Advertisement

Finance: ಬ್ಯಾಂಕ್‌ ಆಫ್ ಮಹಾರಾಷ್ಟ್ರಕ್ಕೆ ಲಾಭ

12:18 AM Oct 19, 2023 | Team Udayavani |

ಬ್ಯಾಂಕ್‌ ಆಫ್ ಮಹಾರಾಷ್ಟ್ರದ 2023-24ನೇ ಆರ್ಥಿಕ ವರ್ಷದ 2ನೇ ತ್ತೈಮಾಸಿಕದ ವರದಿ ಬಿಡುಗಡೆಗೊಂಡಿದ್ದು, ಶೇ.72ರಷ್ಟು ನಿವ್ವಳ ಲಾಭದ ಏರಿಕೆಯೊಂದಿಗೆ ಬ್ಯಾಂಕ್‌ 920 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಹೇಳಿದೆ.

Advertisement

ಬಡ್ಡಿ ಆದಾಯದಲ್ಲಿನ ಹೆಚ್ಚಳ ಮತ್ತು ಸುಸ್ತಿ ಸಾಲಗಳ ಗಣನೀಯ ಇಳಿಕೆ ಈ ಬೆಳವಣಿಗೆಗೆ ಕಾರಣವೆಂದು ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ ಕೇವಲ 535 ಕೋಟಿ ರೂ.ಗಳಾಗಿತ್ತು. ಕಳೆದ ವರ್ಷ 1,887 ಕೋಟಿ ರೂ.ಗಳಿದ್ದ ನಿವ್ವಳ ಬಡ್ಡಿ ಆದಾಯವು ಸೆಪ್ಟೆಂಬರ್‌ಗೆ ಕೊನೆಗೊಂಡ ತ್ತೈಮಾಸಿಕದಲ್ಲಿ ಶೇ.28.88ರಷ್ಟು ಏರಿಕೆಯೊಂದಿಗೆ 2,432 ಕೋಟಿ ರೂ.ಗಳಿಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next