Advertisement
ಪಟ್ಟಣಕ್ಕೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಮೂಲ ಸೌಕರ್ಯ ಯೋಜನೆಗಳನ್ನು ಹಂತ ಹಂತವಾಗಿ ತಾಲೂಕಾಡಳಿತ ಹಾಗೂ ಪುರಸಭೆ ಅನುಷ್ಠಾನ ಮಾಡಬೇಕಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆಗಳಾಗಿವೆ. ಆದರೆ ಕಾಮಗಾರಿ ಮಾಡಿ ಒಂದು ವರ್ಷದೊಳಗೆ ಕೆಲ ರಸ್ತೆಗಳು ಕಿತ್ತುಹೋಗಿವೆ. ಮೊದಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಿದ ನಂತರ ಇನ್ನುಳಿದ ಕಾಮಗಾರಿಗಳನ್ನು ಹಾಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ಮಾಡಬೇಕಾಗಿದೆ.
Related Articles
Advertisement
ಪುರಸಭೆ ಪರದಾಟ: ದಾಖಲಾತಿಗಳಿಗಾಗಿ ಪುರಸಭೆಗೆ ಜನರ ಅಲೆದಾಟ ತಪ್ಪಿಲ್ಲ. ಮನೆಯ ಉತಾರಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನೂವರೆಗೆ ಸಿಕ್ಕಿಲ್ಲ. ಪುರಸಭೆ ಕಾರ್ಯಾಲಯದಲ್ಲಿ ಹೇಳುವವರು ಕೇಳುವವರು ಇಲ್ಲವೇ ಇಲ್ಲ. ಪುರಸಭೆಗೆ ಹೋದಾಗೊಮ್ಮೆ ಕರ ವಸೂಲಿ, ನಳದ ವಸೂಲಿ, ಇತರೆ ಕೆಲಸಗಳಿಗೆ ಹೋಗಿದ್ದಾರೆಂದು ಇದ್ದ ಸಿಬ್ಬಂದಿ ಉತ್ತರ ಬರುತ್ತದೆ ಬರುತ್ತದೆ ಎಂಬುದು ಎಂಬುದು ಸಾರ್ವಜನಿಕರೊಬ್ಬರ ದೂರು. ಸಾರ್ವಜನಿಕರ ಅಹವಾಲು, ಮನೆಯ ಉತಾರ, ಜನನ-ಮರಣ ಪ್ರಮಾಣ ಪತ್ರ, ಇತರೆ ಕೆಲಸಗಳಿಗೆ ತಿಂಗಳುಗಟ್ಟಲೆ ಅಲೆದಾಡಬೇಕು. ಇನ್ನು ಚರಂಡಿ ಸ್ವಚ್ಛತೆ, ಕ್ರಿಮಿನಾಶಕ ಸಿಂಪಡಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳತ್ತ ದಿವ್ಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಪುರಸಭೆ ಚುನಾವಣೆ ನಡೆದು ಎಂಟು ತಿಂಗಳು ಕಳೆದರೂ ಇನ್ನುವರೆಗೂ ಆಡಳಿತವಿಲ್ಲದೇ ಸಾರ್ವಜನಿಕರ ಕೆಲಸಗಳು ನಿಂತ ನೀರಾಗಿವೆ.
ಆಶ್ರಯ ಸಮಿತಿ ಇಲ್ಲದ್ದರಿಂದ ಪಟ್ಟಣದ ಆಶ್ರಯ ಪ್ಲಾಟ್ ಗಳ ಕಾರ್ಯ ಸ್ಥಗಿತವಾಗಿತ್ತು. ನವಲಗುಂದ-ಅಣ್ಣಿಗೇರಿ ಆಶ್ರಯ ಸಮಿತಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಆಶ್ರಯ ಪ್ಲಾಟ್‌ನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಯೋಗ್ಯ ಫಲಾನುಭವಿಗಳಿಗೆ ಸೂರು ನೀಡಲಾಗುವುದು. -ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ
-ಪುಂಡಲೀಕ ಮುಧೋಳೆ