Advertisement

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

10:38 AM Apr 04, 2020 | Sriram |

ಕಾಸರಗೋಡು: ರೋಗಿಗಳ ಕೃತಕ ಉಸಿರಾಟ ವ್ಯವಸ್ಥೆಗಾಗಿ ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿ ಲೇಟರ್‌ ಉಪಕರಣವೊಂದನ್ನು ಕಾಸರಗೋಡು ಸರಕಾರಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎ.ವಿ. ಪ್ರದೀಪ್‌ ಆವಿಷ್ಕರಿಸಿದ್ದಾರೆ.

Advertisement

ಕೃತಕ ಉಸಿರಾಟಕ್ಕಾಗಿ ಉಪಯೋಗಿ ಸುವ ಆಂಬು(ಆರ್ಟಿಫಿಶಿಯಲ್‌ ಮ್ಯಾನ್ವಲ್‌ ಬ್ರಿàತಿಂಗ್‌ ಯೂನಿಟ್‌)ವಿಗೆ ಮೋಟಾರ್‌ ಒಂದನ್ನು ಅಳವಡಿಸಿ ಸ್ವಯಂಚಾಲಿತ ವೆಂಟಿಲೇಟರ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ಆ್ಯಂಬುಲೆನ್ಸ್‌ ಅಥವಾ ಇನ್ನಿತರ ಆವಶ್ಯಕ ಕೇಂದ್ರಗಳಲ್ಲಿ ಉಪಯೋಗಿಸಲಾಗುವ ಆಂಬು ಘಟಕವನ್ನು ಕೈಯಿಂದ ಅದುಮುವ ಮೂಲಕ ಉಪಯೋಗಿಸಲಾಗುತ್ತಿತ್ತು. ಇದಕ್ಕೆ ಪ್ರದೀಪ್‌ ಅವರು ಮೋಟಾರ್‌ ಅಳವಡಿಸುವ ಮೂಲಕ ಕಾರ್ಯ ಪ್ರವೃತ್ತವಾಗುವಂತೆ ಮಾಡಿದ್ದಾರೆ. ಇದಕ್ಕೆ ಸುಮಾರು 3,000 ರೂ. ವೆಚ್ಚವಾಗಿದೆ.

ರೋಗಾಣು ಅನಿ ಯಂತ್ರಿತವಾಗಿ ಹೆಚ್ಚಾದರೆ ಇದನ್ನು ಬಳಸಬಹುದು. ಕೋವಿಡ್ 19 ಸೋಂಕು ಶ್ವಾಸಕೋಶಕ್ಕೆ ಹೆಚ್ಚಾಗಿ ಬಾಧಿಸುತ್ತದೆ. ಅಸ್ತಮಾ ರೋಗಿಗಳೂ ಇದನ್ನು ಬಳಸಬಹುದು. ಅಗತ್ಯ ಇದ್ದವರು ಸೂಚಿಸಿದರೆ ಲಾಕ್‌ಡೌನ್‌ ಅವಧಿಯ ಬಳಿಕ ಈ ಸ್ವಯಂಚಾಲಿತ ವೆಂಟಿಲೇಟರನ್ನು ಉತ್ಪಾದಿಸಿ ನೀಡಲು ಸಿದ್ಧ ಎಂದು ಡಾ| ಪ್ರದೀಪ್‌ ಹೇಳಿದ್ದಾರೆ.

ಬೆಂಗಳೂರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಯನ್ಸ್‌ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಅವರು ಹಲವು ಉಪಕರಣಗಳನ್ನು ತಯಾರಿಸಿದ್ದಾರೆ. ಮೂಲತಃ ಅವರು ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next