Advertisement

ಅನ್ಯಾಯದ ವಿರುದ್ದ ಹೋರಾಟಕ್ಕೆ ಮುಂದಾದರೆ ಕ್ರಮ

09:10 PM Nov 06, 2019 | Lakshmi GovindaRaju |

ನೆಲಮಂಗಲ: ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಜಮೀನು ದಾಖಲೆಗಳ ಬದಲಾವಣೆಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ನೀಡಲು ನಿರಾಕರಿಸಿರುವ ತಹಸೀಲ್ದಾರ್‌ ತಾಲೂಕು ಕಚೇರಿ ಆವರಣದಲ್ಲಿ ಹೋರಾಟಮಾಡಿದರೆ ಬಂಧಿಸಿ ಕಾನೂನು ಕ್ರಮವಹಿಸಬೇಕಾಗುತ್ತದೆಂದು ತಹಸೀಲ್ದಾರ್‌ ಶ್ರೀನಿವಾಸಯ್ಯ ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನು ಹತ್ತಿಕಲು ಮುಂದಾಗಿದ್ದಾರೆಂದು ಹೋರಾಟಗಾರ ಕೃಷ್ಣಪ್ಪ ಮತ್ತು ಬೆಂಬಲಿಗರು ಆರೋಪಿಸಿದ್ದಾರೆ.

Advertisement

ಹೋರಾಟದ ಹಿನ್ನೆಲೆ: ತಾಲೂಕಿನ ಕೊಡಿಗೆಹಳ್ಳಿ ಮತ್ತು ಕೆಂಚನಪುರ ಗ್ರಾಮದ ಕೆಲ ದಲಿತ ಕುಟುಂಬಗಳಿಗೆ 1961-62ರಲ್ಲಿ ಸರಕಾರದಿಂದ ಜಮೀನನ್ನು ಮಂಜೂರುಮಾಡಿ ಸುಪರ್ಧಿಗೆ ನೀಡಲಾಗಿತ್ತು, ಸರಕಾರದಿಂದ ನೀಡಿದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ಸಾಗಿಸುತಿದ್ದರು. 2016-17ರವರೆಗೂ ಸರಕಾರದಿಂದ ಜಮೀನನ್ನು ನೀಡಿದಂತಹ ಫ‌ಲಾನುಭವಿಗಳಾದ ಗಂಗಮ್ಮ, ಹನುಮಯ್ಯ ,ಕೃಷ್ಣಪ್ಪ, ರಾಜಣ್ಣ ಮತ್ತಿತರ ಹೆಸರಿನಲ್ಲಿಯೇ ಪಾಣಿ ಮತ್ತಿತರ ದಾಖಲೆಗಳು ಚಾಲ್ತಿಯಲ್ಲಿದ್ದವು, ಆದರೆ ಕಳೆದ ಎರೆಡು ವರ್ಷಗಳ ಹಿಂದೆ ಬಿ.ಹೆಚ್‌.ರಮೇಶ್‌ ಎಂಬುವರು ತಾಲೂಕಿನ ಕೊಡಿಗೇಹಳ್ಳಿ ಓಬಳಾಪುರ ಮತ್ತಿತರ ಗ್ರಾಮಗಳು ಮೆಗಾಸಿಟಿ ಆಗುತ್ತಿದೆ

ಇದರಿಂದಾಗಿ ನಿಮ್ಮ ಜಮೀನುಗಳು ಸರಕಾರ ವಶಕ್ಕೆ ಪಡೆಯುತ್ತದೆ ಎಂದು ಇಲ್ಲಸಲ್ಲದ ಹುನ್ನಾರಗಳನ್ನು ಮಾಡಿ ನಮ್ಮ ಜಮೀನಿಗಳ ಜನರಲ್‌ಪವರ್‌ ಆಫ್ ಅಟಾರ್ನಿಯನ್ನು ನಮಗೆ ಯಾವುದೇ ಹಣವನ್ನು ನೀಡದೆ ನಮ್ಮ ಜಮೀನುಗಳನ್ನು ಬೆಂಗಳೂರಿನಲ್ಲಿರುವ ಸುಜಾತ, ಡಾ.ಕೃಷ್ಣಮೂರ್ತಿ, ಅಕ್ಷಯ್‌ಕುಮಾರ್‌, ಕೊಡಿಗೇಹಳ್ಳಿ ಪಂಚಾಯತಿಯಲ್ಲಿ ನೀರುಗಂಟಿಯಾಗಿ ಕೆಲಸಮಾಡುತ್ತಿರುವ ಹನುಂತರಾಯಪ್ಪ ಅವರುಗಳಿಗೆ ಪರಭಾರೆಮಾಡಿದ್ದು ನಮಗೆ ಕೋಟ್ಯಾಂತರ ರೂಗಳ ಅನ್ಯಾಯವಾಗಿರುತ್ತದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಕೃಷ್ಣಪ್ಪ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನಿನ ಕಥೆಯನ್ನು ಎಳೆಎಳೆಯಾಗಿ ಪತ್ರಿಕೆಗೆ ಬಿಡಿಸಿಟ್ಟರು.

