಇನ್ನೂ ಹೆಚ್ಚು ಬುದ್ಧಿವಂತಿಕೆಯಿಂದ ತನ್ನ ಆಪ್ತರಿಂದ ಆಡಿಸಬಹುದು. ಪಂದ್ಯಕ್ಕೆ ಒಪ್ಪತ್ತು ಇರುವಾಗಲೇ ತಂಡದ ಕಂಪೋಜಿಶನ್‌ ಅರ್ಥ ಮಾಡಿಕೊಂಡಿರುವ ಆ ವ್ಯಕ್ತಿ ಇದರಲ್ಲಿ ಪಾಲ್ಗೊಂಡರೆ ಏನಾದೀತು?

ಈ ತರಹದ ಆಟಗಳಿಗೆ ಅವಕಾಶವನ್ನೇ ಕೊಡಬಾರದು ಎಂಬ ವಾದವೂ ಇದೆ. ಅದಕ್ಕಾಗಿ ನಿಷೇಧ ಕಾನೂನು ಜಾರಿಗೆ ತರಬಹುದು. ಈ ದೇಶದಲ್ಲಿ ಪ್ರತಿಯೊಂದಕ್ಕೂ ಹತ್ತಾರು ಕಾನೂನುಗಳಿವೆ. ಅವು ಹೆಚ್ಚಾದಷ್ಟೂ ರಂಗೋಲಿ ಕೆಳಗೆ ನುಸುಳುವ ಅವಕಾಶ ಹೆಚ್ಚುತ್ತಿದೆ. ಪûಾಂತರ ನಿಷೇಧ ಕಾಯಿದೆ ಅಷ್ಟು ದುರ್ಬಲವಾಗಿದೆ ಎಂಬುದು ಗೊತ್ತಾಗಲು ಆಪರೇಷನ್‌ ಎಂಬ ಜಾಣ್ಮೆಯನ್ನು ನಾವು ನೋಡಬೇಕಾಯಿತು. ಕಾನೂನನ್ನು ಮಣಿಸಬೇಕು ಎಂದು ನಿರ್ಧರಿಸಿದರೆ ಅದರ ಆಚರಣೆ ಸುಲಭ. ಇಲ್ಲಿ ಆ ಕಾನೂನು ಅಕ್ಷರಶಃ ಕತ್ತೆಯಾಯಿತು.

ಮ್ಯಾಚ್‌ ಫಿಕ್ಸಿಂಗ್‌ ಚಾರವೂ ಅಷ್ಟೇ. ನಮ್ಮ ಮಕ್ಕಳು ಹಣಗಳಿಕೆಗೆ ಅಂತಹ ಶಾರ್ಟ್‌ಕಟ್‌ಗಳನ್ನು ಬಳಸದಿದ್ದರೆ ಆದರ್ಶ ಮನೆಯ ನಿರ್ಮಾಣ ಸಾಧ್ಯವಾಗುತ್ತದೆ. ಈಗಿರುವ ಕಾನೂನನ್ನು ಅದರ ಮೇಲಿನ ಆಶಯಗಳಿಗೆ ಅನ್ವಯವಾಗಿ ಪಾಲಿಸಿದರೆ ಹೊಸ ಕಾನೂನು ಬೇಕಾಗಿಲ್ಲ, ನೂತನ ಎಂಬ ಶಂಕೆಗಳಿಗೂ ಅವಕಾಶವಿರುವುದಿಲ್ಲ. ಅದು ಸಾಧ್ಯವೇ ಎಂಬುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆ.

