Advertisement

ಕೇಂದ್ರೀಯ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಪರಂಪರಾ ಮ್ಯೂಸಿಯಂ: ಪ್ರೊ.ಎಚ್.ಎಂ. ಮಹೇಶ್ವರಯ್ಯ

05:43 PM Jul 09, 2020 | keerthan |

ಕಲಬುರಗಿ: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಾಂಸ್ಕೃತಿಕ, ಸಾಹಿತ್ಯ ಸೇರಿ ಪರಂಪರಾ (ಹೆರಿಟೇಜ್) ಮ್ಯೂಸಿಯಂ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಹೇಳಿದರು.

Advertisement

ನಗರದ ನೆಹರು ಗಂಜ್ ನ ದಾಲ್ ಮಿಲ್ಲರ್ಸ ಅಸೋಸಿಯೇಷನ್ ಸಭಾಂಗಣದಲ್ಲಿ ಕೊತ್ತಲ‌ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಇವರ ಆಶ್ರಯದಲ್ಲಿ ನಡೆದ ಕಲ್ಯಾಣ ಕರ್ನಾಟಕ ಕಲಬುರಗಿ ಮಹಾನಾಗರಿಕ ಸಮಿತಿ ಹಾಗೂ ಕಲಬುರಗಿ ಮಹಾನಗರ ಸೇವಾ ಸಮಿತಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನಮ್ಮ ಭಾಗದ ಇತಿಹಾಸ, ಶರಣರ ಕೊಡುಗೆ ಮುಂದಿನ ಜನಾಂಗಕ್ಕೆ ಕೊಂಡೊಯ್ಯಲು ಹಾಗೂ ಈ ಭಾಗದ ಅಭಿವೃದ್ಧಿಗೆ ಪೂರಕ ನಿಟ್ಟಿನಲ್ಲಿ 25 ಕೋ ರೂ ವೆಚ್ಚದ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸಲು ಅನುದಾನ ಕೋರಿ ಈಗಾಗಲೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ಅಧ್ಯಕ್ಷರು ಅನುದಾನ ನೀಡಿದಲ್ಲಿ ಮಾದರಿಯ ಮ್ಯೂಸಿಯಂ ಸ್ಥಾಪನೆಯಾಗುತ್ತದೆ ಎಂದು ವಿವರಣೆ ನೀಡಿದರು.

ಆಯಾ ಭಾಗದ ಅಭಿವೃದ್ಧಿ ಪ್ರವಾಸ ಹಾಗೂ ಹೊಟೇಲ್ ಉದ್ಯಮದಲ್ಲೂ ಅಡಗಿರುತ್ತೇ ಎಂದು ವಿವರಣೆ ನೀಡಿದ ಕುಲಪತಿಗಳು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಅರಣ್ಯ ಸಂಪತ್ತು, ಇತಿಹಾಸ ಶ್ರೀಮಂತಿಕೆ, ಅದಿರು, ಜಲ ಸಂಪತ್ತು ಕಳೆದುಕೊಂಡಿದ್ದೇವೆ

ಈಗ ಕಳೆದುಕೊಂಡಿದ್ದರ ಬಗ್ಗೆ ಚರ್ಚಿಸದೇ ಗುಣಾತ್ಮಕವಾಗಿ ಯೋಚಿಸಿ ಇನ್ಮುಂದೆ ಯಾವುದೂ ಕಳೆದುಕೊಳ್ಳದಂತೆ ಹಾಗೂ ಕಳೆದುಕೊಂಡಿದ್ದನ್ನು ಮರಳಿ ಪಡೆಯುತ್ತ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ. ಈ ಮಹೋನ್ನತ ಕಾರ್ಯಕ್ಕೆ ಕೈ ಜೋಡಿಸುವ ನಿಟ್ಟಿನಲ್ಲಿ ನಾಗರಿಕ ಸಮಿತಿಗಳನ್ನು ರಚನೆ ಮಾಡಿರುವುದು ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

Advertisement

ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಗಳಾಗಿ ಬಂದ ನಂತರ 37 ಸಾವಿರ ಸಸಿಗಳನ್ನು ನೆಟ್ಟ ಪರಿಣಾಮ ವಿವಿಗೆ ಬೆಳಿಗ್ಗೆ ಸಹಸ್ರಾರು ಪಕ್ಷಿಗಳು ಬರುತ್ತಿವೆ. ಹೀಗಾಗಿ ಅರಣ್ಯ ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕೆಂದು ಪ್ರೊ. ಎಚ್.ಎಂ. ಮಹೇಶ್ವರ ಯ್ಯ ಕರೆ ನೀಡಿದರು.

ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರು, ಕಲ್ಯಾಣ ಕರ್ನಾ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಡಾ. ಬಸವರಾಜ್ ಪಾಟೀಲ್ ಸೇಡಂ ಮಾತನಾಡಿ, ಕಲಬುರಗಿ ಮುಂದಿನ 25 ವರ್ಷಗಳ ಅಭಿವೃದ್ಧಿ ಕಣ್ಣೋಟದಲ್ಲಿ ಇಟ್ಟುಕೊಂಡು ಸಮಿತಿಗಳು ಕಾರ್ಯ ನಿರ್ವಹಿಸಬೇಕಿದೆ. ಸೇವಾ ಮನೋಭಾವ ಎಲ್ಲರಲ್ಲೂ ಬರುವುದು ಅಗತ್ಯವಿದೆ ಎಂದು ಹೇಳಿದರು.

ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳಾದ ಶಾಂತಕುಮಾರ ಬಿಲಗುಂದಿ, ರವಿ ಮುಕ್ಕಾ, ಸುಭಾಷ ಕಮಲಾಪುರೆ, ಉಮಾಕಾಂತ ನಿಗ್ಗುಡಗಿ, ಚಂದ್ರಶೇಖರ ತಳ್ಳಳ್ಳಿ, ಶಾಂಂತರೆಡ್ಡಿ, .ಮಾರ್ತಾಂಡ ಶಾಸ್ತ್ರೀ, ಉಮೇಶ ಶೆಟ್ಟಿ, ಬಸವರಾಜ ಖಂಡೇರಾವ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next