2ನೇ ಭಾರಿ ಹೋರಾಟ: ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ 2014ರ ಜುಲೈ ತಿಂಗಳಿನಲ್ಲಿ ಅಮರಣಾಂತರ ಪುವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು ಅಂದಿನ ತಹಸೀಲ್ದಾರ್‌ ಆಗಿದ್ದ ನರಸಿಂಹಮೂರ್ತಿ ಅವರು ಬಿಹೆಚ್‌. ರಮೇಶ್‌ ಅವರಿಗೆ ಜಿಪಿಎ ರದ್ದುಗೊಳಿಸುವಂತೆ ಸೂಚನೆಯನ್ನು ನೀಡುವ ಮೂಲಕ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಮುಂದಾಗಿದ್ದರು. ಆದರೆ ರಮೇಶ್‌ ಅವರು ಲಕ್ಷಾಂತರ ರೂಪಾಯಿಗಳನ್ನು ನೀಡಿದ್ದೇವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕಂದಾಯ ಅಧಿಕಾರಿಗಳಿಗೆ ಆಮಿಷವನ್ನು ತೋರಿ ದಾಖಲೆಗಳನ್ನು ಬದಲಾಯಿಸಿ ಕೊಂಡಿದ್ದಾರೆಂದು ಸತ್ಯಾಗ್ರಹಿಗಳು ದೂರಿದ್ದಾರೆ.

ಒತ್ತಾಯ: ಪಿಟಿಸಿಎಲ್‌ ಕಾಯ್ದೆಯನ್ನು ಉಲ್ಲಂಘನೆಮಾಡಿ ನಮ್ಮ ಜಮೀನುಗಳ ಖಾತೆಗಳನ್ನು ಬದಲಾವಣೆ ಮಾಡಿರುವ ಸರಕಾರಿ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಜರುಗಿಸಬೇಕು, ದಲಿತರಾದ ನಮಗೆ ನ್ಯಾಯ ಒದಗಿಸಬೇಕು, ಮೂರನೇ ದಿನಕ್ಕೆ ಕಾಲಿಟ್ಟಿರುವ ಉಪವಾಸ ಸತ್ಯಾಗ್ರಹ ಸ್ಥಳಕೆಕ ಯಾವ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಭೇಟಿನೀಡಿ ಸಮಸ್ಯೆಯನ್ನು ಆಲಿಸಿಲ್ಲ, ಕೂಡಲೆ ನಮ್ಮ ಸಮಸ್ಯೆಯನ್ನು ಪರಿಹರಿಸಬೇಕೆಂದು ಅಮರಣಾಂತರ ಉಪವಾಸಹಮ್ಮಿಕೊಂಡಿರುವ ಜಮೀನಿನ ಮಾಲೀಕರುಗಳಾಗಿರುವ ನೊಂದ ದಲಿತ ಕುಟುಂಬಗಳು ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

ಪ್ರತಿಕ್ರಿಯೆ: ತಹಸೀಲ್ದಾರ್‌ ಶ್ರೀನಿವಾಸಯ್ಯ ಮಾತನಾಡಿ ನಾನು ಯಾರಿಗೂ ಬೆದರಿಕೆಯನ್ನು ಹಾಕಿಲ್ಲ,ಹೋರಾಟ ಪ್ರತಿಯೊಬ್ಬರ ಹಕ್ಕು, ಅವರ ಅತ್ಯಾಗ್ರಹ ಹೋರಾಟಕ್ಕೆ ತಾಲೂಕು ಕಚೇರಿ ಬಳಿಯಲ್ಲಿರುವ ನೇತಾಜಿ ಉದ್ಯಾನವನದಲ್ಲಿ ಅವಕಾಶ ಕಲ್ಪಿಸಲಾಗಿದೆ, ಯಾರಾದರೂ ಕಚೇರಿಗೆ ಬಂದು ಮನವಿಯನ್ನು ಸಲ್ಲಿಸಿದರೆ ದಾಖಲೆಗಳನ್ನು ಪರಿಶೀಲಿಸಿ ಸೂಕ್ತರೀತಿಯಲ್ಲಿ ಕಾನೂರೀತ್ಯಾ ಕ್ರಮವಹಿಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next