Advertisement

ಕ್ಷಮೆ ಯಾಚಿಸಿದ ನಿರ್ಮಾಪಕಿ ಏಕತಾ ಕಪೂರ್‌

04:14 AM Jun 15, 2020 | Lakshmi GovindaRaj |

ಮುಂಬೈ: ಧಾರಾವಾಹಿಗಳ ನಿರ್ಮಾಪಕಿ ಏಕತಾ ಕಪೂರ್‌ ಅವರ ವೆಬ್‌ ಸೀರಿಸ್‌ “ಟ್ರಿಪಲ್‌ ಎಕ್ಸ್‌’ನ 2ನೇ ಆವೃತ್ತಿಯಲ್ಲಿ ಸೇನೆ ವಿರುದ್ಧ ಅವಹೇಳನಕಾರಿ ಅಂಶ ಇದೆ ಎಂಬ ವಿಚಾರದ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಭಾನುವಾರ  ಹೇಳಿಕೆ ಬಿಡುಗಡೆ  ಮಾಡಿರುವ ಅವರು, ಯಾರ ಭಾವನೆಗಳಿಗೂನೋವು ಉಂಟು ಮಾಡುವ ಇರಾದೆ ಹೊಂದಿಲ್ಲ.

Advertisement

ಸೇನೆಯ ಬಗ್ಗೆ ಹೆಚ್ಚಿನ ಗೌರವಾದರಗಳನ್ನು ಹೊಂದಿದ್ದೇವೆ. ಎರಡನೇ ಆವೃತ್ತಿಯ ವೆಬ್‌ ಸೀರಿಸ್‌ನಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾರ್ಯಕ್ರಮದ ನಡುವೆ ಅಂಥ ಅಂಶಗಳು ಪ್ರಸಾರವಾಗಿ ದ್ದನ್ನು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದಾರೆ. ಕಾರ್ಯಕ್ರಮದ ವಿರುದ್ಧ ಮಧ್ಯಪ್ರದೇಶದ  ಇಂದೋರ್‌ನಲ್ಲಿ ಎರಡು ಕೇಸುಗಳು ದಾಖಲಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next