Advertisement

ತಾಲೂಕು ಆಡಳಿತ ಸಹಕಾರ ನೀಡಿದರೆ ಸಮಸ್ಯೆಗಳಿಗೆ ಪರಿಹಾರ

01:16 PM Aug 23, 2017 | |

ಕೂಡ್ಲಿಗಿ: ತಾಲೂಕಿನ ಹಳ್ಳಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ಸಾಮಾನ್ಯ. ಆದರೆ ಸಮಸ್ಯೆ ಏನೇ ಇರಲಿ ಎಲ್ಲವನ್ನೂ ಗಂಭೀರವಾಗಿ
ತೆಗೆದುಕೊಂಡು ಜನರಿಗೆ ಸ್ಪಂದಿಸುವುದು ನನ್ನ ಗುರಿಯಾಗಿದೆ ಎಂದು ಶಾಸಕ ಬಿ.ನಾಗೇಂದ್ರ ತಿಳಿಸಿದರು.

Advertisement

ಮಂಗಳವಾರ ತಾಲೂಕಿನ ಗುಡೇಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರೊಬಯ್ಯನಹಟ್ಟಿ ಗ್ರಾಮದಲ್ಲಿ “ನಮ್ಮ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿ ಸುವ ಕೆಲಸ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಸಹಕಾರ ನೀಡಿದರೆ ಮಾತ್ರ ಸಮಸ್ಯೆಗಳು ಬಗೆಹರಿಸಲು ಸಾಧ್ಯ.ಹೀಗಾಗಿ ಅಧಿ ಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಜನರ ಸೇವೆ ಮಾಡಲು ಮುಂದಾಗಿದ್ದೇನೆ ಎಂದರು.

ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಕುಗ್ರಾಮ ಅಥವಾ ಮೂಲೆಕಟ್ಟಿನ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ “ನಮ್ಮ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಆಯೋಜಿಸುತ್ತಿದ್ದು ಇಡೀ ತಾಲೂಕು ಆಡಳಿತ ಕುಗ್ರಾಮದ ಸಮಸ್ಯೆಗಳನ್ನು ತಿಳಿಯಲು ಮತ್ತು ಈ ಹಳ್ಳಿಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಯೋಜನೆ ತಯಾರಿಸಬೇಕು ಎಂಬುದು ತಿಳಿಯುತ್ತದೆ ಎಂದರು.

ತಾಪಂ ಇಒ ಮಂಜುನಾಥ್‌ ಮಾತನಾಡಿ, ತಾಲೂಕಿನ ಹಳ್ಳಿಗಾಡಿನ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಮೂಲೆಕಟ್ಟಿನ ಹಳ್ಳಿಗಳಲ್ಲಿ ಜನರಿಗೆ ಮೊದಲು ಅರಿವು ಮೂಡಿಸುವ ಕಾರ್ಯ ನಡೆಯಬೇಕು. ನಮ್ಮ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುವುದಲ್ಲದೇ, ಇಲ್ಲಿನ ಅನಕ್ಷರಸ್ಥರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು. ಜನಪ್ರತಿನಿಧಿಗಳ ಮೂಲಕ ತಮ್ಮೂರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಈ ಕಾರ್ಯಕ್ರಮದ ಮೂಲಕ ಸಾಧ್ಯವಾಗುತ್ತದೆ ಎಂದರು.

ಗುಡೇಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರೊಬಯ್ಯನಹಟ್ಟಿ ಹಾಗೂ ಲಿಂಗನಹಳ್ಳಿ ತಾಂಡಾ, ಶ್ರೀಕಂಠಾಪುರ ಮುಂತಾದ ಕಡೆಗಳಿಂದ ಹಳ್ಳಿಗಳ ಜನತೆ ಸಮಸ್ಯೆಗಳನ್ನು ತಂದು ಶಾಸಕರು ಹಾಗೂ ಜನಪ್ರತಿನಿಧಿ ಗಳ ಮುಂದಿಟ್ಟರು. ಹಳ್ಳಿಗಾಡಿನಲ್ಲಿ ವೃದ್ಧಾಪ್ಯ ವೇತನ, ಜಮೀನುಗಳಿಗೆ ದಾರಿಗಳ ಸಮಸ್ಯೆ, ಶೌಚಾಲಯ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯ ಸಮಸ್ಯೆಗಳೇ ಬಹುತೇಕ ಇದ್ದವು. ಕೆಲವು ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಶಾಸಕರು ಹಾಗೂ ಅಧಿಕಾರಿಗಳು ಚರ್ಚೆ ಮಾಡಿ ಪರಿಹಾರ ನೀಡಿದರು.

Advertisement

ತಾಪಂ ಅಧ್ಯಕ್ಷ ವೆಂಕಟೇಶ್‌ನಾಯ್ಕ, ತಹಶೀಲ್ದಾರ್‌ ಎಲ್‌. ಕೃಷ್ಣಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಚಾರ್‌,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೊತ್ಲಪ್ಪ, ಹಾಲು ಉತ್ಪಾದಕರ ಸಂಘದ ತಾಲೂಕು ಅಧಿಕಾರಿ ಮರುಳಸಿದ್ದಪ್ಪ, ಗುಡೇಕೋಟೆ ರಾಜಣ್ಣ, ರಾಮದುರ್ಗ ಸೂರ್ಯಪಾಪಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಪಿ.ಚಂದ್ರಮೌಳಿ, ಹುಡೇಂ ಜಿಪಂ ಸದಸ್ಯ ಎಚ್‌.ರೇವಣ್ಣ, ಗುಡೇಕೋಟೆ ನಾಗರಾಜ, ಜಯರಾಂ, ಲಿಂಗನಹಳ್ಳಿ ತಾಂಡಾದ ಅಂಬರೀಷ್‌ನಾಯ್ಕ, ಚಿಲುಮೆಹಳ್ಳಿ ವೆಂಕಟಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next