Advertisement

ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ

02:54 PM Jan 08, 2018 | |

ಕೊಳಂಬೆ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಳಂಬೆ ಗ್ರಾಮದ ಕಜೆ ಕೊಳಂಬೆಯ ಗುಡ್ಡೆಮನೆ ಹೊಸ ಕಿಂಡಿ ಅಣೆಕಟ್ಟಿಗೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ರವಿವಾರ ಒಡ್ಡು ನಿರ್ಮಾಣ ಮಾಡಿದರು.

Advertisement

ಈ ಕಿಂಡಿ ಅಣೆಕಟ್ಟು ಈ ಬಾರಿ ನಿರ್ಮಾಣಲಾಗಿತ್ತು. ಇಲ್ಲಿ ಶೇಖರಣೆಯಾಗುವ ನೀರಿನಿಂದ ಸುಮಾರು 25ಎಕರೆ ಕೃಷಿ ಭೂಮಿಯ ಜತೆ ಸುಮಾರು 150 ಮನೆಗಳ ಬಾವಿಯ ಕುಡಿಯುವ ನೀರಿನ ಮಟ್ಟ ಹೆಚ್ಚಗಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಕೊಳಂಬೆ ಗ್ರಾಮಸ್ಥರ ಹಾಗೂ ಕೃಷಿಕರ ಸಮಸ್ಯೆಗೆ ಅಧಾರಿಸುವ ನಿಟ್ಟಿನಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಗಣೇಶ್‌ ಮಂಜೇಶ್ವರ, ಎನ್ನೆಸ್ಸೆಸ್‌ ಯೋಜನಾಧಿಕಾರಿ ಶಾಲಿನಿ, ಉಪನ್ಯಾಸಕರಾದ ದಿಲೀಪ್‌, ಪ್ರಿಯದರ್ಶಿನಿ, ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೆಂಜಾಳ ಹಾಗೂ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಒಡ್ಡು ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ ಸದಸ್ಯರಾದ ಉಮೇಶ್‌ ಮೂಲ್ಯ, ಶಾಲಿನಿ, ಸುನಂದಾ ಮತ್ತು ಕಿನ್ನಿಕಂಬಳ ಭ್ರಾಮರಿ ಯುವಕ ಸಂಘವೂ ಸಹಕಾರ ನೀಡಿದ್ದಾರೆ.

ಅಂತರ್ಜಲ ವೃದ್ಧಿಗೆ ಸಹಕಾರಿ
ನೀರಿಗಾಗಿ ಒಡ್ಡು ನಿರ್ಮಾಣ ಮಾಡುವ ಮೂಲಕ ನೀರಿನ ಶೇಖರಣೆ ಬಗ್ಗೆ ಕಾಳಜಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ
ಪದವಿ ಕಾಲೇಜು ತೋರಿದೆ. ಗ್ರಾಮ ಪಂಚಾಯತ್‌ ನೀರು ಇಲ್ಲ ಎಂದು ಬಿಟ್ಟ ಬಾಯಿ ಮುಚ್ಚಿದ ಕೊಳವೆ ಬಾವಿಗೆ
ಮಳೆಗಾಲದಲ್ಲಿ ಮನೆಯ ಚಾವಣಿ ನೀರನ್ನು ಪೈಪುಗಳನ್ನು ಅಳವಡಿಸಿ ನೀರು ಉಣಿಸುವ ಕಾರ್ಯ ಹಲವೆಡೆ ಮಾಡಿದೆ. ಮನೆ ಇಲ್ಲದ ಕಡೆ ಇತರ ವಿಧಾನವನ್ನು ಅಳವಡಿಸಿ ನೀರನ್ನು ಕೊಳವೆ ಬಾವಿಗೆ ಉಣಿಸಿದೆ. ಇದರಿಂದ ಪರಿಸರದ ಬಾವಿಗಳಲ್ಲಿ ಅಂತರ್ಜಲ ವೃದ್ಧಿ ಆಗಿದೆ.

ವಿದ್ಯಾರ್ಥಿನಿಯರ ಬಹುಪಾಲು
ರವಿವಾರ ಹಲವು ಸಮಾರಂಭಗಳನ್ನು ಬಿಟ್ಟು ಈ ಒಡ್ಡು ನಿರ್ಮಾಣದಲ್ಲಿ ಎನ್ಸೆಸ್ಸೆಸ್‌ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡದ್ದು ವಿಶೇಷತೆ. ಒಟ್ಟು 50 ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next