Advertisement
ತರಕಾರಿ ಮಾರುಕಟ್ಟೆಗೆ ಶೌಚಾಲಯವಿಲ್ಲ
Related Articles
Advertisement
ಮಾರುಕಟ್ಟೆಗೆ ಆವರಣ ಗೋಡೆ, ತಡೆಬೇಲಿ ವ್ಯವಸ್ಥೆ ಇಲ್ಲ. ಹಾಗಾಗಿ ಜನರ ಜತೆಗೆ ಜಾನುವಾರುಗಳೂ ಅಡ್ಡಾಡು ವುದು ಸಹಜವಾಗಿ ಗೋಚರಿಸುತ್ತದೆ. ವ್ಯಾಪಾರಿಗಳು ತರಕಾರಿ ರಾಶಿಗೆ ಹಾಕಿದ ಪರದೆ, ಹೊದಿಕೆಯನ್ನು ಎಳೆದು ತರಕಾರಿ, ಸಾಮಗ್ರಿ ಸ್ವಾಹಾ ಮಾಡು ವುದೂ ಇದೆ. ಮಾರುಕಟ್ಟೆಗೆ ಪಹರೆ ವ್ಯವಸ್ಥೆ ಇದೆಯೋ ಎಂಬ ಸಂದೇಹವಿದೆ. ಏಕೆಂದರೆ ಹಲವರ ಈರುಳ್ಳಿ, ಇತರ ತರಕಾರಿ ಗೋಣಿ ಚೀಲಗಳನ್ನು ಯಾರೋ ಹೊತ್ತೂಯ್ಯುವ ಪ್ರಕರಣ ಗಳ ಬಗ್ಗೆ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಟವರ್ ಭೀತಿ
ಹತ್ತಿರದಲ್ಲಿಯೇ ಇರುವ ಬಿಎಸ್ ಎನ್‌ಎಲ್‌ಟವರ್ ಸುಸ್ಥಿತಿಯಲ್ಲಿರುವ ಬಗ್ಗೆ ಸಂತೆಯೊಳಗಿನ ಮಂದಿಗೆ ಸಂಶಯ ವಿದೆ. ಅದು ಯಾವಾಗಲಾದರೂ ತಮ್ಮ ಮೇಲೆ ಬಿದ್ದರೆ ಎಂಬ ಭೀತಿ ಕಾಡುತ್ತಿದೆ ಅವರದ್ದು (ಇದು ಪುರಸಭೆಗೆ ಸಂಬಂಧಿಸಿದ್ದಿಲ್ಲದಿರಬಹುದು)
ಕೊಳಚೆ ನೀರು ಮಾರ್ಗದಲ್ಲಿ
ಮಾರುಕಟ್ಟೆಯ ವಾಯುವ್ಯ ಭಾಗದಲ್ಲಿ ರಾಶಿ ಹಾಕಲಾಗಿರುವ ಗುಜರಿ ಸಾಮಾನಿನ ರಾಶಿಯಡಿ ಯಿಂದ ಜೋರಾಗಿ ಮಳೆ ಸುರಿದಾಗ ದುರ್ವಾಸನೆ ಸಹಿತ ತ್ಯಾಜ್ಯ ಕಲ್ಮಶ ನೀರು ಹೊರಸೂಸುತ್ತಲೇ ಇರುತ್ತದೆ. ಅದರ ಮೇಲೆ ವಾಹನಗಳು ಓಡಾಡುವಾಗ ನಡೆದುಕೊಂಡು ಹೋಗುವವರಿಗೆ ತ್ಯಾಜ್ಯ ನೀರಿನ ಸೇಚನವಾಗುವುದನ್ನು ಗಮನಿಸಿ ಸೂಕ್ತ ಕ್ರಮ ಜರಗಿಸಬೇಕಾಗಿದೆ.
ಸೂಕ್ತ ಕ್ರಮ: ರಿಂಗ್‌ರೋಡಿನ ಪೂರ್ವದಲ್ಲಿ ಹಸಿಮೀನು, ಮಾಂಸದ ಮಳಿಗೆಗಳ ಪಕ್ಕ ಶೌಚಾಲಯವಿದೆ. ಸುಸಜ್ಜಿತ ಶೌಚಾಲಯವನ್ನು ರಿಂಗ್ ರೋಡಿನ ಆಚೆ ಬದಿಯಲ್ಲಿ ನಿರ್ಮಿಸಲಾಗುತ್ತಿದೆ. ಹಾಗಿದ್ದರೂ ತರಕಾರಿ, ಒಣಮೀನು ಮಾರುಕಟ್ಟೆಯ ವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಜರಗಿಸಲಾಗುವುದು. -ಪ್ರಸಾದ್ ಕುಮಾರ್, ಅಧ್ಯಕ್ಷರು, ಮೂಡುಬಿದಿರೆ ಪುರಸಭೆ
-ಧನಂಜಯ ಮೂಡುಬಿದಿರೆ