Advertisement
ಮೂಡುಬಿದಿರೆ: ತೆಂಕ ಮಿಜಾರು ಗ್ರಾ.ಪಂ. ವ್ಯಾಪ್ತಿಗೆ ಬರುವ ತೆಂಕ ಮಿಜಾರು ಗ್ರಾಮದಲ್ಲಿ ನೂರಾರು ಮಂದಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ!
Related Articles
Advertisement
ಇನ್ನೂ ಪ್ರಕಟವಾಗದ ನರೇಗಾ ಒಂಬುಡ್ಸ್‌ಮನ್ ವರದಿ :
ಉದ್ಯೋಗ ಖಾತರಿ ಯೋಜನೆಯಡಿ ತೆಂಕಮಿಜಾರು ಗ್ರಾಮದಲ್ಲಿ ಸುಮಾರು ಕೋಟಿ ರೂ. ಮೊತ್ತದಷ್ಟು ವಿನಿಯೋಜನೆಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳ ಕುರಿತಾದ ದೂರುಗಳನ್ನು ಪರಿಶೀಲಿಸಲು ನಾಲ್ಕು ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿನೀಡಿದ್ದ ನರೇಗಾ ಒಂಬುಡ್ಸ್ ಮನ್ ಅವರ ವರದಿ ಇನ್ನೂ ಪ್ರಕಟವಾಗಿಲ್ಲ!
ಇತರ ಸಮಸ್ಯೆಗಳೇನು? :
- ಜ ತೆಂಕಮಿಜಾರು ಗ್ರಾಮದವರು ಈಗ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬರಬೇಕಾದರೆ 10 ಕಿ.ಮೀ. ದೂರದ ಕಲ್ಲಮುಂಡೂರಿಗೆ ಹೋಗಬೇಕು. ಇದರ ಬದಲು ಇಲ್ಲೇ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕಾಗಿದೆ.
- ಮಂಜನಬೈಲು ಪಿದಮಲೆ ಪ್ರದೇಶದವರು ಪಂಚಾಯತ್‌ಗೆ ಬರಬೇಕಾದರೆ ಹತ್ತು ಕಿ.ಮೀ. ಸುತ್ತು ಬಳಸಿ ಬರಬೇಕು. 1983ರಲ್ಲಿ ಮಣ್ಣಿನ ನೇರ ರಸ್ತೆ ನಿರ್ಮಾಣವಾದರೂ ಸಂಪೂರ್ಣ ಡಾಮರು ಬಿದ್ದಿಲ್ಲ.
- ನೀರ್ಕೆರೆ ಸರಕಾರಿ ಶಾಲೆಯನ್ನು ಪಬ್ಲಿಕ್ ಶಾಲೆಯನ್ನಾಗಿ ಮಾರ್ಪಡಿಸಿ ಪದವಿ ಪೂರ್ವ ಶಿಕ್ಷಣದವರೆಗೆ ಇಲ್ಲಿಯೇ ಅವಕಾಶ ಕಲ್ಪಿಸಬೇಕು.
- ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಕಿಂಡಿ ಅಣೆಕಟ್ಟುಗಳು ದುರ್ಬಲ, ಶಿಥಿಲವಾಗಿದ್ದು ಹೊಸದಾಗಿ ನಿರ್ಮಿಸುವ ಅಗತ್ಯವಿದೆ.
- 94ಸಿ ಯಲ್ಲಿ ಅರ್ಜಿ ಸಲ್ಲಿಸಿದ ಅನೇಕರಿಗೆ ಡೀಮ್ಡ್ ಫಾರೆಸ್ಟ್ ಗುಮ್ಮ ಕಾಡುತ್ತಿದೆ.
- ಜಲಜೀವನ ಮಿಷನ್ ಯೋಜನೆಯ ಈಗಿರುವ ನಕ್ಷೆಯನ್ನು ಬದಲಿಸಿ, ಜನವಸತಿ ಇರುವ ಪ್ರದೇಶಕ್ಕೆ ನೀರು ಲಭ್ಯವಾಗುವಂತೆ ಮಾಡಬೇಕಾಗಿದೆ.