ತುಮಕೂರು: ದೇವರಾಯನದುರ್ಗ ಗ್ರಾಮದಲ್ಲಿ ಫೆ.13, 14 ಮತ್ತು 15ರಂದು ನಡೆಯುವ ಶ್ರೀ ಯೋಗಲಕ್ಷ್ಮೀ ನರಸಿಂಹಸ್ವಾಮಿ ಕುಂಭಾಭಿಷೇಕಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮುಂಜಾಗ್ರತಾ ಕ್ರಮವಾಗಿ ಸಂಚಾರ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದರು.
ನಗರ ಸಮೀಪದ ದೇವರಾಯನದುರ್ಗದ ಯಾತ್ರಿ ನಿವಾಸದಲ್ಲಿ ಶನಿವಾರ, 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಯೋಗಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾ ಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು.
ಮುಚ್ಚಳಿಕೆ ಬೇಡ: ಕುಂಭಾಭಿಷೇಕಕ್ಕೂ ಮುನ್ನ ರಥಬೀದಿ, ಇತರೆ ರಸ್ತೆಗಳನ್ನು ದುರಸ್ತಿಪಡಿಸಬೇಕು. ಈ ಹಿಂದೆ ಕುಂಭಾಭಿಷೇಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿಯಲ್ಲಿಯೇ ಈ ಬಾರಿಯೂ ನೆರ ವೇರಿಸಬೇಕು. ಅದರಲ್ಲಿ ಯಾವುದೇ ಬದಲಾವಣೆ ಬೇಡ. ಶ್ರೀ ಯೋಗಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿ ಷೇಕ ನೆರವೇರಿಸಲು ದಾನಿಗಳಿಂದ ನಿರ್ವಹಿಸುವ ಕಾಮಗಾರಿಗಳಿಗೆ ಹೊಸ ಮುಚ್ಚಳಿಕೆ ಪತ್ರ ಬೇಡ. ಈ ಹಿಂದೆ ದಾನಿಗಳು ಹೇಗೆ ಮಾಡುತ್ತಿದ್ದರೋ ಅಥವಾ ಯಾರಿಗೆ ದೇವರಕಾರ್ಯ ಮಾಡಬೇಕೆನ್ನುವ ಆಸಕ್ತಿ ಇರುತ್ತದೋ ಅವರಿಗೆ ಅವಕಾಶ ನೀಡಬೇಕೆಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಅವರಿಗೆ ನಿರ್ದೇಶನ ನೀಡಿದರು.
ಶ್ರೀ ಭೋಗನರಸಿಂಹಸ್ವಾಮಿ ದೇವಾಲಯದ ಪಕ್ಕದ ಪ್ರಸಾದ ನಿಲಯವನ್ನು ಕಲ್ಯಾಣ ಮಂಟಪವನ್ನಾಗಿ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಪ್ರಸ್ತಾಪಿಸಿದಾಗ, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಕುಂಭಾಭಿಷೇಕದ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ ಪ್ರಸಾದ ನಿಲಯವನ್ನೇ ವ್ಯವಸ್ಥಿತವಾಗಿ ಸರಿಪಡಿಸಬೇಕೆಂದರು. ದೇವಾಲಯಕ್ಕೆ ಸೇರಿದ ಕಾಟೇಜ್‌ನಲ್ಲಿ ನಡೆಸ ಲಾಗುತ್ತಿರುವ ಅಂಗನವಾಡಿ ಹಿಂಭಾಗ ಸ್ನಾನದ ಗೃಹ ಮತ್ತು ಶೌಚಾಲಯ ನಿರ್ಮಿಸಲು ಅನುಮತಿ ನೀಡಬೇಕೆಂದು ಕಾಟೇಜ್‌ನ ದಾನಿ ಮನವಿ ಮಾಡಿದಾಗ, ಅಂಗನವಾಡಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಹೇಳಿದರು.
ಅನುಮತಿ ಪಡೆದ ವಿಚಾರಗಳು: ಶ್ರೀ ಯೋಗ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ರಾಜ ಗೋಪುರ ಕಲಾಕರ್ಷಣೆಯನ್ನು ನ.22ರಂದು ನಡೆಸುವ, ಶ್ರೀ ಕ್ಷೇತ್ರದ ಬ್ರಹ್ಮರಥೋತ್ಸವ ರಥದ ನಿಲುಗಡೆ ಸ್ಥಳವನ್ನು ತಗ್ಗಿಸಿ ಸಮತಟ್ಟು ಮಾಡಿಸಿ ಸುಭದ್ರತೆ ಮಾಡುವ, ಶ್ರೀ ಭೋಗನರಸಿಂಹಸ್ವಾಮಿ ದೇವಾಲಯದ ಪ್ರಾಕಾರದಲ್ಲಿ ಗ್ರಿಲ್ ಅಳವಡಿಸುವ, ದೇವಾಲಯದಲ್ಲಿರುವ ಅನುಪಯುಕ್ತ ಸಾಮಗ್ರಿವಿಲೇವಾರಿ ಮಾಡುವ, ನೂತನ ನಿತ್ಯ ಅನ್ನ ಸಂತರ್ಪಣಾ ಭವನದ ಮೇಲ್ಭಾಗದ ಕೊಠಡಿಗಳಿಗೆ ಪೀಠೊಪಕರಣ, ಇತರೆ ಅವಶ್ಯಕ ವಸ್ತುಗಳನ್ನು ಖರೀದಿ ಸೇರಿದಂತೆ ಹಲವಾರು ವಿಚಾರಗಳನ್ನು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಯಿತು. ಜಿಲ್ಲಾ ಉಪವಿಭಾಗಾಧಿಕಾರಿ ಸಿ.ಎಲ್. ಶಿವಕುಮಾರ್, ಶ್ರೀ ಯೋಗಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ವ್ಯವಸ್ಥಾಪಕ ಎನ್.ನರಸಿಂ ಹಭಟ್ಟರ್, ಶ್ರೀ ಭೋಗನರಸಿಂಹಸ್ವಾಮಿ ದೇವಾಲ ಯದ ವೆಂಕಟರಾಜಭಟ್ಟರ್ ಇದ್ದರು.