Advertisement
ಇಂದಿನ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಪಠ್ಯಗಳ ಬಗೆಗಿನ ಸಮಸ್ಯೆಗಳನ್ನು ಪರಿಹರಿಸುವುದು ಕೂಡ ಗಂಭೀರವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನ ಕೂಡ ಸತತವಾಗಿದೆ. ಆದರೆ ಮುಖ್ಯವಾಗಿ ವಿದ್ಯಾರ್ಥಿಗಳು ಬೋಧಿಸಿದ ಪಠ್ಯಗಳ ವಿಷಯವನ್ನು ಗ್ರಹಿಕೆ ಸಹಿತ ವಿಷಯಗಳ ಬಗೆಗಿನ ಸ್ಪಷ್ಟತೆ ಪಡೆದುಕೊಳ್ಳುವಲ್ಲಿ ಎಡವುತ್ತಾರೆ ಎಂಬ ವಾದವನ್ನು ಆಗಾಗ ಕೇಳಿರುತ್ತೇವೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನನ ಮಾಡುವುದು ಕೂಡ ಅಗತ್ಯವಾಗಿದೆ.
ನಾವು ಯಾವುದೇ ವಿಷಯಗಳನ್ನು ಗ್ರಹಿಸಿಕೊಳ್ಳುವ ಶಕ್ತಿ ರೂಢಿಸಿಕೊಳ್ಳಬೇಕಾದರೆ ಮೊದಲು ಬೋಧಿಸಿದ ವಿಷಯಗಳನ್ನು ಸರಿಯಾಗಿ ಕೇಳಿ, ಆಲಿಸಬೇಕಿದೆ. ಯಾರು ಚೆನ್ನಾಗಿ ಕೇಳುತ್ತಾರೋ, ಅವರು ಚೆನ್ನಾಗಿ ಬರೆಯುತ್ತಾರೆ ಎಂಬ ಮಾತಿದೆ. ಅಂತೆಯೇ ನಾವು ಚೆನ್ನಾಗಿ ಕೇಳಿದಾಗ ವಿಷಯಗಳನ್ನು ಗ್ರಹಿಸಿಕೊಳ್ಳುವ ಶಕ್ತಿ ನಮ್ಮದಾಗುತ್ತದೆ. ಇದರಿಂದ ಯಾವುದಾದರೂ ವಿಷಯದ ಬಗ್ಗೆ ಗೊಂದಲ ಮೂಡಿದರೆ ನಾವು ಕೇಳುವ ಮೂಲಕ ಸ್ಪಷ್ಟತೆಯನ್ನು ಪಡೆಯಬಹುದು.
Related Articles
ಪ್ರಾಯೋಗಿಕ ಕಾರ್ಯಗಳು ನಮ್ಮಲ್ಲಿ ಹೆಚ್ಚು ದಿನಗಳ ಕಾಲದವರೆಗೆ ನೆನಪಿನಲ್ಲಿರುತ್ತವೆ. ನಮಗೆ ತುಂಬಾ ಕ್ಲಿಷ್ಟವಾದ ವಿಷಯಗಳನ್ನು ಹೆಚ್ಚಿನ ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಈ ವಿಚಾರವಾಗಿ ನಾವು ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದ ವಿಷಯವಾಗಿ ತಮಗೆ ಕ್ಲಿಷ್ಟವಾದ ಅಧ್ಯಯನಗಳನ್ನು ಪ್ರಾಯೋಗಿಕವಾಗಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಹಾಗೆಯೇ ಇನ್ನಿತರ ವಿಷಯಗಳನ್ನು ಬರೆದು ಮನನ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ರೀತಿಯಾಗಿ ಮಾಡಿದಾಗ ಗ್ರಹಿಕೆ ಸಾಮರ್ಥ್ಯ ಹೆಚ್ಚುತ್ತದೆ. ಉತ್ತರಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬಹುದಾಗಿದೆ.
Advertisement
ನಿರಂತರವಾದ ಅಧ್ಯಯನನಿರಂತರವಾದ ಅಧ್ಯಯನವು ವಿದ್ಯಾರ್ಥಿಗಳ ಸರ್ವ ರೀತಿಯ ವಿಕಸನಕ್ಕೆ ಪೂರಕವಾಗುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡಿ ಮನನ ಮಾಡಿಕೊಳ್ಳುವುದರಿಂದಾಗಿ ನಮಗೆ ಒಂದು ವಿಷಯವನ್ನು ಯಾವ ರೀತಿಯಾಗಿ ಪ್ರಚುರಪಡಿಸಬಹುದು ಎಂಬ ಅಂಶವನ್ನು ಗೊತ್ತುಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ನಿರಂತರ ಅಧ್ಯಯನದಿಂದ ನಮಗೆ ಗ್ರಹಿಕೆ ಶಕ್ತಿಯೂ ವೃದ್ಧಿಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರವಾರ ಅಧ್ಯಯನದ ಕಡೆಗೆ ಗಮನಹರಿಸಬೇಕಿದೆ.