ಬೆಂಗಳೂರು: ಕಾಲೇಜಿನ ಪ್ರೊಫೆಸರ್‌ವೊಬ್ಬರು ಅತಿವೇಗವಾಗಿ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು, ಉಪನ್ಯಾ ಸಕಿಗೆ ಗಾಯಗಳಾಗಿರುವ ಘಟನೆ ನಗರದ ಮಹಾ ರಾಣಿ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಮಹಾರಾಣಿ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ (19), ಬಿಎಸ್ಸಿ ವಿದ್ಯಾರ್ಥಿನಿ ನಂದಪ್ರಿಯಾ(19) ಹಾಗೂ ಸಂಗೀತ ಉಪನ್ಯಾಸಕಿ ಜ್ಯೋತಿ (33) ಎಂಬವರಿಗೆ ಗಾಯಗಳಾಗಿದೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಪ್ರೊಫೆಸರ್ ನಾಗರಾಜ್‌ಗೂ ಗಾಯಗಳಾಗಿವೆ. ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ಅಶ್ವಿನಿಗೆ ತಲೆ, ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಮಹಾರಾಣಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ನಾಗರಾಜ್ ಬೆಳಗ್ಗೆ 10 ಗಂಟೆಗೆ ಕಾಲೇಜು ಆವರಣಕ್ಕೆ ಕಾರಿನಲ್ಲಿ ಬಂದು, ಪಾರ್ಕಿಂಗ್ ಮಾಡಲು ಮುಂದಾಗಿ ದ್ದಾರೆ. ಈ ವೇಳೆ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ್ದಾರೆ. ಹೀಗಾಗಿ ಕಾರನ್ನು ನಿಯಂತ್ರಿಸಲು ಸಾಧ್ಯ ವಾಗದೆ ವಿದ್ಯಾರ್ಥಿಗಳು ಓಡಾಡುವ ಮಾರ್ಗದ ಕಡೆ ಕಾರು ತಿರುಗಿಸಿದ್ದಾರೆ. ಈ ವೇಳೆ ಕಾಲೇಜಿಗೆ ಬರುತ್ತಿದ್ದ ಅಶ್ವಿನಿ, ನಂದಪ್ರಿಯಾಗೆ ಡಿಕ್ಕಿ ಹೊಡೆದು, ಬಳಿಕ ಬೈಕ್ ಪಾರ್ಕಿಂಗ್ ಬಳಿ ನಿಂತಿದ್ದ ಸಂಗೀತ ಉಪನ್ಯಾಸಕಿ ಜ್ಯೋತಿಗೆ ಗುದ್ದಿದ್ದಾರೆ. ಬಳಿಕ ಎರಡ್ಮೂರು ಬೈಕ್‌ಗಳಿಗೆ ತಗುಲಿಸಿ, ಒಂದು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಶ್ವಿನಿ ತಲೆ ಮತ್ತು ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವ ವಾಗಿದೆ. ಆಕೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಹಾಗೆಯೇ ಕಾರು ಚಾಲಕ ನಾಗರಾಜ್‌ಗೂ ಗಾಯ ಗಳಾಗಿದ್ದು, ಅವರಿಗೂ ಚಿಕಿತ್ಸೆ ಮುಂದುವರಿದಿದೆ. ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀ ಸರು, ಉತ್ತರ ಸಂಚಾರ ವಿಭಾಗದ ಡಿಸಿಪಿ ಸಚಿನ್ ಘೋರ್ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.