Advertisement

ಪ್ರಾಧ್ಯಾಪಕರಿಗೆ ಅನ್ವೇಷಣಾ ಮನೋಭಾವ ಅವಶ್ಯ

03:18 PM May 09, 2017 | Team Udayavani |

ಹುಬ್ಬಳ್ಳಿ: ಶೈಕ್ಷಣಿಕ ಕ್ಷೇತ್ರದಲ್ಲಿ ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳಲು ಪ್ರಾಧ್ಯಾಪಕರು, ವಿಜ್ಞಾನಿಗಳು ಮುಂದಾಗುವ ಅವಶ್ಯಕತೆ ಇದೆ ಎಂದು ಅಮೆರಿಕಾದ ಟೆಕ್ಸಾಸ್‌ ವಿಶ್ವವಿದ್ಯಾಲಯ ತರಕಾರಿ ಮತ್ತು ಹಣ್ಣು ಸುಧಾರಣೆ ಕೇಂದ್ರದ ನಿರ್ದೇಶಕ ಡಾ| ಬಿ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು. 

Advertisement

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರು/ಸಹಾಯಕ ಗ್ರಂಥಪಾಲಕರಿಗೆ 13 ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ, ಸಂಶೋಧನೆ ಹಾಗೂ ವಿಸ್ತರಣಾ ವಿಭಾಗಗಳಿಗೆ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರು ಹೊಸತನಗಳನ್ನು ಕಂಡುಕೊಳ್ಳಲು ಯತ್ನಿಸಬೇಕು.

ವೃತ್ತಿಯಲ್ಲಿ ನೈತಿಕತೆ ಹೊಂದುವುದು ಅವಶ್ಯವಾಗಿದೆ. ದೇಶದ ಜನರ ಜೀವನಮಟ್ಟ ಸುಧಾರಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕರು ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಧಾರವಾಡ ಕೃಷಿ ವಿವಿ ಕುಲಪತಿ ಡಾ| ಡಿ.ಪಿ. ಬಿರಾದಾರ ಅಧ್ಯಕ್ಷತೆ ವಹಿಸಿ,

80 ಜನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡರಲ್ಲದೆ, ಪಾರದರ್ಶಕತೆ ಹಾಗೂ ಅರ್ಹತೆಗನುಗುಣವಾಗಿ ನೇಮಕ ಪ್ರಕ್ರಿಯೆ ನಡೆದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರಿಗಾಗಿ ಈ ರೀತಿಯ ಬುನಾದಿ ತರಬೇತಿ ಆಯೋಜನೆ ಕೃವಿವಿಯ ಹೆಗ್ಗಳಿಕೆಯಾಗಿದೆ ಎಂದರು. 

ಕೃವಿವಿ ಘನತೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರಲ್ಲದೆ, ಯುವ ವಿಜ್ಞಾನಿಗಳು ರೈತರ ಕಷ್ಟಗಳನ್ನು ಅರಿತು ಈ ಕಷ್ಟಗಳಿಗೆ ಪರಿಹಾರ ನೀಡುವತ್ತ ಯೋಚಿಸಬೇಕೆಂದು ಹೇಳಿದರು. 

Advertisement

ಕೃವಿವಿ ವಿಸ್ತರಣಾ ಹಾಗೂ ತರಬೇತಿ ನಿರ್ದೇಶಕ ಡಾ| ವಿ.ಐ. ಬೆಣಗಿ ಮಾತನಾಡಿ, 13 ದಿನಗಳ ತರಬೇತಿಯಲ್ಲಿ ಒಟ್ಟು 36 ಉಪನ್ಯಾಸ, ಚರ್ಚೆ, ಸಂವಾದ ನಡೆದಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಖ್ಯಾತಿಯ ವಿವಿಧ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಅನುಭವ ಹಂಚಿಕೊಂಡಿದ್ದಾರೆ. ಅದೇ ರೀತಿ ಪಂಚಗಣಿ ಸಂಸ್ಥೆಯ ತರಬೇತಿಯನ್ನು ಸ್ಮರಿಸಿದರು.

ಕೃವಿವಿ ಹಿರಿಯ ಅಧಿಕಾರಿಗಳಾದ ಡಾ| ಬಿ.ಎಸ್‌. ಜನಗೌಡರ, ಡಾ| ಎಸ್‌. ಎಲ್‌. ಮಡಿವಾಳರ, ಡಾ| ಎಚ್‌.ಬಸಪ್ಪ, ಡಾ| ಎನ್‌.ಕೆ. ಬಿರಾದಾರ ಪಾಟೀಲ, ಡಾ| ಎಚ್‌. ಬಸವರಾಜ, ಎಸ್‌.ಎಂ. ಹೊನ್ನಳ್ಳಿ, ಪ್ರಾಧ್ಯಾಪಕರಾದ ಡಾ| ಎಸ್‌.ಎಂ. ಮಂಟೂರ, ಡಾ| ಉಮಾ ಹಿರೇಮಠ, ಡಾ| ಗೀತಾ ಚಿಟಗುಬಿ, ಡಾ| ಬಿ.ಎಂ. ರಡ್ಡೇರ ಇದ್ದರು. ಡಾ| ಆರ್‌. ಎಸ್‌. ಪೋದ್ದಾರ ಸ್ವಾಗತಿಸಿದರು. ಡಾ| ಎಸ್‌.ಎ. ಅಷ್ಟಪುತ್ರೆ ನಿರೂಪಿಸಿದರು. ಡಾ| ಎಂ. ಗೋಪಾಲ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next