Advertisement

ತಹಶೀಲ್ದಾರ್‌ ಮೇಲಿನ ಹಲ್ಲೆ ಖಂಡಿಸಿ ಮೆರವಣಿಗೆ

02:57 PM Feb 01, 2022 | Team Udayavani |

ಗುರುಮಠಕಲ್‌: ಬೀದರ ಜಿಲ್ಲೆಯ ಹುಮನಬಾದ್‌ ತಾಲೂಕಿನಲ್ಲಿ ತಹಶೀಲ್ದಾರ್‌ ಮೇಲೆ ನಡೆದ ಹಲ್ಲೆ ಖಂಡಿಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಮತ್ತು ಸರಕಾರಿ ನೌಕರರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಚೇರಿಯವರೆಗೆ ಮೌನ ರ್ಯಾಲಿ ನಡೆಸಿ, ತಹಶೀಲ್ದಾರ್‌ ಶರಣಬಸವ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಸರಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಇಂತಹ ಹಲ್ಲೆಗಳಿಂದ ಸರ್ಕಾರಿ ನೌಕರರಿಗೆ ಅಭದ್ರತೆ ಕಾಡುತ್ತಿದೆ. ಸರಕಾರಿ ನೌಕರರು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತೆ ಆಗಿದೆ. ಸರಕಾರಿ ನೌಕರರಿಗೆ ಭದ್ರತೆ ಕಲ್ಪಿಸಬೇಕಾಗಿದೆ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಿ ಸರಕಾರಿ ನೌಕರರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮ ತೆಗೆದುಕೊಳ್ಳಬೇಕು ಎಂದರು.

ವಿಶೇಷವಾಗಿ, ಕಂದಾಯ ಇಲಾಖೆ, ಗ್ರಾಪಂ, ಆರೋಗ್ಯ ಇಲಾಖೆ, ಭೂ ಇಲಾಖೆಯಲ್ಲಿರುವ ಸರಕಾರಿ ನೌಕರರು ಪ್ರತಿಸಲ ಹಲ್ಲೆಗೊಳಗಾಗುತ್ತಿರುತ್ತಾರೆ. ಕಠಿಣ ಕಾನೂನು ಜಾರಿಗೆ ತರಬೇಕೆಂದು ಅವರು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ಕಿಷ್ಟರೆಡ್ಡಿ ಪಾಟೀಲ್‌ ದಂತಾಪುರ, ಉಪಾಧ್ಯಕ್ಷ ಭೀಮರಾಯ ಮತ್ತು ಅಂಜನೇಯ, ಕ್ರೀಡಾ ಕಾರ್ಯದರ್ಶಿಗಾಳದ ಸಾಯಬಣ್ಣ ಗಾಳ, ನಾಗೇಶ, ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ದೊಡ್ಡ ಬಸವರಾಜ, ತಾಲೂಕು ಆರೋಗ್ಯ ಇಲಾಖೆ ಸಂಘದ ಅಧ್ಯಕ್ಷ ಹರಿಬಾಬು, ಗ್ರೇಡ್‌-2 ಉಪತಹಶೀಲ್ದಾರ್‌ ನರಸಿಂಹ ಸ್ವಾಮಿ, ಶಿಕ್ಷಕರ ಸಂಘದ ಖಚಾಂಚಿ ಗಾಯತ್ರಿ ನಾಯಕಿನ್‌, ಶಿಕ್ಷಕರಾದ ಬಾಲರಾಜ, ಮೋನಪ್ಪ ಬಡಿಗೇರ, ವೆಂಕಟರಾಮುಲು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next