Advertisement
ನೀರ್ಚಾಲು ಮಹಾಜನ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಗಡಿನಾಡ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನಗಳು ರಾಜ್ಯದ ದಕ್ಷಿಣದ ಜಿಲ್ಲೆಗಳಿಂದ ಅಧಿಕಾರಿಗಳಾಗಿ ಬರುವವರಿಂದ ವ್ಯಾಪಕವಾಗಿ ನಡೆ ಯುತ್ತಿದೆ. ಇದನ್ನು ಹತೋಟಿಗೆ ತರಲು ಕನ್ನಡಿಗರು ಒಗ್ಗಟ್ಟಾಗಬೇಕು ಎಂದರು. ಸಮ್ಮೇಳನದಲ್ಲಿ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂಬ ದೂರುಗಳಿವೆ. ಆದರೆ ಇಲ್ಲಿಯ ಕೃಷಿಕರು, ವ್ಯಾಪಾರಿಗಳು, ಜನ ಸಾಮಾನ್ಯರಿಗೂ ಕನ್ನಡ ಭಾಷೆಯ ಅಗತ್ಯ ಇದೆ ಎಂಬ ಗಂಭೀರತೆಯನ್ನು ಅರಿತು ಜಾಗೃತರಾದಲ್ಲಿ ಯಶಸ್ಸು ಸಾಧ್ಯ ಎಂದರು. ಬೇಳ ಶೋಕಮಾತಾ ದೇವಾ ಲಯದ ಧರ್ಮಗುರು ವಂ| ಜೋನ್ ವಾಸ್, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಮಹಾಜನ ವಿದ್ಯಾ ಸಂಸ್ಥೆಗಳ ಪ್ರಬಂಧಕ, ಸಮ್ಮೇಳನ ಕಾರ್ಯಾಧ್ಯಕ್ಷ ಜಯದೇವ ಖಂಡಿಗೆ, ಜಿ.ಪಂ. ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಬ್ಲಾಕ್ ಪಂ. ಸದಸ್ಯ ಅವಿನಾಶ ರೈ, ಗ್ರಾ.ಪಂ. ಸದಸ್ಯ ಶಂಕರ ಡಿ., ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ. ಭಟ್ ಉಪಸ್ಥಿತರಿದ್ದರು.ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ನರಹರಿ ಪಿ. ಕಳತ್ತೂರು ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿ ದರು. ಯತೀಶ್ ಕುಮಾರ್ ರೈ ವಂದಿಸಿದರು.
Related Articles
ವಿವಿಧ ಕ್ಷೇತ್ರಗಳ ಸಾಧಕರಾದ ಎಂ. ಶಂಕರ ನಂಬಿಯಾರ್ (ಶಿಕ್ಷಣ), ಐ.ವಿ. ಭಟ್ (ಕನ್ನಡ ಹೋರಾಟ), ಕೃಷ್ಣ ಭಟ್ ಜೇನುಮೂಲೆ (ಸಂಗೀತ), ಶೇಡಿಗುಮ್ಮೆ ವಾಸುದೇವ ಭಟ್ (ಯಕ್ಷಗಾನ), ಪ್ರೇಮಾ ಭಟ್ ತೊಟ್ಟೆತ್ತೋಡಿ (ಸಮಾಜ ಸೇವೆ), ರಾಧಾಕೃಷ್ಣ ಕೆ.ಉಳಿಯತ್ತಡ್ಕ (ಸಾಹಿತ್ಯ) ಅವರನ್ನು ಸಮ್ಮೇಳನದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಸಮ್ಮೇಳನದ ನಿರ್ಣಯಗಳುಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಠರಾವು ಮಂಡಿಸಿದರು. ಮುಖ್ಯಾಂಶಗಳು ಇಂತಿವೆ:
– ಮಹಾಜನ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು
– ಕನ್ನಡ ಭಾಷಾ ಅಲ್ಪಸಂಖ್ಯಾಕರ ಹಕ್ಕುಗಳಿಗೆ ಕೇರಳ ಸರಕಾರ ಬದ್ಧತೆ ತೋರಬೇಕು
– ಕನ್ನಡ ವಿದ್ಯಾರ್ಥಿಗಳಿಗೆ ಕಡ್ಡಾಯ ಮಲೆಯಾಳ ಕಾನೂನನ್ನು ಹಿಂಪಡೆಯಬೇಕು
– ಕಾನೂನು/ ನಿಯಮಗಳನ್ನು ರೂಪಿಸುವಾಗ ಭಾಷಾ ಅಲ್ಪಸಂಖ್ಯಾಕರಿಗೆ ಕೊಡಮಾಡಿದ ಸವಲತ್ತುಗಳಿಗೆ ಚ್ಯುತಿ ಬಾರದಂತೆ ನಿಗಾ ವಹಿಸಬೇಕು
– ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳನ್ನು ಕನ್ನಡ ಭಾಷಾ ಅಲ್ಪ ಸಂಖ್ಯಾಕರಿಗೇ ಮೀಸಲಿಡ ಬೇಕು/ ಆದೇಶ, ಸುತ್ತೋಲೆ ಕನ್ನಡ ದಲ್ಲಿ ಇರಬೇಕು/ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು, ಸ್ಥಳ ನಾಮಗಳು ಕನ್ನಡದಲ್ಲೇ ಇರಲು ಅಗತ್ಯ ಕ್ರಮ ಜಾರಿಗೊಳಿಸಬೇಕು