Advertisement

ಪ್ರಾಂಶುಪಾಲರು ಶಿಕ್ಷಣ ಸಂಸ್ಥೆಯ ನಾಯಕರು

03:13 PM Nov 11, 2020 | Suhan S |

ದೇವನಹಳ್ಳಿ: ವಸತಿ ಶಾಲೆಗಳ ಪ್ರಾಂಶುಪಾಲರು ಮನಸ್ಸು ಮಾಡಿದರೆ ದೀರ್ಘ‌ಕಾಲ ಶಿಕ್ಷಣ ಸಂಸ್ಥೆಗಳು ಉಳಿಯಲು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಕರ್ನಾಟಕ ವಸತಿ ಶಾಲಾ ಶೈಕ್ಷಣಿಕ ಸಂಸ್ಥೆಗಳ ಸಂಘದ ರಾಜ್ಯ ಶೈಕ್ಷಣಿಕ ಸಲಹೆಗಾರ ಡಾ.ಗುರುರಾಜ್‌ ಕರ್ಜಗಿ ತಿಳಿಸಿದರು.

Advertisement

ತಾಲೂಕಿನ ಕುಂದಾಣ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿಕರ್ನಾಟಕ ವಸತಿ ಶಾಲಾ ಶೈಕ್ಷಣಿಕ ಸಂಸ್ಥೆಗಳ ಸಂಘ (ಕ್ರೈಸ್‌) ವತಿಯಿಂದ ವಸತಿ ಶಾಲೆಗಳಪ್ರಾಥಮಿಕ, ದ್ವಿತೀಯ ಮತ್ತು ಪ್ರೌಢ ಪ್ರಾಂಶುಪಾಲರ ನಾಯಕತ್ವ ವಿಕಸನ ಮತ್ತು ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭವಿಷ್ಯ ರೂಪಿಸುತ್ತೆ:ಶಿಕ್ಷಕರು, ಪ್ರಾಂಶು ಪಾಲರು ನೀಡುವ ಶಿಕ್ಷಣವಿದ್ಯಾರ್ಥಿಯ ಭವಿಷ್ಯವನ್ನೇ ರೂಪಿಸುತ್ತದೆ. ಒಂದು ಶಾಲೆ ಎಷ್ಟುಒಳ್ಳೆಯದುಅಂದರೆ,ಅದರ ನಾಯಕರು ಎಷ್ಟು ಒಳ್ಳೆಯವರೋ ಅಷ್ಟೇ ಒಳ್ಳೆಯದು ಶಾಲೆ. ನಾಯಕತ್ವ ಇಲ್ಲದೇ ಸೊರಗಿ ಹೋಗುತ್ತಿರುವಾಗ ಯಾರೋ ಒಬ್ಬ ನಾಯಕರು ಬಂದು ಆ ಸಂಸ್ಥೆಯನ್ನು ಪೂರ್ತಿ ಬದಲಾಯಿಸುತ್ತಾರೆ. ಪ್ರತಿ ಪ್ರಾಂಶುಪಾಲರು ಶಿಕ್ಷಣ ಸಂಸ್ಥೆಯ ನಾಯಕರಾಗಿರುತ್ತಾರೆ.ಅವರು ಕಾರ್ಯನಿರ್ವಹಿಸುವ ವೈಖರಿ ಮೇಲೆ ನಿಂತಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನು ಮಂತರಾಯಪ್ಪ, ರಾಜ್ಯ ಶೈಕ್ಷಣಿಕ ಸಂಯೋಜಕ ಮುರಳಿ ಮಾತನಾಡಿದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ನಿರ್ದೇಶಕ ಡಾ.ಪ್ರೀತಿ, ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಪ್ರಾಂಶುಪಾಲರು, ಕುಂದಾಣ ಮೊರಾರ್ಜಿ ದೇಸಾಯಿ ಪ್ರಾಂಶುಪಾಲ ಪಿ.ವೆಂಕಟೇಶ್‌, ದೈಹಿಕ ಶಿಕ್ಷಣ ಶಿಕ್ಷಕ ಯಲ್ಲಪ್ಪ ಇದ್ದರು.

ಆತ್ಮ ನಿರ್ಭರ್‌ ಸ್ವಾನಿಧಿ ಆರ್ಥಿಕ ಸದೃಢಕ್ಕೆ ಸಹಕಾರಿ : 

ದೊಡ್ಡಬಳ್ಳಾಪುರ: ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್‌ ಸ್ವಾನಿಧಿ ಯೋಜನೆಯಡಿ 10ಸಾವಿರ ರೂ.ಕಿರು ಸಾಲ ನೀಡಲಾಗುತ್ತಿದ್ದು ಸೂಕ್ತ ದಾಖಲಾತಿ ನೀಡಿ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕರಾದ ಬಿ.ಎಸ್‌.ಸುಮಾ ತಿಳಿಸಿದ್ದಾರೆ. ನಗರದ ಪುರ ಭವನದಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಅರ್ಜಿ ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಗೊಳಿ ಸಲಾಗುತ್ತಿದೆ. ನಗರ ಪ್ರದೇಶದ ಜನಸಂಖ್ಯೆಯ ಶೇ.1ರಷ್ಟು ಮಂದಿಗೆ ಯೋಜನೆಯ ಸವಲತ್ತು ನೀಡುವ ಗುರಿ ಹೊಂದಲಾಗಿದೆ ಎಂದರು.

Advertisement

342 ಮಂದಿಗೆ ಸವಲತ್ತು: ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ-931, ಹೊಸಕೋಟೆ-570, ನೆಲಮಂಗಲ-372, ದೇವನಹಳ್ಳಿ-281, ವಿಜಯಪುರ-349 ಸೇರಿ 2,503 ಫಲಾನುಭವಿಗಳಿಗೆ ಕಿರು ಸಾಲ ನೀಡುವ ಗುರಿ ಹೊಂದಲಾಗಿದೆ. ಈವರೆಗೆ 1,392 ಅರ್ಜಿ ಸ್ವೀಕರಿಸಿ, ಅಪ್‌ಲೋಡ್‌ ಮಾಡಲಾಗಿದ್ದು, 342 ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ. ಅರ್ಹರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಫೋಟೋಗಳ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆ ವೇಳೆ ನೀಡಬೇಕಿದೆ ಎಂದರು. ನಗರಸಭೆ ಪೌರಾಯುಕ್ತ ರಮೇಶ್‌ ಎಸ್‌. ಸುಣಗಾರ್‌, ಸ್ವಾಯೋಜನೆಯ ಜಿಲ್ಲಾ ನೋಡಲ್‌ ಅಧಿಕಾರಿ ಮಹೇಶ್‌ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next