Advertisement
ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ, ಕುಡಿಯುವ ನೀರು, ಶೌಚಾಲಯವೂ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳು ಕಾಲೇಜಿನಲ್ಲಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೂಕ್ತ ಸೌಕರ್ಯಗಳಿಲ್ಲದ ಕಾರಣ ಅವರ ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗಿದೆ.
Related Articles
ಹೀಗಿದ್ದರೂ ಬಹುತೇಕ ವಿಷಯಗಳ ಉಪನ್ಯಾಸಕರು ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯ ವಿಷಯಗಳ
ಬಗ್ಗೆ ತಿಳಿದುಕೊಳ್ಳಲು ಸಮಸ್ಯೆ ಎದುರಾಗುತ್ತಿದೆ. ಕಾಲೇಜಿನಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರೇ ಇದ್ದಾರೆ. ಅವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಸಮೀಪದ ಪ್ರೌಢಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಕಾಲೇಜಿನ ಹಿಂಭಾಗದಲ್ಲಿ ಕಾಂಪೌಂಡ್ ಇಲ್ಲದಿರುವುದರಿಂದ ಗ್ರಾಮಸ್ಥರು ತರಗತಿ ಕೊ ಠಡಿಗಳಮಗ್ಗಲಲ್ಲಿಯೇ ಮಲ, ಮೂತ್ರ ವಿರ್ಸಜನೆ ಮಾಡುತ್ತಾರೆ. ಎಲ್ಲೆಂದರಲ್ಲಿ ತಂಬಾಕು ಜಗಿದು ಉಗುಳುತ್ತಾರೆ. ಎಲ್ಲೆಡೆ ದುರ್ವಾಸನೆ ಬೀರುತ್ತಿದ್ದು, ತರಗತಿಗಳಲ್ಲಿ ಕುಳಿತು ಪಾಠ-ಪ್ರವಚನ ಕೇಳಲು ಹಿಂಸೆಯಾಗುತ್ತಿದೆ. ಕಾಲೇಜಿನಲ್ಲಿದ್ದ ನೀರಿನ ಟ್ಯಾಂಕ್ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕುಡಿವ ನೀರು, ಶೌಚಕ್ಕೆ ಸಮಸ್ಯೆಯಾಗುತ್ತಿದೆ. ಉಪನ್ಯಾಸಕರ ಕೊರತೆ ಇರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ನೋವು
ವ್ಯಕ್ತಪಡಿಸುತ್ತಾರೆ. ಕಾಲೇಜಿನಲ್ಲಿ ಹಲವು ಸಮಸ್ಯೆಗಳು ಇವೆ. 55 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿ, ಶೌಚಾಲಯ ನಿರ್ಮಾಣಕ್ಕೆ
ಅನುದಾನ ಮಂಜೂರಾಗಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇರುವ ಉಪನ್ಯಾಸಕರ ಪರಿಶ್ರಮದಿಂದ ಈ ಬಾರಿಕಾಲೇಜಿಗೆ ಶೇ.89ರಷ್ಟು ಫಲಿತಾಂಶ ಬಂದಿದೆ.
ಎ.ಎಂ.ಜಯಶ್ರೀ, ಪ್ರಾಚಾರ್ಯರು, ಸರ್ಕಾರಿ ಕಾಲೇಜು. ಈಗಾಗಲೇ ಎಮ್ಮಿಗನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಮಾಹಿತಿ
ಪಡೆದಿದ್ದೇನೆ. ಕಾಲೇಜಿಗೆ ಮಂಜೂರಾಗಿರುವ ಶೌಚಾಲಯ ಶೀಘ್ರ ನಿರ್ಮಿಸುವಂತೆ ಜಿಪಂ ಕಾರ್ಯನಿರ್ವಾಹಕ
ಅಭಿಯಂತರರಿಗೆ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನುಳಿದಂತೆ
ಉಪನ್ಯಾಸಕರು ಕೊರತೆ, ಕಾಂಪೌಂಡು ನಿರ್ಮಾಣ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.
ಜೆ.ಎನ್.ಗಣೇಶ್, ಶಾಸಕರು.