ಹೂಡಿಕೆ ಏರಿಕೆ
ಈ ವರ್ಷ ಆನ್‌ಲೈನ್‌ ಗೇಮಿಂಗ್‌ ಇಂಡಸ್ಟ್ರಿ ಶೇ. 22ರಷ್ಟು ವೃದ್ಧಿಯಾಗಿದೆ. ಹೆಚ್ಚು ಕಮ್ಮಿ 2023ರ ಹೊತ್ತಿಗೆ 11,900 ಕೋಟಿ ರೂ. ವಹಿವಾಟು ಆಗುತ್ತದೆ ಎನ್ನುವ ಗುರಿ ಹೊಂದಿದೆ. ಆನ್‌ಲೈನ್‌ ಗೇಮ್‌ಗೆ ಶೇ. 85ರಷ್ಟು ಮೊಬೈಲ್‌ ಬಳಕೆದಾರರೇ ಹೂಡಿಕೆ ಮಾಡುತ್ತಿದ್ದಾರೆ. ಕಂಪ್ಯೂಟರ್‌, ಟ್ಯಾಬ್ಲೆಟ್‌ಗಳಲ್ಲಿ ಆಟವಾಡುವವರು ಶೇ. 11ರಷ್ಟು ಅಷ್ಟೇ. ಭಾರತ ಒಂದರಿಂದಲೇ ವಾರ್ಷಿಕವಾಗಿ 100 ಆಟಗಳು ತಯಾರಾಗುತ್ತಿವೆಯಂತೆ.
ಡ್ರೈವರ್‌ಗಳು ಕೂಡ ಇದಕ್ಕೆ ಮರುಳಾಗಿದ್ದಾರೆ ಅಂದರೆ, ಗೇಮಿಂಗ್‌ ಉದ್ಯಮ ಯಾವ ಪರಿ ಬೆಳೆಯುತ್ತಿದೆ ಎನ್ನುವುದನ್ನು ಲೆಕ್ಕ ಹಾಕಬಹುದು. 2010ರಲ್ಲಿ ಕೇವಲ 10 ಕಂಪನಿ ಮಾತ್ರ ಆನ್‌ಲೈನ್‌ ಗೇಮಿಂಗ್‌ನಲ್ಲಿ ತೊಡಗಿಕೊಂಡಿತ್ತು. 2018ರ ಹೊತ್ತಿಗೆ 250 ಕಂಪನಿಗಳು ಇವೆಯಂತೆ. ಪಸಲ್ಸ್‌, ಆ್ಯಕ್ಷನ್‌, ಆಡ್ವಂಚರಸ್‌ ಗೇಮ್‌ಗಳಿಗೆ ಯುವಕರು ಮಾರುಹೋಗಿದ್ದಾರೆ.

ಇದು ಸತ್ಯ
ಗೇಮಿಂಗ್‌ ಉದ್ಯಮ ಯಾವ ಪರಿ ಬೆಳೆಯುತ್ತಿದೆ ಅಂದರೆ, ಪ್ರಮುಖ ಫ್ಯಾಂಟಸಿ ಕ್ರಿಕೆಟ್‌ಗಳೆಂದರೆ ಡ್ರೀಮ್‌ 11, ಮೈ ಟೀಮ್‌ 11, 11 ವಿಕೆಟ್ಸ್‌,, ಸ್ಟಾರ್‌ ಪಿಕ್‌, ಫಾನ್‌ಟೈನ್‌. ಇದರಲ್ಲಿ ಡ್ರೀಮ್‌ 11 ನಂ. 1 ಸ್ಥಾನದಲ್ಲಿದೆ. ಇದರಲ್ಲಿ ಕೆಲವು ಸತ್ಯಗಳು ಇಂತಿವೆ.
1) ಆಟದಲ್ಲಿ ತೊಡಗಿಕೊಳ್ಳುವವರಲ್ಲಿ ಶೇ.30ರಷ್ಟು ಮಂದಿ ಗೆದ್ದು ಹಣ ಮಾಡಲು ಕಾಯುತ್ತಿರುತ್ತಾರೆ.
2) ಶೇ. 25-30ರಷ್ಟು ಮಂದಿ ತಮ್ಮ ಕೈಯಿಂದಲೇ ಹಣ ಹಾಕಿ ಆಡುತ್ತಾರೆ.
3) ಶೇ.70-75 ಮಂದಿ ತಮಗೆ ಬಂದ ಹಣವನ್ನು ಮತ್ತೆ ಅದರಲ್ಲೇ ಮರು ಹೂಡಿಕೆ ಮಾಡುತ್ತಾರೆ.
4) ಈ ಆಟದಲ್ಲಿ ತೊಡಗಿಕೊಂಡಿರವವವರಲ್ಲಿ ದೊಡ್ಡ ಪಟ್ಟಣದಲ್ಲಿವವರೇ ಹೆಚ್ಚು ಇವರಲ್ಲಿ ಶೇ.85ರಷ್ಟು ಜ®ಕನಿಷ್ಠ ವಾರದಲ್ಲಿ ಮೂರು ಬಾರಿ, ಸಣ್ಣಪಟ್ಟಣವಾಸಿಗಳು ವಾರದಲ್ಲಿ ನಾಲ್ಕು ಭಾರಿ ಗೇಮ್‌ಗಳನ್ನು ಆಡುತ್ತಲೇ ಇರುತ್ತಾರೆ.
5) ಭಾರತೀಯ ಆನ್‌ಲೈನ್‌ ಗೇಮರ್‌ಗಳಲ್ಲಿ ಬಹುತೇಕರು 500ರೂ. ಒಳಗಿರುವ ಆಟಗಳನ್ನು ಆಡುತ್ತಾರೆ. ಶೇ. 15ರಷ್ಟು ಜನ 1 ಸಾವಿರದಿಂದ 3 ಸಾವಿರ ಹೂಡಿದರೆ, ಶೇ. 6ರಷ್ಟು ಜನ ಮಾತ್ರ ಮೂರರಿಂದ 10 ಸಾವಿರ ರೂ. ಹೂಡಿಕೆ ಮಾಡುತ್ತಾರೆ.

-ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next