ಚೆನ್ನೈ: ಪ್ರಖ್ಯಾತ ಸಿನಿಮಾ ನಿರ್ಮಾಪಕ-ನಿರ್ದೇಶಕ ತಾತಿನೇನಿ ರಾಮರಾವ್ ಬುಧವಾರ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದ 84 ವರ್ಷದ ಹಿರಿಯ ನಿರ್ದೇಶಕ ಸ್ವರ್ಗಸ್ಥರಾಗಿದ್ದಾರೆ . ಅವರು ವಯೋ ಸಹಜ ಸಮಸ್ಯೆಗಳಿಂದ ನಿಧನ ಹೊಂದಿದ್ದಾರೆ. ರಾವ್ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ರಾವ್ ಅವರು 1966 ಮತ್ತು 2000 ರ ನಡುವೆ 70 ಹಿಂದಿ ಮತ್ತು ತೆಲುಗು ಚಲನಚಿತ್ರಗಳನ್ನು ನಿರ್ದೇಶಿಸಿ ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ್ದರು.
1983 ರಲ್ಲಿ ‘ಅಂಧಾ ಕಾನೂನ್’ ಎಂಬ ಚಿತ್ರದ ಮೂಲಕ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನು ಬಾಲಿವುಡ್ ಪ್ರವೇಶ ಮಾಡಿಸಿದ್ದರು.
ರಾವ್ ಅವರ ನಿಧನದ ವಾರ್ತೆಯನ್ನು ಹಂಚಿಕೊಂಡಿರುವ ನಟ ಅನುಪಮ್ ಖೇರ್, ಸಂತಾಪ ವ್ಯಕ್ತಪಡಿಸಿದ್ದಾರೆ. “ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಆತ್ಮೀಯ ಸ್ನೇಹಿತ ಶ್ರೀ ಟಿ ರಾಮರಾವ್ ಜಿ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಯಿತು. ಅವರೊಂದಿಗೆ ‘ಆಖ್ರಿರಾಸ್ತಾ’ ಮತ್ತು ‘ಸಂಸಾರ್’ ನಲ್ಲಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು!! ಅವರು ಸಹಾನುಭೂತಿ, ಕಮಾಂಡಿಂಗ್ ಮತ್ತು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು! ಓಂ ಶಾಂತಿ!,” ಎಂದು ಟ್ವೀಟ್ ಮಾಡಿದ್ದಾರೆ.